ಶಿವಮೊಗ್ಗ: ಸಕ್ರೆಬೈಲು ಆನೆ ಬಿಡಾರದ ಗಣೇಶ ಎಂಬ ಹೆಸರಿನ ಆನೆಯೊಂದು ಇಂದು ನಿಧನವಾಗಿದೆ. ಅನೆಯು ದಾವಣಗೆರೆಯ ಶಾಸಕ ಶ್ಯಾಮನೂರು ಶಿವಶಂಕರಪ್ಪ ಅವರ ಮಾಲೀಕತ್ವಕ್ಕೆ ಒಳಪಟ್ಟಿದೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿ ಈ ಆನೆಯನ್ನು ದಾವಣಗೆರೆಯಿಂದ ಸಕ್ರೆಬೈಲು ಆನೆ ಬಿಡಾರಕ್ಕೆ (2013-14 ರಲ್ಲಿ) ಬಂದಿತ್ತು.
ಅರ್ಥೈಟಿಸ್(arthritis) ಎಂಬ ಕಾಯಿಲೆಯಿಂದ ಬಳಲುತ್ತಿದ ಗಣೇಶ ಆನೆಯು ನಿಲ್ಲಲಾಗದೇ ಸಾಕಷ್ಟು ಸಮಸ್ಯೆ ಎದುರಿಸುತ್ತಿತ್ತು. ಇದರಿಂದಾಗಿ ಸಕ್ರೆಬೈಲು ಆನೆ ಬಿಡಾರದಲ್ಲಿ ಚಿಕಿತ್ಸೆ ಹಾಗೂ ಆರೈಕೆ ಮಾಡಲಾಗುತ್ತಿತ್ತು. ಕಳೆದ ಎಂಟು ವರ್ಷಗಳಿಂದ ಬಿಡಾರದಲ್ಲಿ ಚಿಕಿತ್ಸೆಯಿಂದ ಗುಣಮುಖವಾಗಿ ಓಡಾಡುವ ಮಟ್ಟದಲ್ಲಿತ್ತು.
ಕಾಲಿನಲ್ಲಿ ಉಂಟಾಗಿದ್ದ ಗಂಟಿನಿಂದ ಸಾಕಷ್ಟು ಸಲ ಬಿದ್ದಿತ್ತು. ತನ್ನ ಕಾಯಿಲೆಯಿಂದ ಒಂದು ಕಡೆ ನಿಲ್ಲಲು ಆಗದೇ ತನ್ನ ದೇಹವನ್ನು ಅಲುಗಾಡಿಸುತ್ತಾ ತನ್ನ ದೇಹದ ಬ್ಯಾಲೆನ್ಸ್ ಮಾಡಿಕೊಳ್ಳುತ್ತಿತ್ತು. ಇಂದು ಅನಾರೋಗ್ಯದಿಂದ ಸಾವನ್ನಪ್ಪಿದೆ. ಗಣೇಶನ ಸಾವಿನಿಂದ ಇದರ ಆರೈಕೆ ಮಾಡುತ್ತಿದ್ದವರು ನೋವಿನಲ್ಲಿದ್ದಾರೆ.
ಇದನ್ನೂ ಓದಿ: ವೇಗವಾಗಿ ಬೆಳೆದ ಜಗತ್ತಿನ ಜನಸಂಖ್ಯೆ: ಎಂಟು ನೂರು ಕೋಟಿಯತ್ತ ಮಾನವರ ಸಂಖ್ಯೆ!