ETV Bharat / state

ಸಾಹಿತಿ ಭಗವಾನ್ ವಿಚಾರದಲ್ಲಿ ಸಾಗರದ ಕೋರ್ಟ್ ಮೈಸೂರು ಎಸ್​ಪಿಗೆ ನೋಟಿಸ್ - ಈಟಿವಿ ಭಾರತ್​ ಕನ್ನಡ

ರಾಮಮಂದಿರ ಏಕೆ ಬೇಕು ಕೃತಿಯ ವಿರುದ್ಧವಾಗಿ ಸಾಗರ ತಾಲೂಕಿನ ಇಕ್ಕೇರಿಯ ಸಂಘ ಪರಿವಾರದ ಮಹಾಬಲೇಶ್ವರ್ ಎಂಬುವವರು ಹಾಕಿದ್ದ ದೂರಿನ ವಿಚಾರಣೆಗೆ ಭಗವಾನ್​ರನ್ನು ಕೋರ್ಟ್​ಗೆ ಹಾಜರು ಪಡಿಸುವಂತೆ ಮೈಸೂರು ಎಸ್​ಪಿಗೆ ಸಾಗರ ಕೋರ್ಟ್​ ನೋಟಿಸ್ ಜಾರಿ ಮಾಡಿದೆ.

Etv Bsagar-court-notice-to-mysore-sp-in-bhagavan-caseharat
ಸಾಹಿತಿ ಭಗವಾನ್ ವಿಚಾರದಲ್ಲಿ ಸಾಗರದ ಕೋರ್ಟ್ ಮೈಸೂರು ಎಸ್​ಪಿಗೆ ನೋಟಿಸ್
author img

By

Published : Aug 31, 2022, 8:24 AM IST

ಶಿವಮೊಗ್ಗ: ಸಾಹಿತಿ ಭಗವಾನ್​ರವರ ವಿವಾದಾತ್ಮಕ ಕೃತಿ ರಾಮಮಂದಿರ ಏಕೆ ಬೇಕು ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದ ಕುರಿತು ಪೊಲೀಸರ ವಿರುದ್ದ ಸಾಗರದ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಸಾಗರದ ಜೆಎಂಎಫ್​ಸಿ ನ್ಯಾಯಲಯ ಸಾಹಿತಿ ಭಗವಾನ್​ರನ್ನು ಕೋರ್ಟ್​ಗೆ ಹಾಜರು ಪಡಿಸುವಂತೆ ಮೈಸೂರು ಎಸ್​ಪಿಗೆ ನೋಟಿಸ್ ಜಾರಿ ಮಾಡಿದೆ.

ಸಾಹಿತಿ ಭಗವಾನ್​ರವರ ರಾಮಮಂದಿರ ಏಕೆ ಬೇಕು ಕೃತಿಯ ವಿರುದ್ಧ ಸಾಗರದ ಜೆಎಂಎಪ್​ಸಿ‌ ನ್ಯಾಯಲಯದಲ್ಲಿ ಸಾಗರ ತಾಲೂಕಿನ ಇಕ್ಕೇರಿಯ ಸಂಘ ಪರಿವಾರದ ಮಹಾಬಲೇಶ್ವರ್ ಎಂಬುವರು ಖಾಸಗಿ ಪ್ರಕರಣ ದಾಖಲಿಸಿದ್ದರು. ಪ್ರಕರಣದ ವಿಚಾರಣೆಗಾಗಿ ಸಾಗರ ಕೋರ್ಟ್ 30-08-2022 ರಂದು ಕೋರ್ಟ್​ಗೆ ಹಾಜರಾಗಲು ನೋಟಿಸ್ ಜಾರಿ ಮಾಡಿತ್ತು.

ಆದರೆ ಸಾಗರದ ಟೌನ್ ಪೊಲೀಸರು ಸಾಹಿತಿ ಭಗವಾನ್ ಅವರಿಗೆ ನೋಟಿಸ್ ಜಾರಿ ಮಾಡದ ಹಿನ್ನೆಲೆಯಲ್ಲಿ ನ್ಯಾಯಲಯದ ನ್ಯಾಯಧೀಶರು ಮೈಸೂರು ಎಸ್​ಪಿಗೆ 2-11-2022 ರಂದು ಭಗವಾನ್​ರನ್ನು ಕೋರ್ಟ್​ಗೆ ಹಾಜರು ಪಡಿಸುವಂತೆ ನೋಟಿಸ್ ಜಾರಿ ಮಾಡಿದೆ.

ಇದನ್ನೂ ಓದಿ : ಈ ಬಾರಿ ಗಣೇಶೋತ್ಸವದಲ್ಲಿ ಡಿಜೆ ಬಳಸುವಂತಿಲ್ಲ.. ಎಸ್​ಪಿ ಲಕ್ಷ್ಮೀ ಪ್ರಸಾದ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.