ಶಿವಮೊಗ್ಗ: ಸಾಗರ ಪಟ್ಟಣದ ಅಶೋಕ್ ರಸ್ತೆಯ ಆಶಾಪುರದ ನಾವಲ್ಟೀಸ್ ಸ್ಟೋರ್ಗೆ ನಿನ್ನೆ ರಾತ್ರಿ ಆಕಸ್ಮಿಕವಾಗಿ ಬೆಂಕಿ ಬಿದ್ದಿದೆ.
ನಾವೆಲ್ಟೀಸ್ ಸ್ಟೋರ್ನಲ್ಲಿದ್ದ ಗಿಫ್ಟ್ ವಸ್ತುಗಳು, ಪಿಂಗಾಣಿ ವಸ್ತುಗಳು, ಬಳೆಗಳು, ಸೇರಿದಂತೆ ಇತರೆ ವಸ್ತುಗಳಿಗೆ ಬೆಂಕಿ ತಗುಲಿ ಹಾನಿಯಾಗಿದೆ. ಅಲ್ಲದೆ ಕಟ್ಟಡದ ಗೋಡೆಗಳು ಸೇರಿದಂತೆ ಮೇಲ್ಛಾವಣಿಯ ವಸ್ತುಗಳು ಸಹ ಬೆಂಕಿಗಾಹುತಿಯಾಗಿವೆ.
ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದೆ. ಕಟ್ಟಡಕ್ಕೆ ಆಕಸ್ಮಿಕ ಬೆಂಕಿ ಬಿದ್ದ ಕಾರಣ ಸಾಗರದಲ್ಲಿ ವಿದ್ಯುತ್ ಕಡಿತಗೊಳಿಸಲಾಗಿತ್ತು.