ಶಿವಮೊಗ್ಗ: ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡೆಯ ಪುರುಷರ ವಿಭಾಗದ ಹಾಕಿ ವಿಜೇತ ತಂಡದಲ್ಲಿನ ಆಟಗಾರರಾದ ಜಲ್ಲೆಯ ಇಬ್ಬರು ಯುವಕರನ್ನು ಜಿಲ್ಲೆಯ ಹಾಕಿ ಅಭಿಮಾನಿಗಳು ಅಭಿನಂದಿಸಿದ್ದಾರೆ.
ಒಡಿಶಾದ ಭುವನೇಶ್ವರದಲ್ಲಿ ನಡೆದ ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡೆಯ ಪುರುಷರ ವಿಭಾಗದ ಹಾಕಿ ಕ್ರೀಡೆಯಲ್ಲಿ ಬೆಂಗಳೂರು ಸೆಂಟ್ರಲ್ ವಿಶ್ವವಿದ್ಯಾಲಯ ತಂಡವು 5-4 ಗೋಲುಗಳಿಂದ ಕೇಂದ್ರೀಯ ವಿಶ್ವವಿದ್ಯಾಲಯ ತಂಡವನ್ನು ಸೋಲಿಸಿ ಸ್ವರ್ಣ ಪದಕ ಗೆದ್ದಿತ್ತು.
ಬೆಂಗಳೂರು ಸೆಂಟ್ರಲ್ ವಿಶ್ವವಿದ್ಯಾಲಯ ತಂಡದ ಪರ ಉತ್ತಮ ಆಟ ಪ್ರದರ್ಶಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಶಿವಮೊಗ್ಗದ ಬಸವನಗುಡಿಯ ಕೆ.ಆರ್.ಭರತ್ ಮತ್ತು ಗಾಂಧಿ ಬಜಾರಿನ ಕುಮಾರ್, ಶಿವಮೊಗ್ಗದ ಕೀರ್ತಿ ಹೆಚ್ಚಿಸಿದ್ದಾರೆ. ಈ ಹಿನ್ನೆಲೆ ಶಿವಮೊಗ್ಗದ ಹಾಕಿ ಕ್ರೀಡಾಳುಗಳು, ಅಭಿಮಾನಿಗಳು ಜಿಲ್ಲೆಯ ಈ ಇಬ್ಬರು ಆಟಗಾರರಿಗೆ ಅಭಿನಂದನೆ ಸಲ್ಲಿಸಿದ್ದಾರೆ.