ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಗೆ ತೌಕ್ತೆ ಚಂಡಮಾರುತದ ಎಫೆಕ್ಟ್ ತಾಗಿದೆ. ತಡರಾತ್ರಿಯಿಂದ ಮಳೆ ಸುರಿದಿದ್ದು, ಇಂದು ಗಾಳಿ ಸಹಿತ ಮಳೆಯಾಗುತ್ತಿದೆ.
ಇತ್ತ ತೌಕ್ತೆ ಚಂಡಮಾರುತದಿಂದ ಮಲೆನಾಡಲ್ಲಿ ವರ್ಷಧಾರೆ ಮುಂದುವರೆದಿದೆ. ಹೊಸನಗರದಲ್ಲಿ ಮಳೆ ಜೋರಾಗಿ ಸುರಿಯುತ್ತಿದೆ. ಮಳೆಯಿಂದಾಗಿ ಮರಗಳು ಧರೆಗುರುಳಿವೆ. ತಾಲೂಕಿನದ್ಯಾಂತ ಕಳೆದ 24 ಗಂಟೆಯಲ್ಲಿ ದಾಖಲೆಯ 188 ಎಂ.ಎಂ ಮಳೆಯಾಗಿದೆ. ರಾಜ್ಯದಲ್ಲಿಯೇ ಮೊದಲು ತುಂಬುವ ಅಣೆಕಟ್ಟು ಎಂದು ಖ್ಯಾತಿ ಪಡೆದಿರುವ ತುಂಗಾ ಅಣೆಕಟ್ಟು ಭರ್ತಿಯಾಗುತ್ತಿದೆ. 3.24 ಕ್ಯೂಸೆಕ್ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಅಣೆಕಟ್ಟು ಮಳೆಗಾಲಕ್ಕೂ ಮುನ್ನವೇ ತುಂಬಿದೆ. ಸದ್ಯ ನದಿ ಪಾತ್ರದ ಜನರಿಗೆ ಎಚ್ಚರಿಕೆ ನೀಡಲಾಗಿದೆ.
ಓದಿ:ಹೊಸದಲ್ಲ ಈ 'ಲಾಕ್ಡೌನ್'.. 121 ವರ್ಷಗಳ ಹಿಂದೆಯೂ ಹೇರಲಾಗಿತ್ತು ಇಂತಹ ನಿರ್ಬಂಧ
ಇನ್ನು ಗಡಿ ಜಿಲ್ಲೆ ಚಾಮರಾಜನಗರ ಜಿಲ್ಲಾದ್ಯಂತ ವರುಣ ಆರ್ಭಟಿಸಿದ್ದಾನೆ. ಕೊಳ್ಳೇಗಾಲ, ಗುಂಡ್ಲುಪೇಟೆ ವ್ಯಾಪ್ತಿಯಲ್ಲಿ ತಡರಾತ್ರಿಯಿಂದ ಆರಂಭಗೊಂಡ ತುಂತುರು ಮಳೆ ಇಂದು ಸಹ ಮುಂದುವರೆದಿದೆ. ಮೊದಲೇ ಲಾಕ್ಡೌನ್ನಿಂದ ಕಂಗೆಟ್ಟಿರುವ ಜನರು ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಇನ್ನಷ್ಟು ಹೈರಾಣಾಗಿದ್ದಾರೆ.