ಶಿವಮೊಗ್ಗ: ಕ್ಷುಲ್ಲಕ ಕಾರಣಕ್ಕಾಗಿ ನಡೆದ ಗಲಾಟೆಯಿಂದ ನಗರದ ಗಾಂಧಿ ಬಜಾರ್ ಪ್ರಕ್ಷುಬ್ದವಾಗಿದೆ.
ಗಾಂಧಿ ಬಜಾರ್ ಬಟ್ಟೆ ಮಾರ್ಕೆಟ್‌ನಲ್ಲಿ ಯುವಕನೋರ್ವನ ಮೇಲೆ ಹಲ್ಲೆ ನಡೆದ ನಂತರ, ತಿರುಪಳ್ಳಯ್ಯನ ಕೇರಿಯ ಬಳಿ ಚಲಿಸುತ್ತಿದ್ದ ಆಟೋಗೆ ಕಿಡಿಗೇಡಿಗಳು ಕಲ್ಲು ಎತ್ತಿ ಹಾಕಿದ್ದಾರೆ. ಇದರಿಂದ ಆಟೋ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು, ಗಾಬರಿಯಾದ ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ಅಲ್ಲದೆ ಕಸ್ತೂರ್ಬಾ ರಸ್ತೆ, ರವಿವರ್ಮ ಬೀದಿಯ ಬಳಿ ಆಟೋ, ಕಾರಿನ ಗಾಜನ್ನು ಕಿಡಿಗೇಡಿಗಳು ಪುಡಿ ಮಾಡಿದ್ದಾರೆ.
ಓದಿ: ಶಿವಮೊಗ್ಗ: ಹಳೇ ದ್ವೇಷದ ಹಿನ್ನೆಲೆ ಐವರ ಮೇಲೆ ಹಲ್ಲೆ
ಘಟನಾ ಸ್ಥಳಕ್ಕೆ ಪೂರ್ವ ವಲಯ ಐಜಿಪಿ ರವಿ, ಎಸ್ಪಿ ಶಾಂತರಾಜು, ಡಿವೈಎಸ್ಪಿ ಈಶ್ವರ ನಾಯಕ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕಾರು ಇಲ್ಲಿನ ಚಪ್ಪಲಿ ಅಂಗಡಿ ಮಾಲೀಕ ಸುನೀಲ್ ಎಂಬುವರಿಗೆ ಸೇರಿದ್ದಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಹಳೇ ಶಿವಮೊಗ್ಗ ಭಾಗದಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ.
ಓದಿ: ಮಾಸ್ಕ್ ವಿಚಾರ: ಶಿವಮೊಗ್ಗ ಡಿಸಿ ಕಚೇರಿಯಲ್ಲೇ ಎರಡು ಗುಂಪುಗಳ ಮಧ್ಯೆ ಗಲಾಟೆ