ETV Bharat / state

ಗೊಂದಲದಲ್ಲಿಯೇ ಮುಗಿದ ಪ್ರದೇಶ ಕುರುಬರ ಸಂಘದ ನಿರ್ದೇಶಕರ ಚುನಾವಣೆ - ಗೊಂದಲದಲ್ಲಿಯೇ ಮುಗಿದ ಪ್ರದೇಶ ಕುರುಬರ ಸಂಘದ ನಿರ್ದೇಶಕರ ಚುನಾವಣೆ

ಕರ್ನಾಟಕ ಪ್ರದೇಶ ಕುರುಬರ ಸಂಘದ ಚುನಾವಣೆ ಗೊಂದಲದಲ್ಲಿಯೇ ಮುಕ್ತಾಯ ಕಂಡಿದೆ. ಮತ ಎಣಕೆ ವೇಳೆ ಮುರುಗೇಶ್, ಮತಪತ್ರದಲ್ಲಿ ಮತದಾನ ಮಾಡಿದವರು ತಮ್ಮ ಹೆಬ್ಬೆಟ್ಟು ಹಾಕಿರುವುದನ್ನು ಪರಿಗಣಿಸಬೇಕು ಎಂದು ತಗಾದೆ ತೆಗೆದರು.

election of the directors of the shepherds association
ಪ್ರದೇಶ ಕುರುಬರ ಸಂಘದ ನಿರ್ದೇಶಕರ ಚುನಾವಣೆ
author img

By

Published : Jan 13, 2020, 11:02 AM IST

ಶಿವಮೊಗ್ಗ: ಕರ್ನಾಟಕ ಪ್ರದೇಶ ಕುರುಬರ ಸಂಘದ ಚುನಾವಣೆ ಗೊಂದಲದಲ್ಲಿಯೇ ಮುಕ್ತಾಯ ಕಂಡಿದೆ. ಡಿಸೆಂಬರ್​​ನಲ್ಲಿ ನಡೆಯಬೇಕಿದ್ದ ಚುನಾವಣೆಯು ಮತಪತ್ರಗಳ ಗೊಂದಲದಿಂದ ನಿನ್ನೆಗೆ ಮುಂದೂಡಲಾಗಿತ್ತು.

ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಳ್ಳದ ಕಾರಣ ಹಲವು ಗೊಂದಲಗಳಿಂದ ಚುನಾವಣೆ ಮುಕ್ತಾಯ ಕಂಡಿತು. ಜಿಲ್ಲೆಯಿಂದ ಮೂರು ಪುರುಷ ನಿರ್ದೇಶಕರು ಹಾಗೂ ಓರ್ವ ಮಹಿಳಾ ನಿರ್ದೆಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಶರತ್.ಎಸ್.ಕೆ ಇವರು 3,549 ಮತಗಳಿಂದ ಜಯಗಳಿಸಿದ್ರು. ಕಬಾಡಿ ರಾಜಣ್ಣ ಇವರು 2,166 ಮತ, ರಂಗನಾಥ್ ರವರು 1,853 ಮತ, ಮಹಿಳಾ ಅಭ್ಯರ್ಥಿ ಡಾ.ಸೌಮ್ಯ ಅವರು 3,248 ಮತಗಳನ್ನು ಪಡೆದಿದ್ದರು.

ಪ್ರದೇಶ ಕುರುಬರ ಸಂಘದ ನಿರ್ದೇಶಕರ ಚುನಾವಣೆ

ಮತ ಎಣಕೆ ವೇಳೆ, ಮುರುಗೇಶ್ ರವರು ಮತಪತ್ರದಲ್ಲಿ ಮತದಾನ ಮಾಡಿದವರು ತಮ್ಮ ಹೆಬ್ಬೆಟ್ಟು ಹಾಕಿರುವುದನ್ನು ಪರಿಗಣಿಸಬೇಕು ಎಂದು ತಗಾದೆ ತೆಗೆದರು. ಈ ವೇಳೆ ಚುನಾವಣಾಧಿಕಾರಿ ಮತಪತ್ರಕ್ಕೆ ಹೆಬ್ಬೆಟ್ಟು ಹಾಕಿರುವುದನ್ನು ಪರಿಗಣಿಸದೇ ಇರುವುದನ್ನು ಖಂಡಿಸಿದರು. ಈ ವೇಳೆ ಪೊಲೀಸರ ಜೊತೆ ವಾಗ್ವಾದ ಉಂಟಾಯಿತು. ಕೋಟೆ ಪೊಲೀಸ್ ಸಿಪಿಐ ಮಾದಪ್ಪನವರು ಹಾಗೂ ಮರುಗೇಶ್ ಬೆಂಬಲಿಗರ ನಡುವೆ ವಾಗ್ವಾದ ನಡೆಯಿತು.

Intro:ಗೂಂದಲದಲ್ಲಿಯೇ ಮುಗಿದ ಪ್ರದೇಶ ಕುರುಬರ ಸಂಘದ ನಿರ್ದೇಶಕರ ಚುನಾವಣೆ.

ಶಿವಮೊಗ್ಗ: ಕರ್ನಾಟಕ ಪ್ರದೇಶ ಕುರುಬರ ಸಂಘದ ಚುನಾವಣೆ ಗೊಂದಲದಲ್ಲಿಯೇ ಮುಕ್ತಾಯ ಕಂಡಿದೆ. ಡಿಸಂಬರ್ ನಲ್ಲಿ ನಡೆಯಬೇಕಿದ್ದ ಚುನಾವಣೆಯು ಮತಪತ್ರಗಳ ಗೊಂದಲದಿಂದ ಇಂದಿಗೆ ಮುಂದೂಡಿತ್ತು. ಇಂದು ಶಿವಮೊಗ್ಗ ಜಿಲ್ಲೆಯ ನಿರ್ದೆಶಕರ ಚುನಾವಣೆ ನಡೆಸಲಾಯಿತು. ಇಲ್ಲೂ ಸಹ ಚುನಾವಣಾಧಿಕಾರಿಯ ದ್ವಂದ್ವ ನಿಲುವು, ಚುನಾವಣೆಯನ್ನು ಗಂಭೀರವಾಗಿ ತೆಗೆದು ಕೊಳ್ಳದ ಕಾರಣ ಹಲವು ಗೊಂದಲಗಳಿಂದ ಚುನಾವಣೆ ಮುಕ್ತಾಯ ಕಂಡಿತು. ಜಿಲ್ಲೆಯಿಂದ ಮೂರು ಪುರುಷ ನಿರ್ದೇಶಕರು ಹಾಗೂ ಓರ್ವ ಮಹಿಳಾ ನಿರ್ದೆಶಕ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ಶರತ್.ಎಸ್.ಕೆ ಇವರು 3549 ಅತ್ಯಧಿಕ 5 ಗಳಿಸಿದರು. ಕಬಾಡಿ ರಾಜಣ್ಣ- 2166 ಮತಗಳನ್ನು ಹಾಗೂ ರಂಗನಾಥ್ ರವರು 1853 ಮತಗಳನ್ನು ಪಡೆದರೆ ಮಹಿಳಾ ಕ್ಷೇತ್ರದ ನಿರ್ದೇಶಕರಾಗಿ ಡಾ.ಸೌಮ್ಯರವರು 3248 ಮತಗಳಿಂದ ಆಯ್ಕೆಯಾದರು. Body:ಇಂದು ಶಿವಮೊಗ್ಗದ ದುರ್ಗಿಗುಡಿ‌ ಶಾಲೆಯಲ್ಲಿ ಬೆಳಗ್ಗೆ 9 ಗಂಟೆಯಿಂದ ಪ್ರಾರಂಭವಾದ ಮತದಾನ ಸಂಜೆ 5 ಗಂಟೆ ತನಕ ನಡೆಯಿತು. ಮತದಾನ ಮುಗಿದ ಬಳಿಕ ಮತ ಎಣಿಕೆ ನಡೆಯಿತು. ಮತ ಎಣಕೆ ವೇಳೆ ಮುರುಗೇಶ್ ರವರು ಮತಪತ್ರದಲ್ಲಿ ಮತದಾನ ಮಾಡಿದವರು ತಮ್ಮ ಹೆಬ್ಬೆಟ್ಟು ಹಾಕಿರುವುದನ್ನು ಪರಿಗಣಿಸಬೇಕು ಎಂದು ತಗಾದೆ ತೆಗೆದು ಕೊಂಡು ಕುಳಿತು ಕೊಂಡರು. ಈ ವೇಳೆ ಚುನಾವಣಾಧಿಕಾರಿ ಮತಪತ್ರಕ್ಕೆ ಹೆಬ್ಬೆಟ್ಟು ಹಾಕಿರುವುದನ್ನು ಪರಿಗಣಿಸದೆ ಇರುವುದನ್ನು ಖಂಡಿಸಿದರು. ಈ ವೇಳೆ ಪೊಲೀಸರ ಜೊತೆ ವಾಗ್ವಾದ ಉಂಟಾಯಿತು. ಕೋಟೆ ಪೊಲೀಸ್ ಸಿಪಿಐ ಮಾದಪ್ಪನವರು ಹಾಗೂ ಮರುಗೇಶ್ ಬೆಂಬಲಿಗರ ನಡುವೆ ವಾಗ್ವಾದ ನಡೆಯಿತು. ನಂತ್ರ ಮರು ಎಣಿಕೆ ನಡೆಯಿತು. ಇದರಲ್ಲಿ ರಂಗನಾಥ್ ಮೂರನೇ ಸ್ಥಾನವನ್ನು ಪಡೆದು ಕೊಳ್ಳುವಂತೆ ಆಯಿತು. Conclusion:ಪಟಾಕಿ ಹಂಚಿ ಸಂಭ್ರಮ: ನಿರ್ದೇಶಕ ಸ್ಥಾನಕ್ಕೆ ಗೆದ್ದ ನಂತ್ರ ಶರತ್ ತಮ್ಮ ಬೆಂಬಲಿಗರ ಜೊತೆ ತೆರದ ಜೀಪ್ ನಲ್ಲಿ ಮೆರವಣಿಗೆ ನಡೆಸಿದರು. ಈ ವೇಳೆ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು. ಈ ವೇಳೆ ಶರತ್ ಬೆಂಬಲಿಗರು ಮತ ಎಣಿಕ ಕೇಂದ್ರದ ಒಳಗೆ ನುಗ್ಗಲು ಪ್ರಯತ್ನಿಸಿದಾಗ ಪೊಲೀಸರು ಅವರನ್ನು ತೆದರು. ವೇಳೆ ಮಾತನಾಡಿದ‌ ಶರತ್ ರವರು ತಮಗೆ ಮತ ಹಾಕಿದ ಎಲ್ಲಾ ಕುರುಬ ಸಮಾಜದವರಿಗೆ ಅಭಿನಂದನೆ ಸಲ್ಲಿಸಿದರು. ಪ್ರದೇಶ ಕುರುಬರ ಸಂಘ ದಿಂದ ಶಿವಮೊಗ್ಗ ಜಿಲ್ಲೆಯ ಎಲ್ಲಾ ಕೃಷಿಕರಿಗೆ ಅನುಕೂಲವಾಗುವಂತಹ ಕೆಲಸ ಮಾಡುತ್ತೆನೆ ಎಂಬ ವಿಶ್ವಾಸದ ಮಾತುಗಳನ್ನು‌ ಆಡಿದರು.

ಬೈಟ್: ಶರತ್. ಎಸ್.ಕೆ. ನೂತನ ನಿರ್ದೇಶಕ.
ಪ್ರದೇಶ ಕುರುಬರ ಸಂಘ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.