ಶಿವಮೊಗ್ಗ: ಹೊಸನಗರ ತಾಲೂಕು ಛಾಯಾಗ್ರಾಹಕರು ಅನಾಥಾಶ್ರಮಕ್ಕೆ ಅಕ್ಕಿ, ಬಿಸ್ಕೆಟ್ ನೀಡಿ ವಿಶೇಷವಾಗಿ ವಿಶ್ವ ಛಾಯಾಗ್ರಹಣ ದಿನಾಚರಣೆಯನ್ನು ಆಚರಿಸಿದ್ದಾರೆ.
ಹೊಸನಗರ ತಾಲೂಕು ಛಾಯಾಗ್ರಾಹಕರ ಸಂಘ, ಜೇನಿ ಬಳಿಯ ಪದ್ಮಾಶ್ರೀ ಅನಾಥಾಶ್ರಮಕ್ಕೆ ತೆರಳಿ ಅವಶ್ಯಕವಾದ 2 ಕ್ವಿಂಟಲ್ ಅಕ್ಕಿ, 10 ಪ್ಯಾಕೆಟ್ ಬಿಸ್ಕೆಟ್, ಹಾಲು ನೀಡಿದ್ದಾರೆ. ಪದ್ಮಾಶ್ರೀ ಅನಾಥಾಶ್ರಮವನ್ನು ಪ್ರಭಾಕರ್ ರವರು ನಡೆಸಿಕೊಂಡು ಬಂದಿದ್ದು, ತಮ್ಮ ಸ್ವಂತ ದುಡಿಮೆಯಲ್ಲಿಯೇ ಅನಾಥಾಶ್ರಮ ನಡೆಸುತ್ತಿದ್ದಾರೆ.
ಪ್ರಭಾಕರ್ ರವರಿಗೆ ಸಹಾಯವಾಗಲಿ ಎಂದು ತಾಲೂಕು ಛಾಯಾಗ್ರಾಹಕರ ಸಂಘ ಅಗತ್ಯ ವಸ್ತುಗಳನ್ನು ನೀಡಿದೆ. ಅಲ್ಲದೇ ಅನಾಥಾಶ್ರಮದ ಆವರಣದಲ್ಲಿ ಸಸಿ ನೆಡುವ ಮೂಲಕ ವಿಶ್ವ ಛಾಯಾಗ್ರಾಹಕರ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಿದರು.
ಈ ವೇಳೆ ತಾಲೂಕು ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಹರ್ಷ, ಪದಾಧಿಕಾರಿಗಳಾದ ದೀಪಕ್, ಸ್ವರೂಪ್ , ಅನ್ಸರ್, ಪಾಲಾಕ್ಷಿ, ಯೋಗೀಶ್, ಉತ್ತಮ ಕುಮಾರ್, ಈಶ, ಭರತ್, ಪ್ರದೀಪ ನಾಗರತ್ನ, ಕೃಷ್ಣಮೂರ್ತಿ ಹಾಜರಿದ್ದರು.