ETV Bharat / state

ಹಿಂದೂ ಯುವಕರ ಮೇಲೆ ವ್ಯವಸ್ಥಿತ ದಾಳಿ: ರಮೇಶ್ ಬಾಬು ಜಾಧವ್ ಆರೋಪ

ಇತ್ತೀಚಿನ ದಿನಗಳಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರ ಮೇಲೆ ಅನ್ಯ ಕೋಮಿನಯುವಕರು ವ್ಯವಸ್ಥಿತವಾಗಿ ದಾಳಿ ಮಾಡುತ್ತಿದ್ದಾರೆ ಎಂದು ವಿಹೆಚ್​ಪಿ ಜಿಲ್ಲಾಧ್ಯಕ್ಷ ರಮೇಶ್ ಬಾಬು ಜಾದವ್ ಆರೋಪಿಸಿದ್ದಾರೆ.

ರಮೇಶ್ ಬಾಬು ಜಾಧವ್
author img

By

Published : Sep 28, 2019, 11:33 PM IST

ಶಿವಮೊಗ್ಗ: ಹಿಂದೂಗಳ ಮೇಲೆ ನಿರಂತರ ದಾಳಿ ನಡೆಯುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ವಿಶ್ವ ಹಿಂದೂ ಪರಿಷತ್​ನ ಜಿಲ್ಲಾಧ್ಯಕ್ಷ ರಮೇಶ್ ಬಾಬು ಜಾದವ್ ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರ ಮೇಲೆ ಅನ್ಯ ಕೋಮಿನ ಯುವಕರು ವ್ಯವಸ್ಥಿತವಾಗಿ ದಾಳಿ ಮಾಡುತ್ತಿದ್ದಾರೆ. ಅದರಲ್ಲೂ ಗಣೇಶ ಉತ್ಸವದಂತಹ ಹಬ್ಬಗಳಲ್ಲಿ ಮುಂದಾಳತ್ವ ವಹಿಸುವ ಹಿಂದೂ ಕಾರ್ಯಕರ್ತರನ್ನ ಗುರಿಯಾಗಿಟ್ಟುಕೊಂಡು ದಾಳಿ ಮಾಡುತ್ತಿರುವುದು ಆತಂಕಕಾರಿ ಎಂದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಹೆಚ್​ಪಿ ಜಿಲ್ಲಾಧ್ಯಕ್ಷ ರಮೇಶ್ ಬಾಬು

ಸೋಮಿನಕೊಪ್ಪದ ಯೋಗೇಶ್, ಬೀರನಹಳ್ಳಿ ಸುಮನ್, ಸಾಗರ ಮತ್ತು ತೀರ್ಥಹಳ್ಳಿ ತಾಲೂಕಿನ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ನಡೆಯುತ್ತಿರುವುದು ಕೇವಲ ಉದಾಹರಣೆ ಮಾತ್ರ. ಈ ರೀತಿ ನಿರಂತರವಾಗಿ ಹಲ್ಲೆಗಳು, ದಾಳಿಗಳು ನಡೆಯುತ್ತಲೇ ಇವೆ. ಹಾಗಾಗಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಇದನ್ನ ಖಂಡಿಸುತ್ತದೆ. ಅಲ್ಲದೆ ಇಂತಹ ಗೂಂಡಾಗಳನ್ನ ಬಂಧಿಸಿ ಗಡಿಪಾರು ಮಾಡುವಂತೆ ಆಗ್ರಹಿಸಿದರು.

ಅಷ್ಟೇ ಅಲ್ಲದೆ ಇತ್ತೀಚಿನ ದಿನಗಳಲ್ಲಿ ಪ್ರೀತಿಯ ಹೆಸರಿನಲ್ಲಿ ಹಿಂದೂ ಯುವತಿಯರನ್ನು ವಂಚಿಸಿ ಮದುವೆಯಾಗುತ್ತಿರುವ ಪ್ರಕರಣಗಳು ಕಂಡುಬರುತ್ತವೆ. ಇತ್ತೀಚಿಗೆ ಇಂತಹ ಲವ್ ಜಿಹಾದ್ ಪ್ರಕರಣವೊಂದು ಶಿವಮೊಗ್ಗದಲ್ಲಿ ನಡೆದಿದ್ದು, ಇದನ್ನು ಪ್ರಶ್ನೆ ಮಾಡಲು ಹೋದ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದರಲ್ಲದೇ ಅವರ ವಿರುದ್ಧ ಮೊಕದ್ದಮೆ ಹೂಡಲಾಗಿದೆ. ಇಂತಹ ಘಟನೆಗಳಿಗೆ ಕೆಲವು ಮಾಜಿ ಶಾಸಕರ ಕುಮ್ಮಕ್ಕು ಕೂಡ ಇದೆ ಎಂದು ಗಂಭೀರವಾಗಿ ಆರೋಪಿಸಿದರು.

ಪೊಲೀಸ್ ಇಲಾಖೆ ತಕ್ಷಣವೇ ಎತ್ತೆಚ್ಚುಕೊಳ್ಳಬೇಕು ಹಾಗೂ ಸಮಾಜಘಾತುಕ ದುಷ್ಕೃತ್ಯದಲ್ಲಿ ಭಾಗಿರುವ ಗೂಂಡಾಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.

Intro:ಶಿವಮೊಗ್ಗ, ಹಿಂದೂಗಳ ಮೇಲೆ ನಿರಂತರ ದಾಳಿ ನಡೆಯುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ವಿಶ್ವ ಹಿಂದೂ ಪರಿಷತ್ ನ ಜಿಲ್ಲಾಧ್ಯಕ್ಷ ರಮೇಶ್ ಬಾಬು ಜಾದವ್ ಒತ್ತಾಯಿಸಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಇತ್ತೀಚಿನ ದಿನಗಳಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರ ಮೇಲೆ ಅನ್ಯಕೋಮಿನ ಮತಾಂಧ ಯುವಕರು ವ್ಯವಸ್ಥಿತವಾಗಿ ದಾಳಿ ಮಾಡುತ್ತಿದ್ದಾರೆ . ಅದರಲ್ಲೂ ಗಣೇಶ ಉತ್ಸವದಂತಹ ಹಬ್ಬಗಳಲ್ಲಿ ಮುಂದಾಳತ್ವ ವಹಿಸಿದ ಹಿಂದೂ ಕಾರ್ಯಕರ್ತರನ್ನ ಗುರಿಯಾಗಿಟ್ಟುಕೊಂಡು ದಾಳಿ ಮಾಡುತ್ತಿರುವುದು ಆತಂಕಕಾರಿ ಎಂದರು. ಸೋಮಿನಕೊಪ್ಪ ದ ಯೋಗೇಶ್, ಬೀರನಹಳ್ಳಿ ಸುಮನ್, ಸಾಗರ ಮತ್ತು ತೀರ್ಥಳ್ಳಿ ತಾಲೂಕಿನ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ನಡೆಯುತ್ತಿರುವುದು ಕೇವಲ ಉದಾಹರಣೆ ಮಾತ್ರ ಈ ರೀತಿ ನಿರಂತರವಾಗಿ ಹಲ್ಲೆಗಳು ದಾಳಿಗಳು ನಡೆಯುತ್ತಲೇ ಇವೆ, ಹಾಗಾಗಿ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳವು ಇದನ್ನ ಖಂಡಿಸುತ್ತದೆ . ಅಲ್ಲದೆ ಇಂತಹ ಮತಾಂಧ ಗೂಂಡಾಗಳನ್ನ ಬಂಧಿಸಿ ಗಡಿಪಾರು ಮಾಡುವಂತೆ ಆಗ್ರಹಿಸಿದರು.

Body:ಅಷ್ಟೇ ಅಲ್ಲದೆ ಇತ್ತೀಚಿನ ದಿನಗಳಲ್ಲಿ ಪ್ರೀತಿಯ ಹೆಸರಿನಲ್ಲಿ ಹಿಂದೂ ಯುವತಿಯರನ್ನು ವಂಚಿಸಿ ಮದುವೆಯಾಗುತ್ತಿರುವ ಪ್ರಮಾಣಗಳು ಕಂಡುಬರುತ್ತವೆ. ಇತ್ತೀಚಿಗೆ ಇಂತಹ ಲವ್ ಜಿಹಾದ್ ಪ್ರಕರಣ ಒಂದು ಶಿವಮೊಗ್ಗದಲ್ಲಿ ನಡೆದಿದ್ದು, ಇದನ್ನು ಪ್ರಶ್ನೆ ಮಾಡಲು ಹೋದ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದರಲ್ಲದೇ ಅವರ ವಿರುದ್ಧ ಮೊಕದ್ದಮೆ ಹೂಡಲಾಗಿದೆ ಎಂದವರು ಇಂಥ ಘಟನೆಗಳಿಗೆ ಕೆಲವು ಮಾಜಿ ಶಾಸಕರ ಕುಮ್ಮಕ್ಕು ಕೂಡ ಇದೆ ಎಂದು ಗಂಭೀರವಾಗಿ ಆರೋಪಿಸಿದರು. ಪೊಲೀಸ್ ಇಲಾಖೆ ತಕ್ಷಣವೇ ಎತ್ತೆಚ್ಚು ಕೊಳ್ಳಬೇಕು ಹಾಗೂ ಸಮಾಜಘಾತುಕ ದುಷ್ಕೃತ್ಯದಲ್ಲಿ ಭಾಗಿರುವ ಗುಂಡಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು. ಭೀಮಾನಾಯ್ಕ ಎಸ್ ಶಿವಮೊಗ್ಗ

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.