ETV Bharat / state

ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೆ ಮದ್ಯ ಕಳ್ಳತನ! - ಶಿವಮೊಗ್ಗ ಲಾಕ್​ಡೌನ್​ ಸುದ್ದಿ

ಶಿವಮೊಗ್ಗ ಜಿಲ್ಲೆಯ ಸಂತೆಕಡೂರಿನ ಮದ್ಯದಂಗಡಿ ಒಂದರಲ್ಲಿ ಮೇಲ್ಛಾವಣಿ ಕೊರೆದು ಮದ್ಯ ಕಳ್ಳತನ ಮಾಡಿದ್ದು, ಸ್ಥಳಕ್ಕೆ ಅಬಕಾರಿ ಇನ್ಸ್​​ಪೆಕ್ಟರ್ ಹನುಮಂತಪ್ಪ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

author img

By

Published : Apr 19, 2020, 4:37 PM IST

ಶಿವಮೊಗ್ಗ: ಜಿಲ್ಲೆಯ ಸಂತೆಕಡೂರು ಗ್ರಾಮದ ಆರಾಧನಾ ವೈನ್ಸ್ ಶಾಪ್​ನಲ್ಲಿ ಮೇಲ್ಛಾವಣಿ ಕೊರೆದು ಮದ್ಯ ಕಳ್ಳತನ ಮಾಡಲಾಗಿದೆ.

ಭದ್ರಾವತಿ ನಿವಾಸಿ ಎಸ್.ಶಿವಪ್ಪ ಎಂಬುವವರ ಒಡೆತನದ ಮದ್ಯದಂಗಡಿಯಲ್ಲಿ ಕಳ್ಳತನ ನಡೆದಿದ್ದು, ಲಾಕ್​ಡೌನ್ ಕಾರಣ ಮದ್ಯ ಸಿಗದೆ ವೈನ್ ​ಶಾಪ್ ಕೆಲಸಗಾರನೇ ಮೇಲ್ಛಾವಣಿ ಒಡೆದು ಕಳ್ಳತನಕ್ಕೆ ಯತ್ನಿಸಿರಬಹುದು ಎಂಬ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ಕಳೆದ 20 ದಿನಗಳಲ್ಲಿ ಇದು ನಾಲ್ಕನೇ ಕಳ್ಳತನ ಪ್ರಕರಣವಾಗಿದೆ. ಸ್ಥಳಕ್ಕೆ ಅಬಕಾರಿ ಇನ್ಸ್​ಪೆಕ್ಟರ್ ಹನುಮಂತಪ್ಪ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.