ಶಿವಮೊಗ್ಗ: ಜಿಲ್ಲಾ ರಂಗಕರ್ಮಿಗಳು, ಸಾಹಿತಿಗಳು ಮತ್ತು ಪರಿಸರವಾದಿಗಳು ಇಂದು ವಿಭಿನ್ನ ವೇಷ ಭೂಷಣ ಧರಿಸಿಕೊಂಡು ಬಂದು ಸಿಎಎ ಬೆಂಬಲಿಸಿ, ಡಿಸಿ ಮುಖಾಂತರ ಪ್ರಧಾನ ಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಹೌದು, ಶಿವಮೊಗ್ಗ ಜಿಲ್ಲಾ ರಂಗಕರ್ಮಿಗಳು, ಸಾಹಿತಿಗಳು ಮತ್ತು ಪರಿಸರವಾದಿಗಳು ಇಂದು ಪೌರತ್ವ ತಿದ್ದುಪಡಿ-2019 ಅನ್ನು ಬೆಂಬಲಿಸಿ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿರವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪೌರತ್ವ ತಿದ್ದುಪಡಿ ಜಾರಿಗೆ ತಂದ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ರವರಿಗೆ ಜೈಕಾರ ಹಾಕಿ ಅಭಿನಂದನೆ ಸಲ್ಲಿಸಲಾಯಿತು. ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿನ ಅಲ್ಪಸಂಖ್ಯಾತರಿಗೆ ಭಾರತದ ಪೌರತ್ವ ನೀಡುವ ಕಾಯಿದೆಯನ್ನು ಜಾರಿಗೆ ತಂದ್ರೆ ಅಲ್ಲಿನ ಅಲ್ಪ ಸಂಖ್ಯಾತರಿಗೆ ಇಲ್ಲಿ ಒಂದು ನೆಲೆ ಸಿಗುತ್ತದೆ. ಭಾರತದ ಅವಿಭಾಜ್ಯ ಅಂಗವಾಗಿದ್ದ ಮೂರು ದೇಶಗಳಲ್ಲಿ ಹಿಂದೂಗಳು ಸೇರಿದಂತೆ ಇತರೆ ಪಾರ್ಸಿ, ಬೌದ್ದರು , ಸಿಖ್, ಜೈನರಿಗೆ ರಕ್ಷಣೆ ಇಲ್ಲ. ಈ ಕಾಯ್ದೆಯಿಂದ ಎಲ್ಲರಿಗೂ ಒಳ್ಳೆಯದಾಗುತ್ತದೆ ಎಂದಿದ್ದಾರೆ.