ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಸಾಗರದ ಸಾಹಿತಿ ನಾ ಡಿಸೋಜಾ ಅವರಿಗೆ ಎರಡು ಬೆದರಿಕೆ ಪತ್ರ ಬಂದಿದೆ. ಈ ಬೆದರಿಕೆ ಪತ್ರಗಳು ಬೇರೆ ಬೇರೆಯಾಗಿಯೇ ಬಂದಿದ್ದು, ಇದನ್ನು ನಾ ಡಿಸೋಜಾ ಬಹಿರಂಗಪಡಿಸಿದ್ದಾರೆ.
ಸಾಹಿತಿಗಳು ನೀವೆಲ್ಲಾ ರಾಜಸ್ಥಾನದಲ್ಲಿ ಹತ್ಯೆಯಾದ ಕನ್ನಯ್ಯ ಲಾಲ್ ಹಾಗೂ ಹಿಂದೂಗಳು ಕೊಲೆಯಾದಾಗ ಖಂಡಿಸುವುದಿಲ್ಲ. ಬದಲಿಗೆ ಮುಸ್ಲಿಮರ ಪರ ಅನುಕಂಪವನ್ನು ತೋರುತ್ತೀರಿ. ನಮ್ಮ ದೇಶದ ಹೋರಾಟಗಾರರ ಪಾಠವನ್ನು ಮಕ್ಕಳ ಪಠ್ಯ ಪುಸ್ತಕದಲ್ಲಿ ಸೇರಿಸಲು ಹೋದ್ರೆ ಅದಕ್ಕೆ ನಿಮ್ಮಂತ ಸಾಹಿತಿಗಳು ವಿರೋಧ ವ್ಯಕ್ತಪಡಿಸುತ್ತೀರಿ.

ನಮ್ಮ ದೇಶದ ಮೇಲೆ ಪಾಕಿಸ್ತಾನ, ಅಫ್ಘಾನಿಸ್ತಾನ ಸೇರಿದಂತೆ ಭಯೋತ್ಪಾದಕರು ದಾಳಿ ನಡೆಸಿ, ನಮ್ಮ ನಾಗರಿಕರನ್ನು, ಪೊಲೀಸರನ್ನು ಹಾಗೂ ಸೈನಿಕರನ್ನು ಕೊಂದು ಹಾಕುತ್ತಿರುವಾಗ ನೀವು ಸುಮ್ಮನೆ ಇರುತ್ತೀರಿ. ಪಠ್ಯದಲ್ಲಿ ನಮ್ಮ ದೇಶದ ಧರ್ಮದ ಪಾಠವನ್ನು ಸೇರಿಸಲು ಹೊರಟರೆ ನಮಗೆ ವಿರೋಧವನ್ನು ತೋರುತ್ತೀರಿ. ನಿಮಗೆ ಒಂದು ದಾರಿಯನ್ನು ತೋರುತ್ತೇವೆ ಎಂದು ಪತ್ರದಲ್ಲಿ ಬೆದರಿಕೆ ಹಾಕಲಾಗಿದೆ.
ಇದನ್ನೂ ಓದಿ: ನಾ. ಡಿಸೋಜಾರಿಗೆ ಬೆದರಿಕೆ ಪತ್ರ.. ಹಿರಿಯ ಸಾಹಿತಿಗೆ ಆತಂಕ