ಶಿವಮೊಗ್ಗ: ಶಿವಮೊಗ್ಗದಲ್ಲಿ ಪೊಲೀಸರು ನಡೆಸುತ್ತಿರುವ ವಿಶೇಷ ತಪಾಸಣೆ ಸಂದರ್ಭ ತಲವಾರ್ ಹಾಗೂ ಡ್ಯಾಗರ್ಗಳು ಪತ್ತೆಯಾಗಿವೆ. ಒಂದು ತಲವಾರ್ ಹಾಗೂ ನಾಲ್ಕು ಡ್ಯಾಗರ್ ಪತ್ತೆಮಾಡಿ ಕಾನೂನು ಪೊಲೀಸರು ಕ್ರಮ ಜರುಗಿಸಿದ್ದಾರೆ.
ಶಿವಮೊಗ್ಗದಲ್ಲಿ ಪೊಲೀಸ್ ಸ್ಪೆಷಲ್ ಡ್ರೈವ್ ಸಂಚಲನ ಸೃಷ್ಟಿಸಿದೆ. ಕೇವಲ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಲ್ಲದೇ ವಿವಿಧ ಪ್ರಕರಣ ದಾಖಲಿಸಿದ ಪೊಲೀಸರು ಕಂಬಿ ಹಿಂದೆ ಕೂರಿಸುವ ಕೆಲಸಕ್ಕೆ ಮುಂದಾಗಿದ್ದಾರೆ.
11 ಅಬಕಾರಿ ಪ್ರಕರಣ, 350 ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣ, 93 ಲಘು ಪ್ರಕರಣಗಳು, 96 ತಂಬಾಕು ಪ್ರಕರಣಗಳು, 10 ಮಂದಿ ಗಾಂಜಾ ಸೇವನೆ ಮಾಡಿದವರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಕೇವಲ ಒಂದು ಗಂಟೆ ನಡೆದ ಪೊಲೀಸರ ಸ್ಪೆಷಲ್ ಡ್ರೈವ್ ನಲ್ಲಿ ಇಡೀ ನಗರವೇ ಒಂದು ಗಂಟೆ ಸ್ತಬ್ಧವಾಗಿತ್ತು.
ಇದನ್ನೂ ಓದಿ: ಕಾಬೂಲ್‌ನ ಗುರುದ್ವಾರ ಸಾಹಿಬ್ ಬಳಿ ಮತ್ತೊಂದು ಬಾಂಬ್ ಸ್ಫೋಟ