ETV Bharat / state

ಕಾಂಗ್ರೆಸ್​ ಒಡೆಯಲು ತೆಲಂಗಾಣ ಸಿಎಂ ಕೆಸಿಆರ್​ ಯಾಕೆ ಹಣ ಕೊಟ್ಟು ಕಳೆದು‌ಕೊಳ್ಳುತ್ತಾರೆ: ಕೆ ಎಸ್​ ಈಶ್ವರಪ್ಪ - KCR will lose by giving money to break Congress

ಕಾಂಗ್ರೆಸ್ ನವರು ಅವರವರೇ ಬಡಿದಾಡುಕೊಂಡು ಹಾಳಾಗ್ತಾರೆ - ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್​ ಯಾಕೆ ಹಣ ಕೊಡುತ್ತಾರೆ - ಮಾಜಿ ಸಚಿವ ಕೆ ಎಸ್​ ಈಶ್ವರಪ್ಪ ವ್ಯಂಗ್ಯ

Former minister KS Eshwarappa
ಮಾಜಿ ಸಚಿವ ಕೆಎಸ್​ ಈಶ್ವರಪ್ಪ
author img

By

Published : Jan 21, 2023, 5:22 PM IST

Updated : Jan 21, 2023, 5:34 PM IST

ಮಾಜಿ ಸಚಿವ ಕೆಎಸ್​ ಈಶ್ವರಪ್ಪ

ಶಿವಮೊಗ್ಗ: ಕಾಂಗ್ರೆಸ್ ಒಡೆಯಲು 500 ಕೋಟಿ ಯಾರು ಹಾಳು ಮಾಡುತ್ತಾರೆ ಗೊತ್ತಿಲ್ಲ. ಕಾಂಗ್ರೆಸ್ ನವರು ಅವರೇ ಒಡೆದಾಡಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್​ ಒಡೆಯಲು ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್​ ಯಾಕೆ ಹಣ ಕೊಟ್ಟು ಕಳೆದು‌ಕೊಳ್ಳುತ್ತಾರೆ ಎಂದು ಮಾಜಿ ಸಚಿವ ಕೆ ಎಸ್​ ಈಶ್ವರಪ್ಪ ವ್ಯಂಗ್ಯವಾಡಿದರು. ಶಿವಮೊಗ್ಗದ ಗುಂಡಪ್ಪ ಶೆಡ್ 162 ನೇ ಬೂತ್ ಬಿಜೆಪಿ ವಿಜಯ ಸಂಕಲ್ಪ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಾಂಗ್ರೆಸ್ ಒಡೆಯಲು 500 ಕೋಟಿ‌ ರೂಪಾಯಿ ಯಾರ್ ಖರ್ಚು ಮಾಡುತ್ತಾರೆ ಎಂದು ಪ್ರಶ್ನಿಸಿದರು.

ಫೆಬ್ರವರಿ 5 ರಂದು ಶಿವಮೊಗ್ಗದಲ್ಲಿ‌ ಪೇಜ್ ಪ್ರಮುಖರ ಸಮಾವೇಶ: ಕೆಸಿಆರ್ ಅವರು ಬಡವರ ಉದ್ಧಾರಕ್ಕಾಗಿ ಹಣ ವಿನಿಯೋಗಿಸಲಿ ಎಂದ ಅವರು, ಈಗ ಕಾಂಗ್ರೆಸ್, ಜೆಡಿಎಸ್ ತಮ್ಮ ಅಭ್ಯರ್ಥಿಗಳನ್ನು ಘೋಷಣೆ ಮಾಡುತ್ತಿದ್ದಾರೆ. ಆದರೆ ನಾವು ಬಿಜೆಪಿ ಸಂಘಟನೆ ಮೂಲಕ ಎದುರಿಸುತ್ತಿದ್ದೇವೆ. ಅಭ್ಯರ್ಥಿ ಬಗ್ಗೆ ಯಾರು ತಲೆಕೆಡಿಸಿಕೊಳ್ಳಲ್ಲ. ನಮಗೆ ನಮ್ಮ ಪಕ್ಷವೇ ಅಭ್ಯರ್ಥಿ. ಅಧಿಕಾರಕ್ಕೆ ತರಲು ಪ್ರತಿ ಬೂತ್, ಪೇಜ್ ಗಳಲ್ಲೂ ಕಾರ್ಯಕ್ರಮ ನಡೆಸುತ್ತಿದ್ದೇವೆ. ಫೆಬ್ರವರಿ 5 ರಂದು ಶಿವಮೊಗ್ಗದಲ್ಲಿ‌ ಪೇಜ್ ಪ್ರಮುಖರ ಸಮಾವೇಶ ನಡೆಸಲಾಗುತ್ತಿದೆ. ಈ ಸಮಾವೇಶದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ನಳೀನ ಕುಮಾರ್ ಕಟೀಲ್ ಭಾಗಿಯಾಗಲಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಪ್ರಥಮ ಬಾರಿಗೆ ಪೂರ್ಣ ಬಹುಮತ ಸಿಗುತ್ತದೆ ಎಂದು ಕೆ ಎಸ್​ ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಶಾಸಕರು ಕಾಂಗ್ರೆಸ್ ಸೇರುವ ಕುರಿತು ಡಿ.ಕೆ.ಶಿವಕುಮಾರ್ ಹೇಳಿಕೆಗೆ ಟಾಂಗ್​​ : 17 ಜನರು ಕಾಂಗ್ರೆಸ್ ನಿಂದ ಬಿಜೆಪಿಗೆ ಯಾಕೆ ಬಂದರು ಹೇಳಲಿ. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಬೊಗಳೆ ಹೊಡಿತಾ ಇದ್ದಾರೆ. ಸಾಯುವ ಪಾರ್ಟಿಗೆ ಯಾರಾದರು ಹೋಗುತ್ತಾರ ಎಂದು ಪ್ರಶ್ನಿಸಿದರು. ನಳೀನ ಕುಮಾರ್ ಕಟೀಲ್ ಬಗ್ಗೆ ಬಿಕೆ ಹರಿಪ್ರಸಾದ್ ಹೇಳಿಕೆಗೆ ಪ್ರತಿಕ್ರಿಯಿಸಿದ ಈಶ್ವರಪ್ಪ ಅವರು ಬಿಕೆ ಹರಿಪ್ರಸಾದ್ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ನಿಂತರು ಗೆಲ್ಲುವ ಶಕ್ತಿ ಇಲ್ಲ ಎಂದು ಟಾಂಗ್​ ಕೊಟ್ಟರು.

ಹೆಚ್ ವಿಶ್ವನಾಥ್ ಅವರಿಗೆ ಎಂಎಲ್​ಸಿ ಮಾಡಿದ್ದೇ ಬಿಜೆಪಿ, ಮಂತ್ರಿ ಆಗಬೇಕೆಂಬ ಆಸೆ ಅವರಿಗೆ ಇತ್ತು, ನಾವು ಮಾಡಿಲ್ಲ ಎಂದರು. ಅಸೆಂಬ್ಲಿ ಚುನಾವಣೆಗೆ ನಿಲ್ಲಬೇಡ ಅಂದರು ನಿಂತು ಸೋತರು. ಆದರೂ ಋಣ ತೀರಿಸಲು ಅವರನ್ನು ಎಂಎಲ್​ಸಿ ಮಾಡಿದ್ದೆವು. ಇನ್ನು, ಬಿಜೆಪಿ ಟಿಕೆಟ್ ಸಿಗುವುದಿಲ್ಲ ಅಂತ ಗೂತ್ತಾಯ್ತು. ಹೀಗಾಗಿ ಕಾಂಗ್ರೆಸ್ ಗೆ ಹೋಗ್ತಾ ಇದ್ದಾರೆ. ನಮ್ಮದೇನೂ ಅಭ್ಯಂತರವಿಲ್ಲ. ಅವರಿಗಿಂತ, ಅವರ ಮಕ್ಕಳಿಗೆ ಜಿಲ್ಲಾ ಪಂಚಾಯತ್ ಸೀಟು ಮತ್ತೇನನ್ನೋ ನೀಡುವ ಬಗ್ಗೆ ಸಿದ್ದರಾಮಯ್ಯ ಅವರಿಗೆ ಮಾತು ಕೊಟ್ಟಿರಬಹುದು ಎಂದರು.

ಬಿಜೆಪಿಗೆ ಬಂದಾಗ ಸಿದ್ದರಾಮಯ್ಯ ವಿರುದ್ಧ ಬಳಸಿದ ಭಾಷೆ ನೋಡಿದ್ದೇವೆ ಎಂದ ಅವರು, ಅದರ ಬಗ್ಗೆ ನಾನು ಟೀಕೆ ಮಾಡಲ್ಲ ಎಂದರು. ವಿಶ್ವನಾಥ್ ಹೋಗಿರುವುದಕ್ಕಿಂತ ಬಿಜೆಪಿಯಲ್ಲಿ ದೇಶ ಭಕ್ತರು ನಮ್ಮ ಜೊತೆ ಇದ್ದಾರೆ. ಹೀಗಾಗಿ ರಾಜ್ಯದಲ್ಲಿ ಬಿಜೆಪಿಗೆ ಪೂರ್ಣ ಬಹುಮತ ತರುತ್ತೇವೆ ಎಂದು ತಿಳಿಸಿದರು.

ಕಾಂಗ್ರೆಸ್ ಯೋಜನೆಗಳ ಘೋಷಣೆಗಳ ವಿಚಾರ : ಹಿಂದಿನಿಂದಲೂ ಕಾಂಗ್ರೆಸ್ ಘೋಷಣೆ ಮಾಡುತ್ತ ಬಂದಿದೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಕಾಲದಲ್ಲಿ ಗರೀಬಿ ಹಠಾವೋ ಘೋಷಣೆ ಆರಂಭವಾಗಿತ್ತು. ಯಾವಾಗ ಗರೀಬಿ ಹಠಾವೋ ಆಯ್ತು ಎಂದು ಈಶ್ವರಪ್ಪ ಪ್ರಶ್ನಿಸಿದರು. ಘೋಷಣೆ ಮಾಡಿದ ಯಾವ ಯೋಜನೆ ಜಾರಿಗೆ ತಂದಿದ್ದಾರೆ. ಚುನಾವಣೆಯಲ್ಲಿ ಎಷ್ಟಾದರೂ ಸೀಟ್ ಗೆಲ್ಲಬೇಕೆಂದು ಘೋಷಣೆ ಮಾಡಿದ್ದಾರೆ. ಬರೆದಿಟ್ಟುಕೊಳ್ಳಿ ಕಾಂಗ್ರೆಸ್ ಇರುವ ಸೀಟನ್ನು ಸಹ ಗೆಲ್ಲುವುದಿಲ್ಲ. ಕಳೆದ ಬಾರಿ 76 ಸೀಟಿನಲ್ಲಿ ಅನೇಕರು ಕಾಂಗ್ರೆಸ್ ಅನ್ನು ಬಿಟ್ಟು ಹೋದರು. ಇನ್ನೆಷ್ಟು ಜನ ಬಿಡುತ್ತಾರೂ ಗೂತ್ತಿಲ್ಲ. ಚುನಾವಣೆಯಲ್ಲಿ ನಿಲ್ಲಲು ಅವರಿಗೆ ಅಭ್ಯರ್ಥಿ ಸಿಗುವುದಿಲ್ಲ. ಘೋಷಣೆ ಮಾಡಿದ ತಕ್ಷಣ ಮತ ಸಿಗಲ್ಲ. ನಮಗೆ ಅವರಿಗಿಂತ ಒಳ್ಳೆಯ ಘೋಷಣೆ ಮಾಡಲು ಬರುತ್ತದೆ. ಆದ್ರೆ ನಾವು ಮಾಡಿದ ಘೋಷಣೆಗಳನ್ನು ಜಾರಿಗೆ ತರುತ್ತೇವೆ ಎಂದು ಹೇಳಿದರು.

ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟಿದ್ದೇವೆ. ಆರ್ಟಿಕಲ್ 375 ರದ್ದು ಮಾಡಿದ್ದೆವೆ. ಘೋಷಣೆಗಳನ್ನು ಮೀರಿ ಕೆಲಸ ಮಾಡಿದ್ದೇವೆ. ಕೊರೊನಾ ಕಾಲದಲ್ಲಿ ಆಹಾರ ಧಾನ್ಯ ನೀಡಿದ್ದೇವೆ. ಅದನ್ನು ಮೋದಿ ಅವರು ಇನ್ನೂಂದು ವರ್ಷ ವಿಸ್ತರಿಸಿದ್ದಾರೆ. ಇದು ಪ್ರಣಾಳಿಕೆಯಲ್ಲಿ ಹೇಳಿರಲಿಲ್ಲ. ಜನರ ಸಂಕಷ್ಟಕ್ಕೆ ತಕ್ಕಂತೆ ಕೆಲಸ ಮಾಡುತ್ತಿದ್ದೇವೆ. ಹೇಗಾದರು ಸರಿ ಗೆಲ್ಲಬೇಕೆಂದು ಇಂತಹ ಘೋಷಣೆಗಳನ್ನು ಮಾಡುತ್ತಿದ್ದಾರೆ. 70 ವರ್ಷ ಕಾಂಗ್ರೆಸ್ ಅಧಿಕಾರ ಮಾಡಿದೆ‌, ಅವರು ಕೆಲಸ‌ ಮಾಡಿಲ್ಲ ಅಂತ ಜನರು ಮೂಲೆಗೆ ತಳ್ಳಿದ್ದಾರೆ. ಮುಂದಿನ ವಿಧಾನಸಭೆ ಹಾಗೂ ಲೋಕಸಭೆಯಲ್ಲಿ ಕಾಂಗ್ರೆಸ್ ಸೋಲುತ್ತದೆ ಎಂದರು.

ಇದನ್ನೂ ಓದಿ:ಕಟೀಲ್ ನಾಲಿಗೆಯಲ್ಲಿ ಮೂಳೆ ಮಾತ್ರವಲ್ಲ, ನಿಯಂತ್ರಣವೂ ಇಲ್ಲ: ಡಿಕೆಶಿ

Last Updated : Jan 21, 2023, 5:34 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.