ETV Bharat / state

ಹುಣಸೋಡು ಕ್ವಾರಿ ಸ್ಫೋಟ ಪ್ರಕರಣ: ಮುಂಬೈನಲ್ಲಿ ಇನ್ನಿಬ್ಬರ ಬಂಧನ - ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ ಶಾಂತರಾಜು

ಸ್ಫೋಟವಾದಾಗಿನಿಂದ ತಲೆಮರೆಸಿಕೊಂಡಿದ್ದ ಕ್ರಷರ್ ಜಾಗದ ಮಾಲೀಕರಾದ ಶಂಕರಗೌಡ ಕುಲಕರ್ಣಿ (76) ಹಾಗೂ ಅವಿನಾಶ್ ಕುಲಕರ್ಣಿ (43) ರನ್ನು ಭದ್ರಾವತಿ ಟೌನ್ ಪೊಲೀಸ್ ಠಾಣೆಯ ಸಿಪಿಐ ಹಾಗೂ ವಿನೋಬನಗರದ ಪಿಎಸ್ಐ ಉಮೇಶ್ ರವರ ತಂಡ ಹಾವೇರಿ, ದಾವಣಗೆರೆಯಲ್ಲಿ ಬಂಧಿಸಿದೆ.

District Police Superintendent KM Shantaraju
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ ಶಾಂತರಾಜು
author img

By

Published : Feb 5, 2021, 10:49 PM IST

ಶಿವಮೊಗ್ಗ: ಹುಣಸೋಡು ಕಲ್ಲು ಕ್ವಾರಿಯಲ್ಲಿ ನಡೆದ ಸ್ಪೋಟ ಪ್ರಕರಣ ಸಂಬಂಧ ಮತ್ತೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ. ಶಾಂತರಾಜು ತಿಳಿಸಿದ್ದಾರೆ.

ಸ್ಪೋಟ ಪ್ರಕರಣ ಭೇದಿಸಲು 6 ಜನರ ತಂಡ ರಚಿಲಾಗಿತ್ತು. ಇದರಲ್ಲಿ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯ ಸಿಪಿಐ ಹಾಗೂ ಮಹಿಳಾ ಪೊಲೀಸ್ ಠಾಣೆಯ ಸಿಪಿಐ ಅಭಯ್ ಪ್ರಕಾಶ್ ರವರ ತಂಡ ಹುಣಸೋಡು ಸ್ಪೋಟ ಪ್ರಕರಣದಲ್ಲಿ ಸ್ಪೋಟಕ ಸರಬರಾಜು ಮಾಡಿದ ಆಂಧ್ರ ಪ್ರದೇಶದ ಅನಂತಪುರಂ ಜಿಲ್ಲೆಯ ರಾಯದುರ್ಗದಲ್ಲಿ ಪಿ. ಶ್ರೀರಾಮುಲು (68) ಹಾಗೂ ಅವರ ಪುತ್ರ ಮಂಜುನಾಥ ಸಾಯಿ (36) ರವರನ್ನು ಮುಂಬೈನಲ್ಲಿ ಬಂಧಿಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ ಶಾಂತರಾಜು ಮಾಹಿತಿ

ಇವರಿಬ್ಬರನ್ನು ಅನಂತಪುರಂಕ್ಕೆ ಹುಡುಕಲು ಹೋದಾಗ ಅವರಿಬ್ಬರು ಹೈದರಾಬಾದ್​ಗೆ ತೆರಳಿದ್ದಾಗಿ ತಿಳಿದು ಹೈದರಾಬಾದ್​​​​ಗೆ ತೆರಳಿದಾಗ ಅಲ್ಲಿಂದ ಮುಂಬೈಗೆ ಹೋಗಿರುವ ಬಗ್ಗೆ ಮಾಹಿತಿ ಪಡೆದು ಮುಂಬೈಗೆ ತೆರಳಿ, ಶ್ರೀರಾಮುಲು ಹಾಗೂ ಮಂಜುನಾಥ್ ಸಾಯಿ ಬಂಧಿಸಿ, ಶಿವಮೊಗ್ಗಕ್ಕೆ ಕರೆತರಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಬಂಧಿತ ಶ್ರೀರಾಮುಲು ಸ್ಪೋಟಕಗಳನ್ನು ಸಂಗ್ರಹಿಸುವ, ದಾಸ್ತಾನು ಗೋದಾಮು ಲೈಸನ್ಸ್ ಹೊಂದಿದ್ದಾರೆ. ಆದರೆ ಸ್ಪೋಟಕವನ್ನು ವಾಹನದಲ್ಲಿ ರವಾನೆ ಮಾಡಲು ಯಾವುದೇ ಲೈಸನ್ಸ್ ಹೊಂದಿರಲಿಲ್ಲ. ಈ ಬಗ್ಗೆ ತುಂಗಾನಗರ ಪೊಲೀಸ್ ಠಾಣೆಯ ಪಿಐ ದೀಪಕ್ ಹಾಗೂ ಸೊರಬ ಸಿಪಿಐ ಮರುಳ ಸಿದ್ದಪ್ಪನವರ ನೇತೃತ್ವದ ತಂಡ ಅನಂತಪುರಂನ ಗುಮ್ಮಟಘಟ್ಟ ಪೊಲೀಸ್ ಠಾಣೆಯಲ್ಲಿ ಅಕ್ರಮ ಸ್ಪೋಟಕ ದಾಸ್ತಾನು ಸಂಗ್ರಹದ ದೂರು ದಾಖಲಿಸಿದ್ದಾರೆ.

ಅಲ್ಲದೆ ಸ್ಪೋಟಕದ ಕುರಿತು ಆಂಧ್ರಪ್ರದೇಶದ ವಿಶಾಖಪಟ್ಟಣದ ಡೆಪ್ಯೂಟಿ ಕಂಟ್ರೋಲರ್ ಆಫ್ ಎಕ್ಸ್ ಪ್ಲೋಸಿವ್​ಗೆ ಶ್ರೀರಾಮುಲುರವರ ಲೈಸನ್ಸ್ ರದ್ದು ಮಾಡಬೇಕೆಂದು ಮನವಿ ಮಾಡಲಾಗಿದೆ. ಸ್ಫೋಟವಾದಾಗಿನಿಂದ ತಲೆಮರೆಸಿಕೊಂಡಿದ್ದ ಕ್ರಷರ್ ಜಾಗದ ಮಾಲೀಕರಾದ ಶಂಕರಗೌಡ ಕುಲಕರ್ಣಿ (76) ಹಾಗೂ ಅವಿನಾಶ್ ಕುಲಕರ್ಣಿ (43) ರನ್ನು ಭದ್ರಾವತಿ ಟೌನ್ ಪೊಲೀಸ್ ಠಾಣೆಯ ಸಿಪಿಐ ಹಾಗೂ ವಿನೋಬನಗರದ ಪಿಎಸ್ಐ ಉಮೇಶ್​ರವರ ತಂಡ ಹಾವೇರಿ, ದಾವಣಗೆರೆಯಲ್ಲಿ ಬಂಧಿಸಿದೆ.

ಇದರಿಂದಾಗಿ ಸದರಿ ಪ್ರಕರಣದಲ್ಲಿ ಒಟ್ಟು 8 ಜನರನ್ನು ಬಂಧಿಸಿದಂತೆ ಆಗಿದೆ. ಮೊದಲು ಸುಧಾಕರ್, ನರಸಿಂಹ, ಮಹಮದ್ ಮುಮ್ತಾಜ್, ರಶೀದ್ ರನ್ನು ಬಂಧಿಸಲಾಗಿತ್ತು. ಈಗ ಶ್ರೀರಾಮುಲು, ಮಂಜುನಾಥ ಸಾಯಿ ಹಾಗೂ ಶಂಕರಗೌಡ ಕುಲಕರ್ಣಿ ಹಾಗೂ ಅವಿನಾಶ್ ಕುಲಕರ್ಣಿರನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಪಾದಯಾತ್ರೆ ಸ್ಥಳಕ್ಕೆ ಆಗಮಿಸಿದ ಶಾಸಕ ಯತ್ನಾಳ್​ ನೇತೃತ್ವದ ಪಂಚಮಸಾಲಿ ನಾಯಕರ ತಂಡ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.