ETV Bharat / state

ಶಿವಮೊಗ್ಗ : ರೈಲು ಬೋಗಿಯಿಂದ ಜಾರಿಬಿದ್ದು ಅಪ್ಪ ಮಗ ಸಾವು - ಈಟಿವಿ ಭಾರತ್​ ಕನ್ನಡ

ರೈಲು​ ಹತ್ತುವ ವೇಳೆ ಕಾಲು ಜಾರಿ ಪ್ಲಾಟ್‌ ಫಾರಂಗೆ ಬಿದ್ದು ತಂದೆ ಮತ್ತು ಮಗ ಮೃತ ಪಟ್ಟಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

train accident father and son death in Shivamogga
ಶಿವಮೊಗ್ಗ : ಬೋಗಿಯಿಂದ ಜಾರಿಬಿದ್ದು ಅಪ್ಪ, ಮಗ ಸಾವು
author img

By

Published : Sep 13, 2022, 12:51 PM IST

ಶಿವಮೊಗ್ಗ: ತಾಳಗುಪ್ಪ- ಮೈಸೂರು ರೈಲು ಹತ್ತುವಾಗ ಕಾಲು ಜಾರಿ ಬಿದ್ದು ತಂದೆ ಮತ್ತು ಮಗ ಮೃತಪಟ್ಟ ದಾರುಣ ಘಟನೆ ಭಾನುವಾರ ರಾತ್ರಿ ನಡೆದಿದೆ. ಬೆಂಗಳೂರಿನಲ್ಲಿ ವಾಸವಾಗಿದ್ದ ಮೋಹನ್‌ ಪ್ರಸಾದ್‌(70), ಅಮರನಾಥ್‌ (38) ಮೃತರು. ಮೋಹನ್‌ ಪ್ರಸಾದ್‌ ಅವರು ವಿಐಎಸ್‌ಎಲ್‌ ನಿವೃತ್ತ ನೌಕರರಾಗಿದ್ದಾರೆ. ಮಗ ರಾಜೇಂದ್ರ ಪ್ರಸಾದ್‌ ಅವರು ಕಾಗದ ನಗರದಲ್ಲಿ ಈಶ್ವರ ದೇವಸ್ಥಾನದ ಅರ್ಚಕರಾಗಿದ್ದಾರೆ.

ಅವರ ಮನೆಗೆ ಬಂದು ವಾಪಸ್‌ ತೆರಳುವಾಗ ಈ ಘಟನೆ ಸಂಭವಿಸಿದೆ. ಪ್ಲಾಟ್‌ ಫಾರಂ 1ರಲ್ಲಿರಾತ್ರಿ ರೈಲು ಹತ್ತುವಾಗ ಮಗ ಮೊದಲು ಕಾಲು ಜಾರಿ ಬಿದ್ದಿದ್ದಾರೆ. ನಂತರ ಆತನ ರಕ್ಷಣೆಗೆ ಮುಂದಾದ ತಂದೆಯೂ ಕಾಲು ಜಾರಿ ಪ್ಲಾಟ್‌ ಫಾರಂಗೆ ಬಿದ್ದಿದ್ದಾರೆ. ಅಮರನಾಥ್‌ ಅವರ ತಲೆಗೆ ಗಂಭೀರ ಗಾಯವಾಗಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೋಹನ್‌ ಅವರನ್ನು ತಕ್ಷಣ ಭದ್ರಾವತಿಯ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮೆಗ್ಗಾನ್‌ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿನ ವೈದ್ಯರ ಸಲಹೆಯಂತೆ ಬೆಂಗಳೂರಿಗೆ ಕರೆತರುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಶಿವಮೊಗ್ಗ ರೈಲ್ವೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಅಥಣಿ ಹೆಸ್ಕಾಂ ನೌಕರನ ಆತ್ಮಹತ್ಯೆ ಕೇಸ್​.. ಡೆತ್​ ನೋಟ್​ನಿಂದ ಪ್ರಕರಣಕ್ಕೆ ಟ್ವಿಸ್ಟ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.