ETV Bharat / state

ಶಿಮುಲ್ ಚಿತ್ತ ಹೈದರಾಬಾದ್​​ನತ್ತ... 1 ಲಕ್ಷ ಲೀಟರ್ ಹಾಲು ಮಾರಾಟದ ಗುರಿ

author img

By

Published : Jun 27, 2020, 5:40 PM IST

ಶಿವಮೊಗ್ಗ, ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಯನ್ನೊಳಗೊಂಡ ಶಿವಮೊಗ್ಗ ಹಾಲು ಒಕ್ಕೂಟದಲ್ಲಿ ಪ್ರತಿದಿನ ಬರೋಬ್ಬರಿ 6.4 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಆದರೆ ಮಾರಾಟಾಗುತ್ತಿರುವುದು 2 ಲಕ್ಷ ಲೀಟರ್ ಹಾಲು ಮಾತ್ರ.

Thought to sell 1 lakh liters of milk
ಶಿಮುಲ್

ಶಿವಮೊಗ್ಗ: ಹಾಲು ಒಕ್ಕೂಟ(ಶಿಮುಲ್)ನಲ್ಲಿ ಹಾಲು ಉತ್ಪಾದನೆ ಲಾಕ್​ಡೌನ್ ಬಳಿಕ ಗಣನೀಯವಾಗಿ ಹೆಚ್ಚಾಗಿದ್ದು, ಹಾಲನ್ನು ಮಾರಾಟ ಮಾಡುವುದೇ ಶಿಮುಲ್​ಗೆ ಸವಾಲಾಗಿ ಪರಿಣಮಿಸಿದೆ. ಇದಕ್ಕಾಗಿ ಹೈದರಾಬಾದ್​ನಲ್ಲಿ ತನ್ನದೇ ಆದ ಮಾರುಕಟ್ಟೆ ರೂಪಿಸಿಕೊಳ್ಳಲು ಶಿಮುಲ್ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದೆ. ಎಲ್ಲವೂ ಅಂದುಕೊಂಡಂತೆ ಆದಲ್ಲಿ ಇನ್ನು ಕೆಲವೇ ತಿಂಗಳಲ್ಲಿ ನಿಜಾಮರ ನಾಡಲ್ಲಿ ಶಿಮುಲ್​ನ ನಂದಿನಿ ಹಾಲು ಮಾರಾಟವಾಗಲಿದೆ.

ಶಿವಮೊಗ್ಗ, ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಯನ್ನೊಳಗೊಂಡ ಶಿವಮೊಗ್ಗ ಹಾಲು ಒಕ್ಕೂಟದಲ್ಲಿ ಪ್ರತಿದಿನ ಬರೋಬ್ಬರಿ 6.4 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಆದರೆ ಮಾರಾಟಾಗುತ್ತಿರುವುದು 2 ಲಕ್ಷ ಲೀಟರ್ ಹಾಲು ಮಾತ್ರ. ಇನ್ನೂ ಒಂದು ಲಕ್ಷ ಲೀಟರ್ ಹಾಲನ್ನು ಬೇರೆ ಡೈರಿಗಳಿಗೆ ನೀಡಲಾಗುತ್ತಿದೆ. ಆದರೂ ಇನ್ನೂ 3.4 ಲಕ್ಷ ಲೀಟರ್ ಹಾಲು ಹಾಗೆಯೇ ಉಳಿಯುತ್ತಿದೆ. ಹಾಗಾಗಿ ಈ ಹಾಲನ್ನು ಮಾರಾಟ ಮಾಡುವ ಸಲುವಾಗಿ ಹೈದರಾಬಾದ್ ಮಾರುಕಟ್ಟೆಗೆ ಕಾಲಿಡಲು ಶಿಮುಲ್ ನಿರ್ಧರಿಸಿದೆ. ಜೊತೆಗೆ ಇಲ್ಲಿನ ಅಧಿಕಾರಿಗಳು ಹೈದರಾಬಾದ್​ಗೆ ತೆರಳಿ ಅಲ್ಲಿ ಸೂಕ್ತ ಮಾರುಕಟ್ಟೆಯನ್ನು ಮಾಡಲು ಸಿದ್ಧತೆ ಆರಂಭಿಸಿದ್ದಾರೆ.

ಈಟಿವಿ ಭಾರತೊಂದಿಗೆ ಮಾತನಾಡಿದ ಶಿಮುಲ್​ ಅಧ್ಯಕ್ಷ

ಹೈದರಾಬಾದ್​ನಲ್ಲಿ ಆರಂಭದಲ್ಲಿ 20 ಸಾವಿರ ಲೀಟರ್ ಹಾಲನ್ನು ಪ್ರತಿದಿನ ಮಾರಾಟ ಮಾಡಲು ಶಿಮುಲ್ ಯೋಜನೆ ಸಿದ್ಧಪಡಿಸಿದೆ. ಆರಂಭದಲ್ಲಿ ಸಣ್ಣದಾಗಿ ಮಾರುಕಟ್ಟೆ ಸೃಷ್ಟಿಸಿಕೊಂಡು ನಂತರದಲ್ಲಿ ಮಾರುಕಟ್ಟೆ ವಿಸ್ತರಿಸಲು ತೀರ್ಮಾನಿಸಲಾಗಿದೆ. ಒಟ್ಟಾರೆ ಪ್ರತಿದಿನ ಒಂದು ಲಕ್ಷ ಲೀಟರ್ ಹಾಲನ್ನು ಹೈದರಾಬಾದ್​ನಲ್ಲಿ ಮಾರಾಟ ಮಾಡುವ ಗುರಿಯನ್ನು ಶಿಮುಲ್ ಹೊಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.