ಶಿವಮೊಗ್ಗ: ಶಿಕಾರಿಪುರ ತಾಲೂಕು ನೀರಾವರಿ ಆಗುತ್ತಿರುವುದು ನನ್ನ ಜೀವನದ ಅತ್ಯಂತ ಸಂತೋಷದ ಕ್ಷಣವಾಗಿದೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸಂತಸ ವ್ಯಕ್ತಪಡಿಸಿದ್ದಾರೆ.
ಶಿಕಾರಿಪುರ ತಾಲೂಕಿನ ಉಡುಗಣಿ, ತಾಳಗುಂದ ಹಾಗೂ ಹೊಸೂರು ಹೋಬಳಿಗಳಿಗೆ ಏತ ನೀರಾವರಿ ಯೋಜನೆಯ ನೀರು ಬರುವ ಅಡಗಂಟಿ ಗ್ರಾಮದ ಬಳಿ ಬಾಗಿನ ಅರ್ಪಿಸಿ ಮಾತನಾಡಿದ ಅವರು, ಶಿಕಾರಿಪುರ ತಾಲೂಕನ್ನು ಬರದ ನಾಡು ಎಂಬ ಅಣೆಪಟ್ಟಿಯನ್ನು ಕಳಚಿ ಹಾಕಬೇಕೆಂಬ ಪಣತೂಟ್ಟು 1500 ಕೋಟಿಯಲ್ಲಿ ಏತ ನೀರಾವರಿ ಯೋಜನೆ ಜಾರಿ ಮಾಡಲಾಗಿದೆ ಎಂದರು.
ಈ ಯೋಜನೆಯನ್ನು ಒಂದೂಕಾಲು ವರ್ಷದಲ್ಲಿ ಪೂರ್ಣ ಮಾಡಲಾಗಿದೆ. ಇದಕ್ಕಾಗಿ ತುಂಗಾಭದ್ರಾ ನದಿಯಿಂದ ನೀರನ್ನು ತಂದು 159 ಕೆರೆಗಳನ್ನು ತುಂಬಿಸಲಾಗುತ್ತದೆ. ಇದರಿಂದ ವರ್ಷದ 365 ದಿನವೂ ಸಹ ನೀರು ಹರಿಯುತ್ತಿರುತ್ತದೆ. ಈ ಭಾಗದ ರೈತರು ನೆಮ್ಮದಿಯಿಂದ ಉಳುಮೆ ಮಾಡಬಹುದಾಗಿದೆ ಎಂದು ಹೇಳಿದರು.
ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ತಾಳಗುಂದ, ಹೊಸೂರು ಹಾಗೂ ಉಡುಗಣಿ ಭಾಗದ ರೈತರು ಇನ್ನೂ ಮುಂದೆ ನೆಮ್ಮದಿಯಿಂದ ಜೀವನ ಸಾಗಿಸ ಬಹುದಾಗಿದೆ. ಕೃಷಿ ಚಟವಟಿಕೆಗಳಿಗೆ ಮೂಲ ನೀರು ಇದನ್ನು ರೈತ ಕ್ಷೇಮಕ್ಕಾಗಿ ಮಾಡಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಚಾಮರಾಜನಗರದಲ್ಲಿ ಒಂದು ತಿಂಗಳು ಎಲ್ಲ ರೀತಿಯ ಗಣಿಗಾರಿಕೆ ಬಂದ್: ಸಚಿವ ವಿ.ಸೋಮಣ್ಣ