ETV Bharat / state

ಬಿಜೆಪಿಗೆ ಸಿಗುತ್ತಿರುವ ಬೆಂಬಲ ಸಹಿಸದೆ ಸಿದ್ದರಾಮಯ್ಯ ಹತಾಶರಾಗಿ ಮಾತನಾಡುತ್ತಿದ್ದಾರೆ : ಸಿ ಟಿ ರವಿ

author img

By

Published : Nov 22, 2021, 4:43 PM IST

ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿಟಿ ರವಿಯವರು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರ ಹೇಳಿಕೆಗೆಳ ಬಗ್ಗೆ ಶಿವಮೊಗ್ಗದಲ್ಲಿ ವ್ಯಂಗ್ಯವಾಡಿದ್ದಾರೆ..

CT Ravi
ಸಿಟಿ ರವಿ

ಶಿವಮೊಗ್ಗ : ಜನಸ್ವರಾಜ್ ಸಮಾವೇಶದಲ್ಲಿ ಸಿಗುತ್ತಿರುವ ಜನ ಬೆಂಬಲವನ್ನು ಸಹಿಸದೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಹತಾಶರಾಗಿ‌ ಮಾತನಾಡುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ (BJP National Secretary CT Ravi)ಹೇಳಿದರು.

ವಿಪಕ್ಷ ನಾಯಕನ ವಿರುದ್ಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಕಿಡಿಕಾರಿರುವುದು..

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಸೆಂಬರ್​ನಲ್ಲಿ ನಡೆಯಲಿರುವ ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ 15ಕ್ಕೂ ಅಧಿಕ ಸ್ಥಾನಗಳನ್ನು ಪಡೆಯುವ ಮೂಲಕ ಗೆಲುವು ಸಾಧಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಆರೋಪಿಸಿ, ಸಾಕ್ಷಿ ನೀಡುವುದಿಲ್ಲ : ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Opposition Leader Siddaramaiah)ನವರು ಬಿಜೆಪಿಯ ಜನಯಾತ್ರೆಗೆ ಬರ್ಬಾದ್​​ ಯಾತ್ರೆ ಹಾಗೂ ಪ್ರಧಾನಿ ಮೋದಿಯವರ ಬಗ್ಗೆ ಅವಹೇಳಕಾರಿಯಾಗಿ ಮಾತನಾಡುತ್ತಿದ್ದಾರೆ. ಅವರು ನಿರಂತರವಾಗಿ ಆಪಾದನೆ ಮತ್ತು ಆರೋಪಗಳನ್ನು ಮಾಡುತ್ತಿದ್ದಾರೆ. ಆದರೆ, ಯಾವುದಕ್ಕೂ ಸಾಕ್ಷಿ ಮಾತ್ರ ಅವರ ಬಳಿ ಇಲ್ಲ. ಬದಲಿಗೆ ನಿರ್ದೋಷಿ ಎಂದು ತೋರಿಸಿ ಎನ್ನುತ್ತಿದ್ದಾರೆ. ಅದರಂತೆ ಬಿಡ್​ ಕಾಯಿನ್​ ವಿಚಾರವಾಗಿಯೂ ಆಧಾರವಿಲ್ಲದೆ ಆರೋಪ ಮಾಡಿದ್ದಾರೆ ಎಂದು ಆರೋಪಿಸಿದರು.

ಸಮೀಕ್ಷೆಯಂತೆ ಚುನಾವಣೆಯಲ್ಲಿ ಗೆಲ್ಲುತ್ತೇವೆ : ಮುಂಬರುವ ಪಂಚರಾಜ್ಯಗಳ ಚುನಾವಣೆಗಳಲ್ಲಿ ಸಮೀಕ್ಷೆಯಂತೆ ಬಿಜೆಪಿ ಗೆಲುವು ಸಾಧಿಸಿ ಅಧಿಕಾರ ಹಿಡಿಯಲಿದೆ. ಪಂಜಾಬಿನಲ್ಲಿ ನಮ್ಮ ಬಲ ಇನ್ನಷ್ಟು ಹೆಚ್ಚಾಗಲಿದ್ದು, ಕಾಂಗ್ರೆಸ್ ಸೋಲಲಿದೆ ಎಂದರು.

ಕುರ್ಚಿಗಾಗಿ ಜಗಳ : ಕಾಂಗ್ರೆಸ್​ಗೆ ಎಲ್ಲಿಯೂ ಜನ ಬೆಂಬಲ ವ್ಯಕ್ತವಾಗುತ್ತಿಲ್ಲ. ಕುರ್ಚಿಗಾಗಿ ಜಗಳ ನಡೆಯುತ್ತಿದೆ. ಯಾರು ಯಾರ ಪಕ್ಕದಲ್ಲಿ ಕುಳಿತುಕೊಳ್ಳಬೇಕು ಎಂಬುವುದರಲ್ಲಿ ಜಗಳ ನಡೆಯುತ್ತಿದೆ. ಅದಕ್ಕಾಗಿಯೇ ಯಾವುದೇ ವೇದಿಕೆ ಕಾರ್ಯಕ್ರಮಗಳಲ್ಲಿ ಕುರ್ಚಿಗಳನ್ನು ಹಾಕುತ್ತಿಲ್ಲ ಎಂದು ವ್ಯಂಗ್ಯವಾಡಿದರು.

ನಮ್ಮ ಸಂಘಟನೆಗೆ ಗೆಲುವು ನಿಶ್ಚಿತ : ನಮ್ಮ ಪಕ್ಷದ ಸಂಘಟನೆ ಬಲವಾಗಿದೆ. ಜನ ಬೆಂಬಲವಿರುವ ನಾಯಕರು ನಮ್ಮ ಪಕ್ಷದಲ್ಲಿದ್ದಾರೆ. ಹಾಗಾಗಿ, ನಾವು ಚುನಾವಣೆಯಲ್ಲಿ ಗೆಲ್ಲುತ್ತೇವೆ. ಜನ ಸಂಘಟನೆಯನ್ನು ನೋಡಿ ಮತ ನೀಡುತ್ತಾರೆ, ಹೊರತು ಜಾತಿಯನ್ನಲ್ಲ. ಜಾತಿ ವ್ಯವಸ್ಥೆಯನ್ನು ಮುಂದಿಟ್ಟುಕೊಂಡು ನಮ್ಮ ಸಂಘಟನೆಯನ್ನು ಒಡೆಯಲು ಕೆಲವರು ನೋಡುತ್ತಿದ್ದಾರೆ. ಆದರೆ, ನಮ್ಮ ಸಂಘಟನೆಯೇ ಗೆಲ್ಲುವ ವಿಶ್ವಾಸವಿದೆ ಎಂದರು.‌

ಪ್ರತಾಪ ಸಿಂಹ ವಿಚಾರವಾಗಿ ಸ್ವಾಮೀಜಿಗಳ ಹೇಳಿಕೆ ಬಗ್ಗೆ ಮಾತನಾಡಿದ ಅವರು, ನಾವು ಕಾವಿಯನ್ನು ಗೌರಸುತ್ತೇವೆ. ಆದರೆ, ಕಾವಿಯ ಹೆಸರಿನಲ್ಲಿ ಮಾಡುವ ಎಲ್ಲಾ ಕೆಲಸಗಳನ್ನು ಬೆಂಬಲಿಸುವುದಿಲ್ಲ. ವೈಚಾರಿಕ ಆಧಾರದಲ್ಲಿ ಟೀಕೆ ನಡೆಯಬೇಕೆ ಹೊರತು ವೈಯಕ್ತಿಕವಾಗಿ ಟೀಕೆ ಮಾಡುವುದು ಸರಿ ಅಲ್ಲ ಎಂದರು.

ಇದನ್ನೂ ಓದಿ: ಡಿಸೆಂಬರ್ ಮೊದಲ ವಾರದವರೆಗೂ ಮಳೆ ಗಂಡಾಂತರ.. ಬೆಂಗಳೂರಿಗರೇ ಇನ್ನೂ 10 ದಿನ ಹುಷಾರ್ ​​​​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.