ETV Bharat / state

ತಾಂಡಾಗಳನ್ನು ಕಂದಾಯ ಗ್ರಾಮ ಎಂದು ಘೋಷಿಸುವಂತೆ ಎಸ್.ಶಿವಮೂರ್ತಿ ನಾಯ್ಕ ಒತ್ತಾಯ - latest shimoga news

ರಾಜ್ಯದ ಎಲ್ಲ ತಾಂಡಾಗಳನ್ನು ಕಂದಾಯ ಗ್ರಾಮ ಎಂದು ಘೋಷಿಸುವಂತೆ ರಾಜ್ಯ ಸರ್ಕಾರಕ್ಕೆ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಎಸ್.ಶಿವಮೂರ್ತಿ ನಾಯ್ಕ ಒತ್ತಾಯಿಸಿದರು.

ತಾಂಡಗಳನ್ನು ಕಂದಾಯ ಗ್ರಾಮವೆಂದು ಘೋಷಿಸುವಂತೆ ಎಸ್.ಶಿವಮೂರ್ತಿ ನಾಯ್ಕ ಒತ್ತಾಯ
author img

By

Published : Oct 22, 2019, 3:41 PM IST

ಶಿವಮೊಗ್ಗ: ರಾಜ್ಯದ ಎಲ್ಲ ತಾಂಡಾಗಳನ್ನು ಕಂದಾಯ ಗ್ರಾಮ ಎಂದು ಘೋಷಿಸುವಂತೆ ರಾಜ್ಯ ಸರ್ಕಾರಕ್ಕೆ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಎಸ್.ಶಿವಮೂರ್ತಿ ನಾಯ್ಕ ಒತ್ತಾಯಿಸಿದರು.

ತಾಂಡಗಳನ್ನು ಕಂದಾಯ ಗ್ರಾಮವೆಂದು ಘೋಷಿಸುವಂತೆ ಎಸ್.ಶಿವಮೂರ್ತಿ ನಾಯ್ಕ ಒತ್ತಾಯ

ಸೋಮವಾರದಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿವಮೂರ್ತಿ ನಾಯ್ಕ, ರಾಜ್ಯ ಸರಕಾರ ಈಗಾಗಲೇ ಕೆಲವು ತಾಂಡಾಗಳನ್ನು ಕಂದಾಯ ಗ್ರಾಮವನ್ನಾಗಿ ಘೋಷಣೆ ಮಾಡಿದ್ದರೂ ಸಹ ಕಂದಾಯ ಇಲಾಖೆಯ ಅಧಿಕಾರಿಗಳು ಯಾವುದೇ ಮೂಲ ಸೌಲಭ್ಯ ಒದಗಿಸದೇ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಆರೋಪಿಸಿದರು.

ತಾಂಡಾಗಳನ್ನು ಕಂದಾಯ ಗ್ರಾಮವಾಗಿಸುವ ಮಸೂದೆಗೆ ರಾಷ್ಟ್ರಪತಿಗಳು ಅನುಮೋದನೆ ನೀಡಿದರೂ ರಾಜ್ಯ ಸರ್ಕಾರ ಘೋಷಣೆ ಮಾಡಿಲ್ಲ. ಲಂಬಾಣಿ ಮತ್ತಿತರ ಶೋಷಿತ, ದಲಿತ ಬುಡಕಟ್ಟುಗಳ ತಾಂಡಾ, ಹಟ್ಟಿ, ಹಾಡಿ, ವಾಡಿ ಮುಂತಾದ ಪಾಳ್ಯ ನಿವಾಸಿಗಳು ರಸ್ತೆ, ಸಾರಿಗೆ, ವಿದ್ಯುತ್, ಕುಡಿವ ನೀರು, ಅಂಗನವಾಡಿ ಇತ್ಯಾದಿ ಮೂಲ ಸೌಲಭ್ಯವಿಲ್ಲದೇ ವಂಚಿತವಾಗಿದ್ದಾರೆ. ಇವುಗಳು ಕಂದಾಯ ಗ್ರಾಮ ಎಂದು ಘೋಷಣೆಯಾದರೆ ಮೂಲ ಸೌಲಭ್ಯ ಸಿಕ್ಕಂತಾಗುತ್ತದೆಯೆಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಕುಮಾರನಾಯ್ಕ, ಹನುಮಂತ ನಾಯ್ಕ, ಮನೋಹರ್ ನಾಯ್ಕ, ಮಂಜುಳಾಬಾಯಿ, ಗಿರೀಶ್, ಕೃಷ್ಣಾನಾಯ್ಕ ಮತ್ತಿತರರು ಹಾಜರಿದ್ದರು.

Intro:ಶಿವಮೊಗ್ಗ,

ತಾಂಡಗಳನ್ನು ಕಂದಾಯ ಗ್ರಾಮವೆಂದು ಘೋಷಿಸಿ

ರಾಜ್ಯದ ಎಲ್ಲ ತಾಂಡಗಳನ್ನು ಕಂದಾಯ ಗ್ರಾಮವೆಂದು ರಾಜ್ಯ ಸರಕಾರ ಘೋಷಿಸುವಂತೆ ಒತ್ತಾಯಿಸಿ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಎಸ್.ಶಿವಮೂರ್ತಿ ನಾಯ್ಕ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ರಾಜ್ಯ ಸರಕಾರ ಈಗಾಗಲೇ ಕೆಲವು ತಾಂಡಗಳನ್ನು ಕಂದಾಯ ಗ್ರಾಮವನ್ನಾಗಿ ಘೋಷಣೆ ಮಾಡಿದ್ದರು ಸಹ ಕಂದಾಯ ಇಲಾಖೆಯ ಅಕಾರಿಗಳು ಯಾವುದೇ ಮೂಲಭೂತ ಸೌಲಭ್ಯ ಒದಗಿಸದೇ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಆರೋಪಿಸಿದರು.
ತಾಂಡಗಳನ್ನು ಕಂದಾಯ ಕಂದಾಯ ಗ್ರಾಮವಾಗಿಸುವ ಮಸೂದೆಗೆ ರಾಷ್ಟ್ರಪತಿಗಳು ಅನುಮೋದನೆ ನೀಡಿದರೂ, ರಾಜ್ಯ ಸರಕಾರ ಎಲ್ಲ ತಾಂಡಗಳನ್ನು ಕಂದಾಯ ಗ್ರಾಮಗಳೆಂದು ಘೋಷಣೆ ಮಾಡಿಲ್ಲ. ಲಂಬಾಣಿ ಮತ್ತಿತರ ಶೋಷಿತ, ದಲಿತ ಬುಡಕಟ್ಟುಗಳ ತಾಂಡ, ಹಟ್ಟಿ, ಹಾಡಿ, ವಾಡಿ ಮುಂತಾದ ಪಾಳ್ಯ ನಿವಾಸಿಗಳಿಗೆ ಮೂಲಭೂತ ಸೌಲಭ್ಯಗಳಿಲ್ಲ. ರಸ್ತೆ,ಸಾರಿಗೆ, ವಿದ್ಯುತ್, ಕುಡಿಯುವ ನೀರು, ಪಡಿತರ, ಅಂಗನವಾಡಿ ಇತ್ಯಾದಿ ಮೂಲಭೂತ ಸೌಲಭ್ಯವಿಲ್ಲದೇ ವಂಚಿತವಾಗಿವೆ. ಇವುಗಳನ್ನು ಕಂದಾಯ ಗ್ರಾಮವೆಂದು ಘೋಷಣೆಯಾದರೆ ಮೂಲಭೂತ ಸೌಲಭ್ಯ ಸಿಕ್ಕಂತಾಗುತ್ತದೆ ಎಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಪ್ರಮುಖರಾದ ಕುಮಾರನಾಯ್ಕ, ಹನುಮಂತ ನಾಯ್ಕ, ಮನೋಹರ್ ನಾಯ್ಕ, ಮಂಜುಳಾಬಾಯಿ, ಗಿರೀಶ್, ಕೃಷ್ಣಾನಾಯ್ಕ ಮತ್ತಿತರರು ಹಾಜರಿದ್ದರು.
ಭೀಮಾನಾಯ್ಕ ಎಸ್ ಶಿವಮೊಗ್ಗBody:ಭೀಮಾನಾಯ್ಕ ಎಸ್ ಶಿವಮೊಗ್ಗConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.