ETV Bharat / state

ಪ್ರತಿಭಾ ಪುರಸ್ಕಾರ: ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ

ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಫೆ. 24ರಂದು ಶಿವಮೊಗ್ಗದಲ್ಲಿ ವಿದ್ಯಾರ್ಥಿ ವೇತನ ಹಂಚಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಪ್ರತಿಭಾ ಪುರಸ್ಕಾರ
author img

By

Published : Feb 22, 2019, 7:27 PM IST

ಶಿವಮೊಗ್ಗ:ಬೆಂಗಳೂರಿನ ಜೆ.ಪಿ. ನಾರಾಯಣ ಸ್ವಾಮಿ ಪ್ರತಿಷ್ಠಾನ, ಜಿಲ್ಲಾ ಆರ್ಯ ಈಡಿಗ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಫೆ. 24ರಂದು ವಿದ್ಯಾರ್ಥಿ ವೇತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಶ್ರೀಧರ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಡಿಗ ಸಂಘದ ರಾಜ್ಯಾಧ್ಯಕ್ಷ ಹಾಗೂ ಉದ್ಯಮಿಗಳು ಆಗಿದ್ದ ದಿ. ಜೆ.ಪಿ. ನಾರಾಯಣಸ್ವಾಮಿಯವರ ಹೆಸರಿನಲ್ಲಿ ಪ್ರತಿಷ್ಠಾನ ಸ್ಥಾಪಿಸಲಾಗಿದೆ. ಪ್ರತಿಷ್ಠಾನದ ಅಧ್ಯಕ್ಷರಾಗಿ ಅವರ ಪುತ್ರ ಜೆ.ಪಿ. ಸುಧಾಕರ್ ಅಧಿಕಾರ ವಹಿಸಿಕೊಂಡಿದ್ದಾರೆ. ಅವರು ಸಮಾಜದ ಹಿಂದುಳಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಿದ್ದು, ರಾಜ್ಯದಲ್ಲಿನ ಕೆಲ ಬಡ ವಿದ್ಯಾರ್ಥಿಗಳು ಇದರ ಲಾಭ ಪಡೆದುಕೊಳ್ಳಲಿದ್ದಾರೆ ಎಂದರು.

ಪ್ರತಿಭಾ ಪುರಸ್ಕಾರ

ಉತ್ತರ ಕನ್ನಡ, ದಕ್ಷಿಣ ಕನ್ನಡ ಸೇರಿದಂತೆ ಸುಮಾರು 500 ಈಡಿಗ ಸಮಾಜದ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಸಮಾಜದ ಸಮುದಾಯ ಭವನದಲ್ಲಿ ನೀಡಲಾಗುವುದು. ಅದರಲ್ಲೂ ಪಿಯುಸಿ ನಂತರದ ವಿದ್ಯಾಭ್ಯಾಸಕ್ಕಾಗಿ ಈ ಹಣ ನೀಡಲಾಗುತ್ತದೆ. ಪದವಿಯಲ್ಲಿ ಓದುತ್ತಿರುವವರಿಗೆ ಐದು ಸಾವಿರ ರೂ., ಉನ್ನತ ಶಿಕ್ಷಣ ಓದುತ್ತಿರುವವರಿಗೆ ಎಂಟು ಸಾವಿರ ರೂ. ಹಾಗೂ ವೈದ್ಯಕೀಯ ವಿದ್ಯಾಭ್ಯಾಸ ಮಾಡುವವರಿಗೆ 10,000 ರೂ. ನೀಡಲಾಗುವುದು ಎಂದು ಈ ವೇಳೆ ತಿಳಿಸಿದರು.

Intro:ಶಿವಮೊಗ್ಗ
ಬೆಂಗಳೂರಿನ ಜೆ ಪಿ ನಾರಾಯಣ ಸ್ವಾಮಿ ಪ್ರತಿಷ್ಠಾನ ಜಿಲ್ಲಾ ಆರ್ಯ ಈಡಿಗ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಆರ್ಥಿಕವಾಗಿ ಹಿಂದುಳಿದ ಸಮಾಜದ ಬಡ ವಿದ್ಯಾರ್ಥಿಗಳಿಗೆ ಗಳಿಗೆ ಫೆ.24ರ ಬೆಳಗ್ಗೆ ಒಂಬತ್ತು ಮೂವತ್ತಕ್ಕೆ ವಿದ್ಯಾರ್ಥಿ ವೇತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಶ್ರೀಧರ್ ತಿಳಿಸಿದ್ದಾರೆ

Body:ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈಡಿಗ ಸಂಘದ ರಾಜ್ಯಾಧ್ಯಕ್ಷ ಹಾಗೂ ಹಾಗೂ ಉದ್ಯಮಿಗಳು ಆಗಿದ್ದ ದಿ. ಜೆ ಪಿ ನಾರಾಯಣ ಸ್ವಾಮಿ ಅವರ ಹೆಸರಿನಲ್ಲಿ ಪ್ರತಿಷ್ಠಾನ ಸ್ಥಾಪಿಸಲಾಗಿದೆ .ಪ್ರತಿಷ್ಠಾನದ ಅಧ್ಯಕ್ಷರಾಗಿ ಅವರ ಪುತ್ರ ಜೆಪಿ ಸುಧಾಕರ್ ಅವರು ಅಧಿಕಾರ ವಹಿಸಿಕೊಂಡಿದ್ದು. ಸಮಾಜದ ಹಿಂದುಳಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಿದ್ದಾರೆ ಇದರ ಪ್ರಯೋಜನ ರಾಜ್ಯದಲ್ಲಿರುವ ಸಮಾಜದ ಬಡ ವಿದ್ಯಾರ್ಥಿಗಳು ಪಡೆದುಕೊಳ್ಳಲಿದ್ದಾರೆ ಎಂದರು.

Conclusion:ಪಿ ಯು ಸಿ ನಂತರದ ವಿದ್ಯಾಭ್ಯಾಸಕ್ಕಾಗಿ ಈ ಹಣ ನೀಡಲಾಗುತ್ತದೆ ಪದವಿಯಲ್ಲಿ ಓದುತ್ತಿರುವ ವರೆಗೆ ಐದು ಸಾವಿರ ರೂ ಉನ್ನತ ಶಿಕ್ಷಣ ಓದುತ್ತಿರುವವರಿಗೆ ಎಂಟು ಸಾವಿರ ರೂ ಹಾಗೂ ವೈದ್ಯಕೀಯ ವಿದ್ಯಾಭ್ಯಾಸ ಮಾಡುವರಿಗೆ 10,000 ರೂ ಗಳನ್ನು ನೀಡಲಾಗುವುದು ಎಂದರು.
ಉತ್ತರ ಕನ್ನಡ, ದಕ್ಷಿಣ ಕನ್ನಡ ಸೇರಿದಂತೆ ಸುಮಾರು 500 ಈಡಿಗ ಸಮಾಜದ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಸಮಾಜದ ಸಮುದಾಯ ಭವನದಲ್ಲಿ ನೀಡಲಾಗುವುದು ಎಂದರು
ಭೀಮಾನಾಯ್ಕ ಎಸ್ ಶಿವಮೊಗ್ಗ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.