ಶಿವಮೊಗ್ಗ: ಮಾ ಡೆವಲಪರ್ಸ್ ಸಂಸ್ಥೆ ವತಿಯಿಂದ ಆಗಸ್ಟ್ 24ರಂದು ಸಂಜೆ 5 ಗಂಟೆಗೆ ಲಗಾನ್ ಮಂದಿರದಲ್ಲಿ 'ಹೇ ಮಗ ಶಿವಮೊಗ್ಗ' ಎಂಬ ಗೀತೆಯ ವಿಡಿಯೋ ಬಿಡುಗಡೆ ಮಾಡಲಾಗುವುದು ಎಂದು ಸಂಸ್ಥೆಯ ಮುಖ್ಯಸ್ಥೆ ಸುನೀತಾ ಸಿಂಗ್ ತಿಳಿಸಿದರು.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು 'ಹೇ ಮಗ ಶಿವಮೊಗ್ಗ ' ಗೀತೆಯ ಆಡಿಯೋ 1 ವರ್ಷದ ಹಿಂದೆ ಬಿಡುಗಡೆಯಾಗಿತ್ತು. ಈಗ ಅದನ್ನು ಚಿತ್ರೀಕರಣ ಮಾಡಿ ಪ್ರೇಕ್ಷಕರ ಮುಂದೆ ಇಡುತ್ತಿದ್ದೇವೆ ಎಂದರು. ಶಿವಮೊಗ್ಗದ ಇತಿಹಾಸ ಬಿಂಬಿಸುವುದರ ಜೊತೆಗೆ ಹಿಂದೂ ಧರ್ಮದ ಸಂಕೇತವಾಗಿ ಈ ವಿಡಿಯೋ ಬಿಡುಗಡೆ ಮಾಡಲಾಗುವುದು ಎಂದರು.
ಶಿವಮೊಗ್ಗದ ಸುಂದರ ಸ್ಥಳಗಳಾದ ಶಿವಪ್ಪನಾಯಕ ಅರಮನೆ, ಬಸ್ಸ್ಟಾಂಡ್, ಅಭಿವೃದ್ಧಿ ಕಟ್ಟಡಗಳು, ಜೋಗ ಜಲಪಾತ ಹೀಗೆ ಸಾಂಸ್ಕೃತಿಕವಾಗಿ ಶಿವಮೊಗ್ಗ ಜಿಲ್ಲೆಯನ್ನು ತೋರಿಸಲಾಗಿದೆ. ಇದರ ಜೊತೆಗೆ ಪ್ರಸಿದ್ಧ ದೇವಾಲಯಗಳಾದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ಸೇರಿದಂತೆ ಗಣೇಶೋತ್ಸವ ಅದರ ವಿಜೃಂಭಣೆ. ಶ್ರೀರಾಮ ಮಂದಿರ ಎಲ್ಲ ವಿಷಯಗಳನ್ನು ಈ ವಿಡಿಯೋ ಹೊಂದಿದೆ ಎಂದು ಹೇಳಿದ್ರು.