ಶಿವಮೊಗ್ಗ: ಡಿ.ವಿ.ಎಸ್. ಕಲಾ ಮತ್ತು ವಿಜ್ಞಾನ ಕಾಲೇಜು.ಶಿವಮೊಗ್ಗ, ಎನ್.ಸಿ.ಸಿ, ಎನ್ ಎಸ್.ಎಸ್.ರೋವರ್ಸ್ ಮತ್ತು ರೇಂಜರ್ಸ್.ರೆಡ್ ಕ್ರಾಸ್ ಘಟಕಗಳ ವತಿಯಿಂದ ಎನ್.ಸಿ.ಸಿ ನಿರ್ದೇಶನಾಲಯ ನವದೆಹಲಿ ಇವರ ನಿರ್ದೇಶನದಂತೆ 'ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ಪರಿಸರ ರಕ್ಷಣೆ, ಸ್ವಚ್ಚತೆ, ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ಈ ಜಾಥಾ ಏರ್ಪಡಿಸಲಾಗಿತ್ತು.
ಇತ್ತೀಚಿನ ದಿನಗಳಲ್ಲಿ ಕಾಡುಗಳು ನಶಿಸುತ್ತಿದ್ದು ಹಾಗೂ ಪ್ಲಾಸ್ಟಿಕ್ ಬಳಕೆಯಿಂದ ಪರಿಸರ ಹಾಳಾಗುತ್ತಿದೆ. ಹಾಗಾಗಿ ಪರಿಸರ ಬೆಳೆಸಿ ಕಾಡು ಉಳಿಸಿ, ಸ್ವಚ್ಚತೆ ಕಾಪಾಡಿ ನಗರವನ್ನು ಸುಂದರವಾಗಿಡಿ ಎಂಬ ಘೋಷಣೆ ಕೂಗುವ ಮೂಲಕ ಜಾಗೃತಿ ಜಾಥಾ ವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ದೇಶಿಯ ವಿದ್ಯಾಶಾಲಾ ಸಮಿತಿಯ ಕಾರ್ಯದರ್ಶಿಗಳಾದ . ಎಸ್.ರಾಜಶೇಖರವರು ಹಾಗೂ ಪ್ರಾಂಶುಪಾಲರಾದ ಡಾ.ಎಚ್.ಟಿ.ಕೃಷ್ಣಮೂರ್ತಿರವರು ಎನ್.ಸಿ.ಸಿ ಎನ್.ಎನ್.ಎಸ್.ಎಸ್.ಹಾಗೂ ಇತರ ಎಲ್ಲಾ ಘಟಕಗಳ ಅಧಿಕಾರಿಗಳು ಕಾಲೇಜಿನ ಸಿಬ್ಬಂದಿ ವರ್ಗದವರು ಹಾಗೂ ಎನ್.ಸಿ.ಸಿ ಕೆಡೆಟ್‌ಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.