ಶಿವಮೊಗ್ಗ: ''ಮಾಡಾಳ್ ವಿರುಪಾಕ್ಷಪ್ಪ ಗೃಹ ಸಚಿವ ಆರಗ ಜ್ಞಾನೇಂದ್ರ ಬಳಿ ಪಾಠ ಕಲಿತಿದ್ದರೇ ಅವರು ಸಿಕ್ಕಿಹಾಕಿಕೊಳ್ಳುತ್ತಿರಲಿಲ್ಲ'' ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ವ್ಯಂಗ ಮಾಡಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಆಲಿಬಾಬಾ ಮತ್ತು 40 ಕಳ್ಳರು ಎಂದು ನಾವೆಲ್ಲರೂ ಓದಿದ್ವಿ. ಈ ಸರ್ಕಾರ ಆಲಿಬಾಬಾ ಮತ್ತು 80 ಕಳ್ಳರು ರೀತಿ ಆಗಿದೆ. ಈ ಗುಂಪಿನಲ್ಲಿ ಸಚಿವರು ಮತ್ತು ನಿಗಮ ಮಂಡಳಿಯ ಅಧ್ಯಕ್ಷರು ಸೇರಿದ್ದಾರೆ ಎಂದರು.
ಬಿಜೆಪಿ ಸರ್ಕಾರ ವಜಾಗೊಳಿಸಬೇಕು: ''ಬಿಜೆಪಿ ಸರ್ಕಾರ ಭ್ರಷ್ಟಾಚಾರದ ಉಗಮ ಸ್ಥಾನ. ಒಂದು ರೀತಿಯಲ್ಲಿ ಕರ್ನಾಟಕದ ತೀರ್ಥಳ್ಳಿಯಲ್ಲಿ ಸಹ ಅದನ್ನೇ ಮಾಡುತ್ತಿದ್ದಾರೆ. ಮಾಡಾಳ್ ವಿರೂಪಾಕ್ಷಪ್ಪ ಸ್ವಲ್ಪ ದಡ್ಡರು ಅಂತ ಕಾಣುತ್ತೆ ಜ್ಞಾನೇಂದ್ರ ಅವರು ಬಳಿ ಪಾಠ ತೆಗೆದುಕೊಳ್ಳಬೇಕಿತ್ತು. ಜ್ಞಾನೇಂದ್ರ ಅವರು ಗೊತ್ತಾಗ್ದೆ ಇರೋ ತರ ನುಂಗುತ್ತಾರೆ. ತೀರ್ಥಹಳ್ಳಿ ಸಹ ಅದೇ ನಡೆಯುತ್ತಿದೆ. ನನ್ನ ಪ್ರಕಾರ ಸರ್ಕಾರವನ್ನು ವಜಾಗೊಳಿಸಬೇಕು ಅಥವಾ ರಾಜೀನಾಮೆ ನೀಡಬೇಕು. ಈ ಪ್ರಕರಣ ಹೊಣೆ ಹೊತ್ತು ಮುಖ್ಯಮಂತ್ರಿಗಳು ಸರ್ಕಾರ ವಜಾಗೊಳಿಸಿ ಧೈರ್ಯ ಇದ್ದರೆ, ಚುನಾವಣೆಗೆ ಹೋಗಬೇಕು'' ಎಂದು ಆಗ್ರಹಿಸಿದರು.
''ಪ್ರತಿ ಸಲ ಹಿಂದೂ- ಮುಸ್ಲಿಂ, ಜಾತಿ ವಿಚಾರ ಮಾತಾಡಲು ಹೋಗಿ ರಂಪಾ ಮಾಡುತ್ತಿದ್ದಾರೆ. ಎಲ್ಲಿ ಜಾತಿ ವಿಚಾರ, ಧರ್ಮ ಸಂಘರ್ಷ ಅನ್ವಯಿಸುವುದಿಲ್ಲವೋ ಅಲ್ಲಿ ದುಡ್ಡು ಚಲಾವಣೆ ಮಾಡುತ್ತಿದ್ದಾರೆ ಎಂದು ಅವರು, ಖಲಿಸ್ತಾನದ ಬಗ್ಗೆ ಇವರ ಉತ್ತರ ಏನು, ಮುಂದೆ ಮಹಾರಾಷ್ಟ್ರವನ್ನು ನಾವು ಶಿವಾಜಿ ನಾಡು ಮಾಡುತ್ತೇವೆ ಅಂತ ಹೋಗುತ್ತಾರೆ, ಆಗ ಇವರ ಉತ್ತರ ಏನು? ಏಕತೆಗೆ ಕಾಂಗ್ರೆಸ್ ಬೇಕಾ? ಬಿಜೆಪಿ ಬೇಕಾ'' ಎಂದು ಪ್ರಶ್ನಿಸಿದರು.
''ಬಿಹಾರ ಮತ್ತು ಉತ್ತರ ಪ್ರದೇಶವನ್ನು ಒಂದು ಮಾಡಿದರೆ 23 ಕೋಟಿ ಜನ ಆಗ್ತಾರೆ. ಆಗ ಶ್ರೀಕೃಷ್ಣನ ರಾಜ್ಯ ಮಾಡುತ್ತೇವೆ. ಎಂದರೆ ಇವರ ಉತ್ತರ ಏನಿದೆ. ಎಲ್ಲಾ ಜಾತಿ ಧರ್ಮದವರನ್ನ ಒಟ್ಟಾಗಿ ತೆಗೆದುಕೊಂಡು ಹೋಗ್ಬೇಕು ಎಂದು ಹೇಗೆ ಗಾಂಧಿ, ಅಂಬೇಡ್ಕರ್ ಹೇಗೆ ಹೇಳಿದ್ದಾರೋ, ಆ ದಾರಿಯಲ್ಲಿ ಹೋದ್ರೆ ಮಾತ್ರ ಈ ದೇಶದಲ್ಲಿ ಒಳ್ಳೆಯದಾಗುತ್ತೆ'' ಎಂದರು.
ಜಾತಿ, ಧರ್ಮ ಸಂಘರ್ಷದಲ್ಲಿ ತೊಡಗಿದ ಬಿಜೆಪಿ: ''ಜಾತಿ, ಧರ್ಮ ಸಂಘರ್ಷ ಮಾಡುತ್ತಾ ಹೋದ್ರೆ ದೇಶ ಒಂದಾಗಲು ಸಾಧ್ಯವಿಲ್ಲ. ಮತ್ತೆ ಅಧಿಕಾರ ಸಿಗುತ್ತೋ ಇಲ್ವೋ ಅಂತಾ ಎಲ್ಲರೂ ಹಣ ಲೂಟಿ ಹೊಡೆಯತ್ತಿದ್ದಾರೆ. ನಾನು ಹತ್ತು ವರ್ಷ ಎಂಎಲ್ಎ ಆಗಿದ್ದವನು. ನನ್ನ ಶರೀರದ ಮೇಲೆಯೂ ಸಾಲ ಇದೆ. ಪಿಎಸ್ಐ ಭ್ರಷ್ಟಾಚಾರದ ಬಗ್ಗೆ ಆರಗ ಜ್ಞಾನೇಂದ್ರ ಉತ್ತರ ಕೊಡಬೇಕು'' ಎಂದು ಸವಾಲು ಹಾಕಿದರು. ಸ್ಯಾಂಟ್ರೋ ರವಿ ಅವರ ಮಗನ ಜೊತೆ ಓಡಾಡುತ್ತಿದ್ದಾನೆ. ತೀರ್ಥಹಳ್ಳಿ ಅಕ್ಕಪಕ್ಕ ರೀಯಲ್ ಎಸ್ಟೇಟ್ ನಡಿದಿದೆ. ಅದರಲ್ಲಿ ಆರಗ ಷೇರು ಸಹ ಇದೆ'' ಎಂದು ಆರೋಪಿಸಿದರು.
''ಮಾನ ಮರ್ಯಾದೆ ಉಳಿಸಿಕೊಳ್ಳಬೇಕು ಎಂದರೇ ರಾಜೀನಾಮೆ ಕೊಟ್ಟು ಚುನಾವಣೆಗೆ ಹೋಗ್ಬೇಕು. ವಿರೂಪಾಕ್ಷಪ್ಪ ಅವರನ್ನು ಹಿಡಿಸಿದ್ದೇ ಬಿಜೆಪಿ ಅವರು. ಸಿಬಿಐಗೆ ಹಾಕಲಿ ಹೈಕೋರ್ಟ್, ಸುಪ್ರೀಂಕೋರ್ಟ್ ನ್ಯಾಯಾಧೀಶರ ಕೈಯಲ್ಲಿಯೇ ತನಿಖೆ ಮಾಡಿಸಲಿ'' ಎಂದು ಒತ್ತಾಯಿಸಿದರು.
ದೇಶವನ್ನು ಕೊಳ್ಳೆ ಹೊಡೆಯತ್ತಿರುವ ಬಿಜೆಪಿಯವರು: ''ಯಾವ ದೂರುಗಳಿಗೂ ಈ ಸರ್ಕಾರದಲ್ಲಿ ಮಾನ್ಯತೆ ಇಲ್ಲ. ಈ ದೇಶ ಉಳಿಯಬೇಕು ಎಂದರೆ ಮೋದಿ, ಶಾ ಮನೆಗೆ ಹೋಗ್ಬೇಕು ಇವರು ಉಳಿದುಕೊಂಡಿರುವುದೇ ಜಾತಿ ಸಂಘರ್ಷದ ಮೇಲೆ ಎಂದ ಅವರು, ಬಿಜೆಪಿ ಅವರು ಚುನಾವಣೆಗೋಸ್ಕರ ಮಾತ್ರ ದುಡ್ಡು ಮಾಡುತ್ತಿಲ್ಲ, ಅವರ ಮಕ್ಕಳು, ಮೊಮ್ಮಕ್ಕಳಿಗಾಗಿ ದುಡ್ಡು ಮಾಡುವ ಮೂಲಕ ದೇಶ ಕೊಳ್ಳೆ ಹೊಡೆಯತ್ತಿದ್ದಾರೆ'' ಎಂದು ಕಿಡಿಕಾರಿದರು.
ಇದನ್ನೂ ಓದಿ: ಸಿಎಂ ಸ್ಥಾನಕ್ಕೆ ಬೊಮ್ಮಾಯಿ ರಾಜೀನಾಮೆ ನೀಡಲೇಬೇಕು: ಸಿದ್ದರಾಮಯ್ಯ ಒತ್ತಾಯ