ETV Bharat / state

ಸರ್ಕಾರ ಮುಜರಾಯಿ ದೇವಸ್ಥಾನ ಆದಾಯ ದೇವಸ್ಥಾನಗಳಿಗಷ್ಟೇ ವಿನಿಯೋಗಿಸಲಿ.. - ವಿಶ್ವ ಹಿಂದೂ ಪರಿಷತ್​ನ ಜಿಲ್ಲಾಧ್ಯಕ್ಷ

ಮುಜರಾಯಿ ದೇವಸ್ಥಾನಗಳ ಅಧೀನದಲ್ಲಿರುವ ದೇವಾಲಯಗಳ ಆದಾಯ ದೇವಸ್ಥಾನಗಳಿಗೆ ಮಾತ್ರ ವಿನಿಯೋಗವಾಗಬೇಕು. ಈ ಹಣ ಅನ್ಯ ಉದ್ದೇಶಗಳಿಗೆ ಬಳಕೆಯಾಗಬಾರದೆಂದು ವಿಶ್ವ ಹಿಂದೂ ಪರಿಷತ್​ನ ಜಿಲ್ಲಾಧ್ಯಕ್ಷ ಹೆಚ್​ ಬಿ ರಮೇಶ್​ಬಾಬು ಜಾಧವ್ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ವಿಶ್ವ ಹಿಂದೂ ಪರಿಷತ್​ನ ಜಿಲ್ಲಾಧ್ಯಕ್ಷ ಹೆಚ್​.ಬಿ ರಮೇಶ್​ಬಾಬು ಜಾದವ್
author img

By

Published : Aug 28, 2019, 1:36 PM IST

ಶಿವಮೊಗ್ಗ: ಮುಜರಾಯಿ ದೇವಸ್ಥಾನಗಳ ಅಧೀನದಲ್ಲಿರುವ ದೇವಾಲಯಗಳ ಆದಾಯ ದೇವಸ್ಥಾನಗಳಿಗೆ ಮಾತ್ರ ವಿನಿಯೋಗವಾಗಬೇಕು. ಈ ಹಣ ಅನ್ಯ ಉದ್ದೇಶಗಳಿಗೆ ಬಳಕೆಯಾಗಬಾರದು. ಇದರ ಜೊತೆ ಚರ್ಚ್ ಮತ್ತು ಮಸೀದಿಗಳನ್ನು ಮುಜರಾಯಿ ಅಥವಾ ಸರ್ಕಾರದ ಅಧೀನಕ್ಕೆ ಒಳಪಡಿಸಬೇಕೆಂದು ವಿಶ್ವ ಹಿಂದೂ ಪರಿಷತ್​ನ ಜಿಲ್ಲಾಧ್ಯಕ್ಷ ಹೆಚ್​ ಬಿ ರಮೇಶ್​ಬಾಬು ಜಾಧವ್ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಮುಜರಾಯಿ ದೇವಸ್ಥಾನ ಆದಾಯ ದೇವಸ್ಥಾನಗಳಿಗಷ್ಟೇ ವಿನಿಯೋಗವಾಗಲಿ..

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಮೇಶ್​ಬಾಬು, ಮುಜರಾಯಿ ಆಡಳಿತಕ್ಕೆ ಒಳಪಟ್ಟ ದೇವಸ್ಥಾನಗಳ ಕಾಣಿಕೆ ಹುಂಡಿ ಸೇರಿದಂತೆ ಭಕ್ತಾದಿಗಳಿಂದ ನೀಡಲ್ಪಟ್ಟ ಹಣವನ್ನು ಸರ್ಕಾರ ದೇವಸ್ಥಾನಗಳ ಅಭಿವೃದ್ಧಿಗೆ ಬಳಸದೆ ಅನ್ಯ ಉದ್ದೇಶಗಳಿಗೆ ಬಳಸುತ್ತಿದೆ. ಈ ಕ್ರಮ ಮುಂದುವರಿಯಬಾರದು ಎಂದರು. ಅಷ್ಟೇ ಅಲ್ಲ, ಮಸೀದಿಗಳಲ್ಲಿ ವಕ್ಫ್ ವತಿಯಿಂದ ಮೌಲ್ವಿಗಳಿಗೆ ಉತ್ತಮ ಪ್ರಮಾಣದ ವೇತನವನ್ನು ನೀಡಲಾಗುತ್ತಿದೆ. ಆದರೆ, ಮುಜರಾಯಿ ಇಲಾಖೆಗೆ ಒಳಪಟ್ಟ ದೇವಸ್ಥಾನಗಳ ಅರ್ಚಕರಿಗೆ ಕನಿಷ್ಠ ವೇತನ ನೀಡಲಾಗುತ್ತಿದೆ. ಈ ಬಗ್ಗೆ ಸರ್ಕಾರ ಗಮನ ಹರಿಸಬೇಕೆಂದು ಒತ್ತಾಯಿಸಿದರು.

ಜೊತೆಗೆ ಕೇಂದ್ರ ಸರ್ಕಾರ ಜಮ್ಮು-ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದು ಮಾಡಿರುವುದು ಸ್ವಾಗತಾರ್ಹ. ಹಾಗೆಯೇ ಆದಷ್ಟು ಬೇಗ ದೇಶಾದ್ಯಂತ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸಬೇಕು ಹಾಗೂ ಗೋಹತ್ಯೆ ನಿಷೇಧವನ್ನು ಕಾಯ್ದೆಯಾಗಿ ಮಾಡಬೇಕು ಎಂದು ಒತ್ತಾಯಿಸಿದರು.

Intro:ಶಿವಮೊಗ್ಗ,
ಮುಜರಾಯಿ ದೇವಸ್ಥಾನಗಳ ಅಧೀನದಲ್ಲಿರುವ ದೇವಾಲಯಗಳ ಆದಾಯ ದೇವಸ್ಥಾನಗಳಿಗೆ ವಿನಿಯೋಗವಾಗಬೇಕು.
ಈ ಹಣ ಅನ್ಯ ಉದ್ದೇಶಗಳಿಗೆ ಬಳಕೆಯಾಗಬಾರದು ಇದರ ಜೊತೆ ಚರ್ಚ್ ಮತ್ತು ಮಸೀದಿಗಳನ್ನು ಮುಜರಾಯಿ ಅಥವಾ ಸರ್ಕಾರದ ಅಧೀನಕ್ಕೆ ಒಳಪಡಿಸಬೇಕು ಎಂದು ವಿಶ್ವ ಹಿಂದೂ ಪರಿಷತ್ ನ ಜಿಲ್ಲಾಧ್ಯಕ್ಷ ಹೆಚ್ ಬಿ ರಮೇಶ್ಬಾಬು ಜಾದವ್ ಸರ್ಕಾರಗಳನ್ನು ಒತ್ತಾಯಿಸಿದ್ದಾರೆ.

Body:ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಮುಜರಾಯಿ ಆಡಳಿತಕ್ಕೆ ಒಳಪಟ್ಟ ದೇವಸ್ಥಾನಗಳ ಕಾಣಿಕೆ ಹುಂಡಿ ಸೇರಿದಂತೆ ಭಕ್ತಾದಿಗಳಿಂದ ನೀಡಲ್ಪಟ್ಟ ಹಣವನ್ನು ಸರ್ಕಾರ ದೇವಸ್ಥಾನಗಳ ಅಭಿವೃದ್ಧಿಗೆ ಬಳಸದೆ ಅನ್ಯ ಉದ್ದೇಶಗಳಿಗೆ ಬಳಸುತ್ತಿದೆ.ಈ ಕ್ರಮ ಮುಂದುವರಿಯಬಾರದು ಎಂದರು.
ಮಸೀದಿಗಳಲ್ಲಿ ವಕ್ಫ್ ವತಿಯಿಂದ ಮೌಲ್ವಿಗಳಿಗೆ ಉತ್ತಮ ಪ್ರಮಾಣದ ವೇತನವನ್ನು ನೀಡಲಾಗುತ್ತಿದೆ.
ಆದರೆ ಮುಜರಾಯಿ ಇಲಾಖೆಗೆ ಒಳಪಟ್ಟ ದೇವಸ್ಥಾನಗಳ ಅರ್ಚಕರ ಕನಿಷ್ಠ ವೇತನ ನೀಡಲಾಗುತ್ತಿದೆ ಈ ಬಗ್ಗೆ ಸರ್ಕಾರ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.

Conclusion:ಕೇಂದ್ರ ಸರ್ಕಾರ ಜಮ್ಮು-ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದು ಮಾಡಿರುವುದು ಸ್ವಾಗತಾರ್ಹ. ಹಾಗೆಯೇ ಆದಷ್ಟು ಬೇಗ ದೇಶಾದ್ಯಂತ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸಬೇಕು, ಹಾಗೂ ಗೋಹತ್ಯೆ ನಿಷೇಧವನ್ನು ಕಾಯ್ದೆಯಾಗಿ ಮಾಡಬೇಕು ಎಂದು ಒತ್ತಾಯಿಸಿದರು.
ಭೀಮಾನಾಯ್ಕ ಎಸ್ ಶಿವಮೊಗ್ಗ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.