ಶಿವಮೊಗ್ಗ : ಕೇಂದ್ರ ಕಾರಾಗೃಹದ ಓರ್ವ ಕೈದಿ ಮೂವರು ಸಜಾ ಬಂಧಿಗಳ ಮೇಲೆ ಚಮಚದಿಂದ ಹಲ್ಲೆ ನಡೆಸಿ ಗಾಯಗೊಳಿಸಿರುವ ಪ್ರಕರಣ ಬೆಳಕಿದೆ ಬಂದಿದೆ.
ಕೇಂದ್ರ ಕಾರಾಗೃಹದಲ್ಲಿ ಕೈದಿಯಿಂದ ಹಲ್ಲೆ : ಕೇಂದ್ರ ಕಾರಾಗೃಹದಲ್ಲಿ ಉಡುಪಿಯಿಂದ ಬಂದಿರುವ ಪ್ರಶಾಂತ ಎಂಬ ಕೈದಿ ಇಂದು ಅಡುಗೆ ಮನೆಯಲ್ಲಿ ಊಟದ ಕೋಣೆಯಲ್ಲಿ ನೀರು ಕುಡಿಯುವ ವಿಚಾರದಲ್ಲಿ ಕೂಗಾಡಿದ್ದಾನೆ.
ಈ ವೇಳೆ ಸಜಾ ಕೈದಿಗಳು ಆತನನ್ನು ಸಮಾಧಾನ ಮಾಡಲು ಮುಂದಾದಾಗ ಕೋಪದಲ್ಲಿ ಬೆನಕಪ್ಪ, ದೇವೆಂದ್ರಪ್ಪ ಹಾಗೂ ಪರಮೇಶ್ವರಪ್ಪ ಎಂಬುವರ ಕೈಗೆ ಚಮಚದಿಂದ ಗಾಯಗೊಳಿಸಿದ್ದಾನೆ.
ಪ್ರಶಾಂತ ಉಡುಪಿಯಲ್ಲಿ ಅಪರಾಧ ಕೃತ್ಯ ಎಸಗಿ ಕೋರ್ಟ್ನಲ್ಲಿ ನ್ಯಾಯಾಧೀಶರಿಗೆ ನಿಂದಿಸಿ, ಶಿಕ್ಷೆಗೆ ಒಳಗಾಗಿದ್ದಾನೆ. ಈತ ಸ್ವಲ್ಪ ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಾನೆ ಎನ್ನಲಾಗಿದೆ. ಪ್ರಶಾಂತ ಏಕಾಏಕಿ ಸಹ ಕೈದಿಗಳ ನಡುವೆ ಜಗಳವಾಡುವುದು, ಇತರರಿಗೆ ನಿಂದಿಸುವುದು ಆಗಾಗ ಮಾಡುತ್ತಿರುತ್ತಾನೆ.
ಓದಿ: ಪೇಜಾವರ ಮಠದ ವಿಶ್ವೇಶತೀರ್ಥರ ಹಾದಿಯಲ್ಲೇ ಅವರ ಶಿಷ್ಯ: ಹೊಸ ಕಾಂತ್ರಿಗೆ ನಾಂದಿ
ಈತನ ಬಗ್ಗೆ ಸಹ ಕೈದಿಗಳು ಹಾಗೂ ಜೈಲಿನ ಅಧಿಕಾರಿಗಳು ಸಹ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಡಾ.ರಂಗನಾಥ್ ಅವರಿಗೆ ದೂರು ನೀಡಿದ್ದರು. ಸದ್ಯ ಮೂವರು ಸಜಾ ಬಂಧಿಗಳನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಕುರಿತು ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.