ಶಿವಮೊಗ್ಗ : ಕೊರೊನಾ ಹಿನ್ನೆಲೆ ಶಿಮೂಲ್ ಇಂದು ಸಂಜೆ ಹಾಗೂ ನಾಳೆ ಬೆಳಗ್ಗೆ ಹಾಲು ಖರೀದಿಸದಿರಲು ನಿರ್ಧರಿಸಿದೆ ಎಂದು ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಲಾಕ್ಡೌನ್ ಹಿನ್ನೆಲೆ ಹಾಲಿನ ಸಂಗ್ರಹ ಹೆಚ್ಚಾಗುತ್ತಿದೆ. ಬೇಡಿಕೆ ಕಡಿಮೆಯಾಗುತ್ತಿದೆ. ಈಗಾಗಲೇ ಹಾಲಿನ ಸಂಗ್ರಹದಂತೆ ಮಾರಾಟಕ್ಕೂ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಆದರೂ ಸಹ ಹಾಲಿನ ಬೇಡಿಕೆ ಮೊದಲಿನಷ್ಟು ಇಲ್ಲದ ಕಾರಣ ಅನಿವಾರ್ಯವಾಗಿ ಹಾಲು ಸಂಗ್ರಹ ನಿಲ್ಲಿಸಲು ನಿರ್ಧರಿಸಲಾಗಿದೆ.
ಇದರಿಂದ ಗ್ರಾಮಾಂತರ ಭಾಗಗಳಲ್ಲಿ ಹೈನುಗಾರಿಕೆ ನಡೆಸುತ್ತಿದ್ದ ಮಹಿಳೆಯರು ಹಾಗೂ ಸಂಘಗಳಿಗೆ ಭಾರಿ ನಷ್ಟವಾಗಲಿದೆ. ಮುಂದಿನ ಪರಿಸ್ಥಿತಿ ನೋಡಿ ಹಾಲು ಸಂಗ್ರಹದ ಬಗ್ಗೆ ತೀರ್ಮಾನ ಮಾಡಲಾಗುವುದು ಎಂದು ಶಿಮೂಲ್ ತಿಳಿಸಿದೆ.