ETV Bharat / state

ನಾಳೆ ಶಿವಮೊಗ್ಗ ವಿಮಾನ ನಿಲ್ದಾಣ ಲೋಕಾರ್ಪಣೆ: ನಗರದೆಲ್ಲೆಡೆ ರಾರಾಜಿಸುತ್ತಿರುವ ಕಮಲದ ಫ್ಲೆಕ್ಸ್ - ಬಿಎಸ್​ವೈ ಹುಟ್ಟುಹಬ್ಬಕ್ಕೆ ವಿಮಾನ ನಿಲ್ದಾಣ ಉದ್ಘಾಟನೆ

ಶಿವಮೊಗ್ಗ ಜಿಲ್ಲೆಯ ಸೋಗಾನೆ ಬಳಿ ನಿರ್ಮಾಣವಾಗಿರುವ ವಿಮಾನ ನಿಲ್ದಾಣವನ್ನು ನಾಳೆ ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ.

Shivamogga airport
ಶಿವಮೊಗ್ಗ ವಿಮಾನ ನಿಲ್ದಾಣ
author img

By

Published : Feb 26, 2023, 4:51 PM IST

Updated : Feb 26, 2023, 7:17 PM IST

ಶಿವಮೊಗ್ಗದಲ್ಲಿ ರಾರಾಜಿಸುತ್ತಿರುವ ಕಮಲದ ಫ್ಲೆಕ್ಸ್​ಗಳು

ಶಿವಮೊಗ್ಗ: ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯ ಜನರು ಮತ್ತು ಬಿಜೆಪಿಯ ಕಟ್ಟಾಳು ಬಿ ಎಸ್​ ಯಡಿಯೂರಪ್ಪ ಅವರ ಬಹುದಿನಗಳ ಕನಸು ನನಸಾಗಿದೆ. ನಾಳೆ ಜಿಲ್ಲೆಯ ಜನತೆಗೆ ಮರೆಯಲಾಗದ ಕ್ಷಣವಾಗಲಿದೆ. ಸೋಗಾನೆ ಬಳಿ ನೂತನವಾಗಿ ನಿರ್ಮಿಸಿರುವ ವಿಮಾನ ನಿಲ್ದಾಣವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ. ಸೋಮವಾರ ಬೆಳಗ್ಗೆ 11: 30 ಕ್ಕೆ ದೆಹಲಿಯಿಂದ ನೇರವಾಗಿ ಪ್ರಧಾನಿ ಅವರು ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ನೂತನ ಟರ್ಮಿನಲ್ ಉದ್ಘಾಟಿಸಿ, ವೀಕ್ಷಿಸಿದ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

2 ಗಂಟೆಯಿಂದ‌ 1:30 ರ ತನಕ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ನಂತರ ಅಲ್ಲಿಂದ ಸೀದಾ ಬೆಳಗಾವಿಗೆ ಪ್ರಧಾನ ಮಂತ್ರಿಗಳು ತೆರಳಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಜಿಲ್ಲಾಧಿಕಾರಿ ಡಾ. ಸೆಲ್ವಮಣಿ, ಎಸ್​ಪಿ ಮಿಥುನ್ ಕುಮಾರ್ ಸೇರಿದಂತೆ ವಿಮಾನ ನಿಲ್ದಾಣದ ಚೀಪ್ ಟೆಕ್ನಿಷಿಯನ್ ಬ್ರಿಗೇಡಿಯರ್ ಪೂರ್ವಿಮಠ, ನಿರ್ದೇಶಕರು ಹಾಗೂ ಅನೇಕ ಗಣ್ಯರು ಉಪಸ್ಥಿತರಿರಲಿದ್ದಾರೆ.

ಬಿಎಸ್​ವೈ ಹುಟ್ಟುಹಬ್ಬಕ್ಕೆ ವಿಮಾನ ನಿಲ್ದಾಣ ಉದ್ಘಾಟನೆ: ಸೋಮವಾರ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು 80ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಇದರಿಂದ ನಾಳೆಯೇ ಶಿವಮೊಗ್ಗದ ವಿಮಾನ ನಿಲ್ದಾಣ ಉದ್ಘಾಟನೆ ಮಾಡಲಾಗುತ್ತಿದೆ. ರಾಜ್ಯದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ ಯಡಿಯೂರಪ್ಪನವರು ಮುಂದೆ ತಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ. ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಮಾಡಬೇಕು ಎಂದು ಯಡಿಯೂರಪ್ಪ ಅವರು ಕನಸು ಕಂಡಿದ್ದರು. ಆ ಕನಸು ಇದೀಗ ನನಸಾಗಿದೆ. ಈ ಹಿನ್ನೆಲೆಯಲ್ಲಿ ಮೋದಿ ಅವರು ವಿಮಾನ ನಿಲ್ದಾಣದ ಉದ್ಘಾಟನೆ ಮಾಡಿ, ಅವರಿಗೆ ಒಂದು ರೀತಿಯಲ್ಲಿ ಮನಸ್ಸಿಗೆ ಸಂತೋಷವನ್ನುಂಟು ಮಾಡಲಿದ್ದಾರೆ.

ಶಿವಮೊಗ್ಗ ವಿಮಾನ ನಿಲ್ದಾಣ
ಶಿವಮೊಗ್ಗ ವಿಮಾನ ನಿಲ್ದಾಣ

ಇದನ್ನೂ ಓದಿ: ಮುಂದೆ ಕಮಲ, ಹಿಂದೆ ಹದ್ದು: ವಿಭಿನ್ನವಾಗಿ ನಿರ್ಮಾಣಗೊಂಡ ಶಿವಮೊಗ್ಗ ವಿಮಾನ ನಿಲ್ದಾಣದ ವಿಶೇಷತೆಗಳೇನು?

ನಗರದಲ್ಲಿ ರಾರಾಜಿಸುತ್ತಿವೆ, ಫ್ಲೆಕ್ಸ್​, ವಿಮಾನದ ಮಾಡೆಲ್​ಗಳು.. ನಾಳೆ ವಿಮಾನ ನಿಲ್ದಾಣ ಉದ್ಘಾಟನೆ ಅಂಗವಾಗಿ ಜನರನ್ನು ಆಕರ್ಷಿಸಲು ನಗರದ ಅಮಿರ್ ಅಹಮದ್ ವೃತ್ತದಲ್ಲಿ ವಿಮಾನದ ಒಂದು ಮಾಡೆಲ್ ಅನ್ನು ತಂದು ಇಡಲಾಗಿದೆ. ಇದು ‌ನಿಜಕ್ಕೂ ಆಕರ್ಷಿಣೀಯವಾಗಿದ್ದು, ಶಿವಮೊಗ್ಗದ ಎಲ್ಲಾ ಕಡೆ ಕಮಲದ ಬಂಟಿಂಗ್​ಗಳು, ಬಿಜೆಪಿ ನಾಯಕರುಗಳ ಫ್ಲೆಕ್ಸ್​ಗಳು ರಾರಾಜಿಸುತ್ತಿವೆ. ಶಿವಪ್ಪ ನಾಯಕ ಮಾಲ್​ನಲ್ಲಿ ಸುಮಾರು‌ 100 ಅಡಿ ಉದ್ದದ ಫ್ಲೆಕ್ಸ್ ಹಾಕಿದ್ದು, ಅದರಲ್ಲಿ ರಾಷ್ಟ್ರಕವಿ ಕುವೆಂಪು ವಿಮಾನ ನಿಲ್ದಾಣ ಎಂದು ಬರೆಯಲಾಗಿದೆ. ಪಕ್ಕದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವನ್ನು ಹಾಕಲಾಗಿದೆ.

ಇದನ್ನೂ ಓದಿ: ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಎಸ್​ಪಿಜಿ ತಂಡ ಆಗಮನ- ವಿಡಿಯೋ

ರಸ್ತೆ ಮಾರ್ಗದಲ್ಲಿ ಬದಲಾವಣೆ: ಸೋಮವಾರ ದಿನ ಪ್ರಧಾನಿಗಳು ಜಿಲ್ಲೆಗೆ ಆಗಮಿಸುತ್ತಿರುವುದರಿಂದ ಕೆಲ ಮಾರ್ಗಗಳಲ್ಲಿ ಬದಲಾವಣೆ ಮಾಡಲಾಗಿದೆ. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಸಂಗೀತ ಕಾರ್ಯಕ್ರಮ ಜರುಗಲಿದೆ.

Last Updated : Feb 26, 2023, 7:17 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.