ಶಿವಮೊಗ್ಗ: ತುಂಗಾ ನಗರ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ನಾಲ್ವರು ಅಂತರ್‌ಜಿಲ್ಲಾ ಬೈಕ್ ಕಳ್ಳರನ್ನು ಅರೆಸ್ಟ್ ಮಾಡಿದ್ದಾರೆ.
ಭದ್ರಾವತಿಯ ಸುಹೇಲ್ ಪಾಷಾ, ಶಿವಮೊಗ್ಗ ನಗರದ ಮೊಹಮ್ಮದ್ ಹ್ಯಾರಿಸ್, ಫಜಲ್ ಹಾಗೂ ಸಾಹೀಲ್ ಶೇಟ್ ಬಂಧಿತರು. ಇವರ ವಿರುದ್ಧ ಜಿಲ್ಲೆಯ ವಿವಿಧ ಠಾಣೆಗಳಲ್ಲಿ 18ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳು ದಾಖಲಾಗಿವೆ.
ಇದರ ಜೊತೆಗೆ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ 02, ಚಿಕ್ಕಮಗಳೂರು ಜಿಲ್ಲೆಯ ಬೀರೂರು ಹಾಗೂ ಕಡೂರು ಪೊಲೀಸ್ ಠಾಣೆಯಲ್ಲಿ ತಲಾ 01 ಪ್ರಕರಣ ದಾಖಲಾಗಿದೆ. ಸುಮಾರು 10 ಲಕ್ಷ ರೂ ಮೌಲ್ಯದ 22 ಬೈಕ್ಗಳನ್ನು ವಶಕ್ಕೆ ಪಡೆದಿದ್ದಾರೆ.
ಶಿವಮೊಗ್ಗ ನಗರ ಡಿವೈಎಸ್ಪಿ ಪ್ರಶಾಂತ್ ನೇತೃತ್ವದಲ್ಲಿ ತುಂಗಾನಗರ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಇನ್ಸ್ಪೆಕ್ಟರ್ ದೀಪಕ್ ಹಾಗೂ ಸಿಬ್ಬಂದಿ ಭಾಗಿಯಾಗಿದ್ದರು.
ಇದನ್ನೂ ಓದಿ: Video: ಮಗುವಿನ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿ, ವಿಡಿಯೋ ಮಾಡಿದ ಹೆತ್ತಮ್ಮ