ETV Bharat / state

ನಾಳೆ ತವರು ಜಿಲ್ಲೆಗೆ ಸಿಎಂ ಭೇಟಿ: ನೆರೆ ಹಾನಿ ಪ್ರದೇಶಗಳ ಪರಿಶೀಲನೆ - ಶಿವಮೊಗ್ಗಕ್ಕೆ ಬಿಎಸ್​ವೈ

ಮೈತ್ರಿ ಸರ್ಕಾರದ ಪತನದ ಬಳಿಕ ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಬಿಎಸ್​ವೈ ಅಧಿಕಾರ ಸ್ವೀಕರಿಸಿ ಇದೇ ಮೊದಲ ಬಾರಿಗೆ ಅವರ ತವರು ಜಿಲ್ಲೆಯಾದ ಶಿವಮೊಗ್ಗಕ್ಕೆ ಭೇಟಿ ನೀಡಲಿದ್ದಾರೆ. ಶಿವಮೊಗ್ಗ ಜಿಲ್ಲೆಯಾದ್ಯಂತ ಮಳೆಯಾಗಿದ್ದು, ನೆರೆಹಾನಿಗ ಪ್ರದೇಶಗಳಿಗೆ ಭೇಟಿ ನೀಡಿ ಸಿಎಂ ಪರಿಶೀಲನೆ ನಡೆಸಲಿದ್ದಾರೆ.

ಬಿಎಸ್​​ವೈ
author img

By

Published : Aug 12, 2019, 9:58 PM IST

ಶಿವಮೊಗ್ಗ: ಇಂದು ರಾತ್ರಿ 11ಕ್ಕೆ ರೈಲಿನ ಮೂಲಕ ತವರು ಜಿಲ್ಲೆ ಶಿವಮೊಗ್ಗಕ್ಕೆ ಪ್ರಯಾಣ ಬೆಳೆಸಲಿರುವ ಸಿಎಂ ಯಡಿಯೂರಪ್ಪ ನಾಳೆ ಬೆಳಗ್ಗೆ 5 ಗಂಟೆಗೆ ಶಿವಮೊಗ್ಗ ತಲುಪಲಿದ್ದಾರೆ. ಬೆಳಗ್ಗೆ 7.15 ಕ್ಕೆ ತೀರ್ಥಹಳ್ಳಿ ತಾಲೂಕಿನ ಹೆಗಲತ್ತಿ ಗ್ರಾಮಕ್ಕೆ ಭೇಟಿ ನೀಡಿ ಮಳೆಹಾನಿ ವೀಕ್ಷಣೆ ನಡೆಸಲಿದ್ದಾರೆ.

ನಂತರ 8 ಗಂಟೆಗೆ ಶಿವಮೊಗ್ಗ ನಗರದ ಮಳೆಹಾನಿ ಪ್ರದೇಶಗಳ ವೀಕ್ಷಣೆ ನಡೆಸಲಿದ್ದು, 9.45 ಕ್ಕೆ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ವಿವರ ಪಡೆದುಕೊಳ್ಳಲಿದ್ದಾರೆ. ನಂತರ 10.35 ಕ್ಕೆ ಶಿಕಾರಿಪುರಕ್ಕೆ ಭೇಟಿ ನೀಡಿ, 11 ಗಂಟೆಗೆ ಹುಚ್ಚರಾಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಕೆ ಮಾಡಲಿದ್ದಾರೆ. 11.30 ಕ್ಕೆ ತವರು ಕ್ಷೇತ್ರದಲ್ಲಿ ಭರ್ತಿಯಾಗಿರುವ ಅಂಜನಾಪುರ ಜಲಾಶಯಕ್ಕೆ ಬಾಗಿನ ಅರ್ಪಣೆ ಮಾಡಲಿದ್ದು, ಮಧ್ಯಾಹ್ನ 12 ಕ್ಕೆ ಶಿಕಾರಿಪುರ ತಾಲ್ಲೂಕಿನ ನೆರೆಹಾನಿ ಪೀಡಿತ ಪ್ರದೇಶಗಳ ವೀಕ್ಷಣೆ ಮಾಡಲಿದ್ದಾರೆ.

ಮಧ್ಯಾಹ್ನ 1.50 ಕ್ಕೆ ಸೊರಬ ತಾಲೂಕಿಗೆ ಭೇಟಿ ನೀಡಿ ನೆರೆಪೀಡಿತ ಪ್ರದೇಶಗಳ ವೀಕ್ಷಣೆ ಮಾಡಲಿದ್ದಾರೆ, ಮಧ್ಯಾಹ್ನ 2.50 ಸಾಗರಕ್ಕೆ ತೆರಳಿ ಮಳೆಹಾನಿ ಪ್ರದೇಶಗಳ ವೀಕ್ಷಣೆ ಮಾಡಲಿರುವ ಸಿಎಂ ಸಂಜೆ 4.30 ಕ್ಕೆ ಹೆಲಿಕ್ಯಾಪ್ಟರ್ ಮೂಲಕ ಹೊರಟು ಸಂಜೆ 5.30 ಕ್ಕೆ ಹೆಚ್.ಎ.ಎಲ್ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ.

Intro:ಶಿವಮೊಗ್ಗ,
ತವರು ಜಿಲ್ಲೆಗೆ ಮುಖ್ಯಮಂತ್ರಿ ಭೇಟಿ - ನೇರೆ ಪ್ರದೇಶಗಳ ವೀಕ್ಷಣೆ
ರಾಜ್ಯದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ನಂತರ ಮೊದಲ ಬಾರಿಗೆ ತವರು ಜಿಲ್ಲೆಯಾದ ಶಿವಮೊಗ್ಗ ಕ್ಕೆ ನಾಳೆ ಬೆಳಗ್ಗೆ ಐದು ಗಂಟೆಗೆ ಆಗಮಿಸಲಿದ್ದು. ನಾಳೆ ಇಡೀ ದಿನ ಶಿವಮೊಗ್ಗ, ತೀರ್ಥಹಳ್ಳಿ, ಸೊರಬ ಸೇರಿದಂತೆ ವಿವಿಧೆಡೆಗಳಲ್ಲಿ ನೆರೆ ಪ್ರದೇಶಗಳಿಗೆ ಭೇಟಿ ಮಾಡಿ ಪರಿಶೀಲಿಸಲಿದ್ದಾರೆ.

Body:ಮುಖ್ಯಮಂತ್ರಿಗಳ ಕಾರ್ಯಾಲಯದಿಂದ ಬಿಡುಗಡೆಯಾಗಿರುವ ತಾತ್ಕಾಲಿಕ ವೇಳಾಪಟ್ಟಿ ಅನುಸಾರ ಬೆಳಗ್ಗೆ 5ಕ್ಕೆ ಶಿವಮೊಗ್ಗ ರೈಲ್ವೆ ನಿಲ್ದಾಣಕ್ಕೆ ಬೆಂಗಳೂರಿನಿಂದ ಬರಲಿರುವ ಮುಖ್ಯಮಂತ್ರಿಗಳು ರಸ್ತೆ ಮೂಲಕ ಬೆಳಗ್ಗೆ 6.45 ತೀರ್ಥಹಳ್ಳಿ ತಾಲೂಕು ಹೆಗಲತ್ತಿ ಗ್ರಾಮದ ನೆರೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ.
ಅಲ್ಲಿಂದ ರಸ್ತೆ ಮೂಲಕ ಬೆಳಗ್ಗೆ 8ಕ್ಕೆ ಶಿವಮೊಗ್ಗ ನಗರದ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿರುವರು ಅವರು 9:30ಕ್ಕೆ ಅಧಿಕಾರಿಗಳ ಸಭೆ ನಡೆಸಲಿದ್ದಾರೆ 9.45ಕ್ಕೆ ಪತ್ರಿಕಾಗೋಷ್ಠಿ ನಡೆಸಲಿರುವ ಮುಖ್ಯಮಂತ್ರಿಗಳು
10. 15ಕ್ಕೆ ಹೆಲಿಕ್ಯಾಪ್ಟರ್ ಮೂಲಕ ಶಿಕಾರಿಪುರಕ್ಕೆ ಹೊರಡಲಿದ್ದು.
ಅಲ್ಲಿ ಹುಚ್ಚರಾಯಸ್ವಾಮಿ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ.
11.30 ಅಂಜನಾಪುರ ಜಲಾಶಯಕ್ಕೆ ಬಾಗಿನ ಸಲ್ಲಿಸಿರುವವರು 11.45 ರಿಂದ 1 ಗಂಟೆವರೆಗೆ ಶಿಕಾರಿಪುರದ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಲಿದ್ದಾರೆ.
1.30ಕ್ಕೆ ಅಲ್ಲಿಂದ ಹೊರಟು 1.50 ಸೊರಬ ತಲುಪಲಿರುವ ಅವರು ಅಲ್ಲಿನ ನೆರೆ ಪೀಡಿತ ಪ್ರದೇಶಗಳನ್ನು ವೀಕ್ಷಿಸಲಿದ್ದಾರೆ. 2:30 ಹೆಲಿಕ್ಯಾಪ್ಟರ್ ನಲ್ಲಿ ಸಾಗರ ತಲುಪಲಿದ್ದು .
ಅಲ್ಲಿಯೂ ಸಹ ನೆರೆ ಪ್ರದೇಶಗಳಿಗೆ ಭೇಟಿ ನೀಡಿ 4ಗಂಟೆಗೆ ಅಲ್ಲಿಂದಲೇ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ.

ಮುಖ್ಯಮಂತ್ರಿಯಾದ ನಂತರ ಇದೇ ಮೊದಲ ಬಾರಿಗೆ ಶಿವಮೊಗ್ಗ ಆಗಮಿಸಲಿರುವ ಬಿಎಸ್ ಯಡಿಯೂರಪ್ಪ ಅವರು ಪ್ರಸಕ್ತ . ನೆರೆಪೀಡಿತ ಪ್ರದೇಶಗಳ ವೀಕ್ಷಣೆಗೆ ಆಗಮಿಸಲಿದ್ದಾರೆ.
ಭವ್ಯ ಸ್ವಾಗತವನ್ನು ಬದಿಗಿಟ್ಟು ಸಂಕಷ್ಟಗಳನ್ನು ಸ್ಪಷ್ಟವಾಗಿ ತೋರಿಸಿ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾದಂತಹ ಕ್ರಮಗಳನ್ನು ಜನಪ್ರತಿನಿಧಿಗಳು ಮುಂದಾಗಬೇಕಿದೆ.
ಭೀಮಾನಾಯ್ಕ ಎಸ್ ಶಿವಮೊಗ್ಗ

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.