ETV Bharat / state

ಎಸ್​ಡಿಪಿಐ ಸಂಘಟನೆ ಷಡ್ಯಂತ್ರ ಮಾಡ್ತಿದೆ: ವಿಶ್ವ ಹಿಂದೂ ಪರಿಷತ್ - ಬಜರಂಗದಳ ಆರೋಪ - Vishwa Hindu Parishad protest at shimoga

ಕರಪತ್ರವೊಂದರಲ್ಲಿ 'ಮಹಾವೀರ ವೃತ್ತ' ಎಂದು ಹೆಸರಿಸುವ ಬದಲು 'ಷಾ ಅಲೀಂ ದಿವಾನ್ ದರ್ಗಾ ವೃತ್ತ' ಎಂದು ನಮೂದಿಸಿರುವ ಎಸ್​ಡಿಪಿಐ ಸಂಘಟನೆ ಷಡ್ಯಂತ್ರ ಮಾಡುತ್ತಿದೆ ಎಂದು ಆರೋಪಿಸಿರುವ ವಿಶ್ವ ಹಿಂದೂ ಪರಿಷತ್ - ಬಜರಂಗದಳ ಹಾಗೂ ಜೈನ ಸಮಾಜದ ಕಾರ್ಯಕರ್ತರು ಶಿವಮೊಗ್ಗದಲ್ಲಿ ಪ್ರತಿಭಟನೆ ನಡೆಸಿದರು.

Vishwa Hindu Parishad-Bajrang Dal protest in Shimoga
ವಿಶ್ವ ಹಿಂದೂ ಪರಿಷತ್-ಬಜರಂಗದಳ ಪ್ರತಿಭಟನೆ
author img

By

Published : Nov 3, 2020, 4:59 PM IST

ಶಿವಮೊಗ್ಗ: ಎಸ್​ಡಿಪಿಐ ಸಂಘಟನೆ ಕರಪತ್ರ ಒಂದರಲ್ಲಿ ಮಹಾವೀರ ವೃತ್ತ ಹೆಸರಿನ ಬದಲು ಷಾ ಅಲೀಂ ದಿವಾನ್ ದರ್ಗಾ ವೃತ್ತ ಎಂದು ಕಾನೂನುಬಾಹಿರವಾಗಿ ನಮೂದಿಸುವುದನ್ನು ವಿರೋಧಿಸಿ ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ವಿಶ್ವ ಹಿಂದೂ ಪರಿಷತ್ - ಬಜರಂಗದಳ ಹಾಗೂ ಜೈನ ಸಮಾಜದ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ವಿಶ್ವ ಹಿಂದೂ ಪರಿಷತ್ - ಬಜರಂಗದಳದ ಕಾರ್ಯಕರ್ತರಿಂದ ಪ್ರತಿಭಟನೆ

ಎಸ್​ಡಿಪಿಐ ಸಂಘಟನೆ ಅ. 31ರಂದು ಪ್ರತಿಭಟನೆ ಹಮ್ಮಿಕೊಂಡಿದ್ದ ಸಂದರ್ಭದಲ್ಲಿ ಕರಪತ್ರ ಹಂಚಿತ್ತು. ಕರಪತ್ರದಲ್ಲಿ ಮಹಾವೀರ ವೃತ್ತ ಎಂದು ಹೆಸರಿಸುವ ಬದಲು ಷಾ ಅಲೀಂ ದಿವಾನ್ ದರ್ಗಾ ವೃತ್ತ ಎಂದು ನಮೂದಿಸಿದೆ. ಇದು ಕಾನೂನು ವಿರೋಧವಾಗಿದೆ. ಐವತ್ತು ವರ್ಷಗಳ ಹಿಂದೆಯೇ ಸರ್ಕಾರ ವೃತ್ತವನ್ನು ಭಗವಾನ್ ಮಹಾವೀರ ವೃತ್ತ ಎಂದು ಘೋಷಣೆ ಮಾಡಿದೆ. ಆದರೆ, ಈ ಸಂಘಟನೆ ಈಗಿರುವ ಹೆಸರನ್ನು ಬದಲಾವಣೆ ಮಾಡಿಕೊಂಡು ಷಡ್ಯಂತ್ರ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಸ್​ಡಿಪಿಐ ಸಂಘಟನೆಯ ಪ್ರಮುಖ ಕಾರ್ಯಕರ್ತರ ಮೇಲೆ ಈ ಸಂಬಂಧ ಕಾನೂನು ರೀತಿಯ ಕ್ರಮ ಕೈಗೊಂಡು ಬಂಧಿಸಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.