ETV Bharat / state

ಶಿವಮೊಗ್ಗ: ಹಳೆ ವೈಷಮ್ಯದ ಹಿನ್ನೆಲೆ ರೌಡಿಶೀಟರ್ ಸಹೋದರನ ಹತ್ಯೆ - Rowdy Sheeter Brother Killed

ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ದುಷ್ಕರ್ಮಿಗಳ ತಂಡವೊಂದು ರೌಡಿಶೀಟರ್​ನ ಸಹೋದರನನ್ನು ಹತ್ಯೆ ಮಾಡಿದೆ.

rowdy-sheeter-brother-killed-in-shivamogga
ಅಣ್ಣನ ಕೊಲೆಗೆ ಪ್ರತೀಕಾರ : ರೌಡಿ ಶೀಟರ್​ನ ಸಹೋದರನ್ನು ಹತ್ಯೆಗೈದ ತಮ್ಮ
author img

By ETV Bharat Karnataka Team

Published : Dec 21, 2023, 7:22 AM IST

Updated : Dec 21, 2023, 11:34 AM IST

ಶಿವಮೊಗ್ಗ: ಹಳೆ ವೈಷಮ್ಯದ ಹಿನ್ನೆಲೆ ರೌಡಿಶೀಟರ್​ ಓರ್ವನ ಸಹೋದರನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿರುವ ಘಟನೆ ಭದ್ರಾವತಿಯಲ್ಲಿ ನಡೆದಿದೆ. ಹೇಮಂತ್​​ ಕುಮಾರ್ ಅಲಿಯಾಸ್ ಕರಿಚಿಕ್ಕಿ (38) ಕೊಲೆಯಾದ ದುರ್ದೈವಿ. ಪ್ರಕರಣ ಸಂಬಂಧ ಮುಬಾರಕ್ ಅಲಿಯಾಸ್ ಮುಬ್ಬು, ಖಲೀಲ್ ಹಾಗೂ ಸತ್ಯಾನಂದ ಎಂಬವರನ್ನು ಹಳೇ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕೊಲೆಯಾದ ಹೇಮಂತ್​ ಕುಮಾರ್ ಆಟೋ ಚಾಲಕನಾಗಿದ್ದನು. ಈತ ಭದ್ರಾವತಿಯ ಹಳೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ವೈನ್​ ಶಾಪ್​ಗೆ ತೆರಳಿದ್ದಾಗ ಈ ಮೂವರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ. ಹೇಮಂತ್ ತಲೆ ಹಾಗೂ ಕುತ್ತಿಗೆ ಭಾಗಕ್ಕೆ ಗಂಭೀರ ಗಾಯವಾಗಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೂವರು ಆರೋಪಿಗಳ ಬಂಧನ: ವೈನ್​ ಶಾಪ್​ನಲ್ಲಿ ಹೇಮಂತ್​ ಕುಮಾರನ ಕೊಲೆ ಮಾಡಿದ ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು. ಈ ಬಗ್ಗೆ ಮಾಹಿತಿ ದೊರೆತ ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು. ಕೊಲೆ ನಡೆದ ಕೆಲವೇ ಗಂಟೆಗಳಲ್ಲಿ ಹಳೇ ನಗರ ಠಾಣೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಮಾಹಿತಿ ನೀಡಿದ್ದಾರೆ. ಭದ್ರಾವತಿ ಹಳೇ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳೆದ ಕೆಲವು ತಿಂಗಳ ಹಿಂದೆ ಭದ್ರಾವತಿಯಲ್ಲಿ ಮುಜಾಹಿದ್ದೀನ್​ ಅಲಿಯಾಸ್ ಮುಜ್ಜು ಎಂಬಾತನ ಹತ್ಯೆ ನಡೆದಿತ್ತು. ಸದ್ಯ ಬಂಧಿತನಾರುವ ಮುಬಾರಕ್ ಕೊಲೆಗೀಡಾದ ಮುಜಾಹಿದ್ದೀನ್​ನ ಸಹೋದರನಾಗಿದ್ದು ​ಹಳೆ ವೈಷಮ್ಯದ ಹಿನ್ನೆಲೆ ಈ ಕೃತ್ಯ ನಡೆಸಿರಬಹುದೆಂದು ಶಂಕೆ ವ್ಯಕ್ತಪಡಿಸಲಾಗಿದೆ.

ಇದನ್ನೂ ಓದಿ: ಹುಬ್ಬಳ್ಳಿ: ಅಣ್ಣನಿಂದ ತಮ್ಮನ ಹತ್ಯೆ

Last Updated : Dec 21, 2023, 11:34 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.