ಶಿವಮೊಗ್ಗ: ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ ಅವರ ಪುತ್ರ ಬಸವೇಶ್ ಸೇರಿದಂತೆ 16 ಮಂದಿಗೆ ಶಿವಮೊಗ್ಗ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಭದ್ರಾವತಿಯಲ್ಲಿ ಫೆಬ್ರವರಿ 28 ರಂದು ನಡೆದ ಕಬಡ್ಡಿ ಪಂದ್ಯಾವಳಿಯಲ್ಲಿ ನಡೆದ ಗಲಾಟೆಯಲ್ಲಿ ಶಾಸಕರ ಪುತ್ರ ಬಸವೇಶ್ ಹಾಗೂ ಶಾಸಕರ ಸಹೋದರರ ಪುತ್ರ ಸೇರಿ ಇತರ 16 ಜನರನ್ನು ಬಂಧಿಸಲಾಗಿತ್ತು. ಇದರಲ್ಲಿ ಮಾರ್ಚ್ 6 ರಂದು ಶಾಸಕರ ಪುತ್ರ ಬಸವೇಶ್ನನ್ನು ಪೊಲೀಸರು ಬಂಧಿಸಿ ಶಿವಮೊಗ್ಗದ ಕೇಂದ್ರ ಕಾರಾಗೃಹಕ್ಕೆ ಕಳುಹಿಸಿದ್ದರು.
ಇದನ್ನೂ ಓದಿ: ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ ಪುತ್ರ ಬಸವೇಶ್ ಅರೆಸ್ಟ್
ಬಸವೇಶ್ ಹಾಗೂ ಇತರರು ಎರಡ್ಮೂರು ಭಾರಿ ಜಾಮೀನು ಅರ್ಜಿ ಹಾಕಿದ್ದರೂ ನ್ಯಾಯಾಲಯ ಜಾಮೀನು ನೀಡಿರಲಿಲ್ಲ. ಇಂದು ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. 45 ದಿನಗಳ ನಂತರ ಜಾಮೀನು ಲಭ್ಯವಾಗಿದೆ.
ಜಾಮೀನು ಸಿಕ್ಕರು ಇಂದು ಬಿಡುಗಡೆ ಭಾಗ್ಯವಿಲ್ಲ:
ಬಸವೇಶ್ ಹಾಗೂ ಇತರರಿಗೆ ಇಂದು ಜಾಮೀನು ಸಿಕ್ಕರೂ ಸಹ ಬಿಡುಗಡೆಯ ಭಾಗ್ಯವಿಲ್ಲ. ಕೋರ್ಟ್ನಿಂದ ಜಾಮೀನು ನೀಡಿದೆ. ಆದರೆ, ಅದರ ಆರ್ಡರ್ ಕಾಫಿ ಸಿಕ್ಕು, ಅದನ್ನು ಅಮೀನರ ಮೂಲಕ ಕಾರಾಗೃಹಕ್ಕೆ ನೀಡಬೇಕು. ಶಿವಮೊಗ್ಗದ ಕಾರಾಗೃಹದಲ್ಲಿ ಸಂಜೆ 6 ರ ನಂತರ ಬಿಡುಗಡೆ ಮಾಡುವಂತಿಲ್ಲ. ಇನ್ನು ನಾಳೆ ಯುಗಾದಿ ಹಾಗೂ ನಾಡಿದ್ದು ಅಂಬೇಡ್ಕರ್ ಜಯಂತಿ ಇದ್ದು, ಗುರುವಾರ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಭದ್ರಾವತಿ ನಗರಸಭೆ ಚುನಾವಣೆಗೆ ರಂಗು:
ಬಸವೇಶ್ ಬಿಡುಗಡೆಯಿಂದ ಭದ್ರಾವತಿಯ ನಗರಸಭೆ ಚುನಾವಣೆಗೆ ಇನ್ನಷ್ಟು ರಂಗು ಬರುವ ಸಾಧ್ಯತೆಗಳಿವೆ.