ಶಿವಮೊಗ್ಗ: ಐತಿಹಾಸಿಕ ಹಿನ್ನೆಲೆಯುಳ್ಳ ಸಾಗರ ಪಟ್ಟಣದ ಗಣಪತಿ ಕೆರೆಯ ಸರ್ವೇ ಕಾರ್ಯ ಇಂದಿನಿಂದ ಪ್ರಾರಂಭಗೊಂಡಿದೆ. ಭೂ ದಾಖಲೆಗಳ ಸಹಾಯಕ ನಿರ್ದೇಶಕ ಸುಜಯ್ ಕುಮಾರ್ ನೇತೃತ್ವದಲ್ಲಿ ಸರ್ವೇ ನಡೆಸಲಾಗುತ್ತಿದೆ.
ಸಾಗರ ಪೇಟೆಯ ಬಿ.ಹೆಚ್. ರಸ್ತೆಯಿಂದ ಸರ್ವೇ ಪ್ರಾರಂಭವಾಗಿದೆ. ಕೆರೆಯ ಒತ್ತುವರಿ ದಶಕಗಳಿಂದ ನಡೆದಿತ್ತು. ಈ ಹಿನ್ನೆಲೆಯಲ್ಲಿ ಕೆರೆಯ ಸರ್ವೇ ಕಾರ್ಯ ನಡೆಯಬೇಕು ಎಂದು ಜನರು ಆಗ್ರಹಿಸಿದ್ದರು. ಆದ್ದರಿಂದ ತಾಂತ್ರಿಕ ಸರ್ವೇ ನಡೆಸಲಿದ್ದಾರೆ.
![ಗಣಪತಿ ಕೆರೆಯ ಸರ್ವೇ ಕಾರ್ಯ ನಡೆಸುತ್ತಿರುವುದು](https://etvbharatimages.akamaized.net/etvbharat/prod-images/kn-smg-03-ganapathilake-survey-7204213_27052020175416_2705f_1590582256_886.jpg)
ಈ ಹಿಂದೆ ಫೆಬ್ರವರಿ ತಿಂಗಳಲ್ಲಿ ಶಾಸಕ ಹರತಾಳು ಹಾಲಪ್ಪ, ಗಣಪತಿ ಕೆರೆ ಒತ್ತುವರಿಯ ಬಗ್ಗೆ ಮುಖ್ಯ ಕಾರ್ಯದರ್ಶಿಗೆ ತಿಳಿಸಿದ್ದರು. ಅಷ್ಟೇ ಅಲ್ಲದೆ ಕೆರೆಯ ಗಡಿ ಗುರುತಿಸುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕೆರೆಯ ಸರ್ವೇ ಕಾರ್ಯ ನಡೆಯುತ್ತಿದೆ. ಇಂದು ಅಥವಾ ನಾಳೆ ಸರ್ವೇ ಕಾರ್ಯ ಮುಕ್ತಾಯವಾಗಲಿದೆ. ಪಟ್ಟಣದ ನಾಗರಿಕರು ಬಂದು ತಮ್ಮ ಅಹವಾಲುಗಳನ್ನು ಹಾಗೂ ಸಲಹೆ ಸೂಚನೆಗಳನ್ನು ನೀಡಬಹುದು ಎಂದು ಶಾಸಕರು ತಿಳಿಸಿದ್ದಾರೆ.