ಶಿವಮೊಗ್ಗ: ಎಸ್ಬಿಐ ಬ್ಯಾಂಕ್ ಮ್ಯಾನೇಜರ್ವೊಬ್ಬರು ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ರಾಜೇಂದ್ರ (45) ನೇಣಿಗೆ ಶರಣಾದ ಬ್ಯಾಂಕ್ ಮ್ಯಾನೇಜರ್. ಇವರು ಶಿವಮೊಗ್ಗದ ವಿನೋಬನಗರದಲ್ಲಿ ವಾಸವಿದ್ದು, ಭದ್ರಾವತಿ ತಾಲೂಕಿನ ನಾಗತಿ ಬೆಳಗಲು ಗ್ರಾಮದ ಎಸ್ಬಿಐ ಬ್ಯಾಂಕ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.
ರಾಜೇಂದ್ರ ಅವರ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಈ ಕುರಿತು ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.