ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಈ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ದೂರನ್ನು ದಾಖಲಿಸಲಾಗಿದೆ. ಹಿಂದಿನ ಮತ್ತು ಈಗ ಬಂದಿರುವ ನೂತನ ಎಸ್ಪಿ ಅವರನ್ನು ಖುದ್ದು ಭೇಟಿ ಮಾಡಿ ಕ್ರಮ ಕೈಗೊಳ್ಳಲು ಒತ್ತಾಯಿಸಲಾಗಿದೆ ಎಂದರು.
ಬಂಧಿಸುವ ಭರವಸೆ ನೀಡಿದ್ದ ಪೊಲೀಸರು ಇದುವರೆಗೂ ಯಾರನ್ನೂ ಸಹ ಬಂಧಿಸಿಲ್ಲ. ಹಾಗಾಗಿ ನಾಳೆ ಮತ್ತೆ ಜಿಲ್ಲಾಡಳಿತಕ್ಕೆ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಲಿದ್ದೇವೆ. ಪೊಲೀಸ್ ಇಲಾಖೆ ಯಾವುದೇ ಒತ್ತಡಕ್ಕೆ ಮಣಿಯಬಾರದು ಅಕಸ್ಮಾತ್ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದೇ ಇದ್ದರೆ ಸರ್ಕಾರಿ ನೌಕರರ ಸಂಘದಿಂದ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ಷಡಾಕ್ಷರಿ ನೀಡಿದರು.