ಶಿವಮೊಗ್ಗ: ಅವೈಜ್ಞಾನಿಕ ಕಲ್ಲೋಡ್ಡು ಹಳ್ಳ ಯೋಜನೆ ಕೈಬಿಡುವಂತೆ ಆಗ್ರಹಿಸಿ ನಾಳೆ ಹೋರಾಟ ಸಮಿತಿ ವತಿಯಿಂದ ಪ್ರತಿಭಟನೆ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಲಾಗುವುದು ಎಂದು ಹೋರಾಟ ಸಮಿತಿ ಅಧ್ಯಕ್ಷ ಕೆ.ಸಿ.ಟಾಕಪ್ಪ ಎಚ್ಚರಿಕೆ ನೀಡಿದರು.
ಸಾಗರ ತಾಲೂಕಿನ ಮಜರೆಕುಂದೂರು ಬಳಿ ನಿರ್ಮಿಸಲು ಹೊರಟಿರುವ ಯೋಜನೆಯಿಂದ ನೂರಾರು ಕುಟುಂಬಗಳು ಅಲೆಮಾರಿಗಳಾಗುತ್ತವೆ. ಹಿಂದಿನ ಶರಾವತಿ ಯೋಜನೆಯಿಂದಾಗಿ ಸಂತ್ರಸ್ತರಾದವರೂ ಇಲ್ಲಿಯೇ ನೆಲೆ ಕಂಡುಕೊಂಡಿದ್ದಾರೆ. ಸರ್ಕಾರ ಮತ್ತೆ ನಮ್ಮನ್ನು ಬೀದಿಗೆ ತಳ್ಳುತ್ತದೆ ಎಂದು ದೂರಿದರು.