ETV Bharat / state

ಸಾಗರದಲ್ಲಿ ತೆರೆದ ಬಾವಿಗೆ ಬಿದ್ದ ಕಾಡು‌ಕೋಣ ರಕ್ಷಣೆ : ಕ್ರೇನ್​ ಮೂಲಕ ಯಶಸ್ವಿ ಕಾರ್ಯಾಚರಣೆ - ಜೇನು ಕೃಷಿ ಕಟ್ಟಡ

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಚಿಪ್ಪಲಿ ಲಿಂಗದಹಳ್ಳಿಯಲ್ಲಿ ತೆರೆದ ಬಾವಿಗೆ ಬಿದ್ದಿದ್ದ ಸುಮಾರು 9 ವರ್ಷ ಪ್ರಾಯದ ಕಾಡುಕೋಣವನ್ನು ರಕ್ಷಣೆ ಮಾಡಲಾಗಿದೆ.

bison
ಕಾಡೆಮ್ಮೆ ರಕ್ಷಣೆ
author img

By

Published : Aug 10, 2023, 6:55 AM IST

Updated : Aug 10, 2023, 10:08 AM IST

ಬಾವಿಗೆ ಬಿದ್ದ ಕಾಡು‌ಕೋಣ ರಕ್ಷಣೆ

ಶಿವಮೊಗ್ಗ: ತೆರೆದ ಬಾವಿಗೆ ಬಿದ್ದಿದ್ದ ಕಾಡು‌ಕೋಣವನ್ನು ರಕ್ಷಣೆ ಮಾಡಲಾಗಿದೆ. ಸಾಗರ ತಾಲೂಕು ಚಿಪ್ಪಲಿ ಲಿಂಗದಹಳ್ಳಿಯ ಜೇನು ಕೃಷಿ ಕಟ್ಟಡದ ಬಳಿ ಇರುವ ತೆರೆದ ಬಾವಿಗೆ ಕಾಡುಕೋಣ ಬಿದ್ದಿತ್ತು. ಈ ಬಾವಿಯು ಸುಮಾರು 25 ಅಡಿ ಆಳದ್ದಾಗಿದ್ದು, ರಸ್ತೆ ದಾಟುವಾಗ ಎರಡು ಕಾಡೆಮ್ಮೆಗಳು ಕೃಷಿ ಕಟ್ಟಡದ ಕಾಂಪೌಂಡ್ ಮೇಲೆ ಜಿಗಿದಿವೆ. ಈ ವೇಳೆ, ದೊಡ್ಡ ಕಾಡುಕೋಣ ಜೋರಾಗಿ ಜಿಗಿದು ಓಡಿ ಹೋಗಿದೆ. ಆದರೆ, ಸುಮಾರು 9 ವರ್ಷ ಪ್ರಾಯದ ಸಣ್ಣ ಕಾಡುಕೋಣ ತೆರೆದ ಬಾವಿ‌ ಒಳಗೆ ಬಿದ್ದಿದ್ದು, ಇದನ್ನು ಕಂಡ ಗ್ರಾಮಸ್ಥರು ಪರಿಸರವಾದಿಗಳಾದ ಅಖಿಲೇಶ್ ಚಿಪ್ಲಿ ಅವರಿಗೆ ವಿಚಾರ ಮುಟ್ಟಿಸಿ ಕಾಡುಕೋಣವನ್ನು ರಕ್ಷಣೆ ಮಾಡಿದ್ದಾರೆ.

ಅಖಿಲೇಶ್ ಚಿಪ್ಲಿ ಅವರು ತಕ್ಷಣ ಅರಣ್ಯ ಮತ್ತು ಅಗ್ನಿಶಾಮಕದಳ ದವರಿಗೆ ವಿಚಾರ ತಿಳಿಸಿದ್ದಾರೆ. ಬಳಿಕ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕದವರು ಕೆಳಗೆ ಇಳಿದು ಕಾಡುಕೋಣವನ್ನು ಮೇಲಕ್ಕೆ‌ ಎತ್ತಲು ಪ್ರಯತ್ನಿಸಿದರು, ಆದರೆ ಅದು ಸಾಧ್ಯವಾಗಲಿಲ್ಲ. ಬಾವಿ ಒಳಗೆ ಇದ್ದ ಕೋಣವು ಸುಮಾರು 8 ಟನ್ ತೂಕ ಹೊಂದಿದ್ದು, ಧೈರ್ಯ ಮಾಡಿ‌ ಬಾವಿ‌‌ ಒಳಗೆ ಇಳಿದು ಮೇಲಕ್ಕೆ‌ ಎತ್ತಲು‌ ಹೋದ್ರೆ ಅದು ತಪ್ಪಿಸಿಕೊಂಡು ಕೆಳಗೆ ಬೀಳುವ ಸಾಧ್ಯತೆ ಇತ್ತು.

ಈ ಹಿನ್ನೆಲೆ ಕಾಡುಕೋಣದ ಪ್ರಜ್ಞೆ ತಪ್ಪಿಸಬೇಕೆಂದು ಸಾಗರದ ಡಿಎಫ್​ಒ ಅಧಿಕಾರಿಗಳು ಶಿವಮೊಗ್ಗದ ಸಿಸಿಎಫ್ ಅವರನ್ನು ಸಂಪರ್ಕ ಮಾಡಿ ಪ್ರಾಣಿಗಳಿಗೆ ಅರವಳಿಕೆ ನೀಡುವವರನ್ನು ಕರೆಯಿಸಿ ಎಂದು ಮಾಡಿದ ಮನವಿಗೆ ಸ್ಪಂದಿಸಿದ ಅಧಿಕಾರಿಗಳು, ಶಿವಮೊಗ್ಗ ಹುಲಿ ಮತ್ತು ಸಿಂಹಧಾಮದ ವೈದ್ಯ ಮುರುಳಿ‌ ಮೋಹನ್ ಅವರನ್ನು ಚಿಪ್ಪಳ್ಳಿಗೆ ಕಳುಹಿಸಿದ್ದರು.

ಸ್ಥಳಕ್ಕೆ‌ ಬಂದ ಡಾ.ಮುರುಳಿ‌ ಮೋಹನ್ ಕಾಡು‌ಕೋಣದ ತೂಕಕ್ಕೆ ಅನುಗುಣವಾಗಿ ಅರವಳಿಕೆ ನೀಡಿ ಪ್ರಜ್ಞೆ ತಪ್ಪಿಸಿದಾಗ ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಬಾವಿ ಒಳಗೆ ಇಳಿದು ಕೋಣಕ್ಕೆ ಹಗ್ಗ ಕಟ್ಟಿ, ಕ್ರೇನ್​ ಸಹಾಯದಿಂದ ಮೇಲಕ್ಕೆ ಎತ್ತಿದರು. ವೈದ್ಯರು ನೀಡಿದ ಅರವಳಿಕೆಯು ಕೇವಲ ಮೂಕ್ಕಾಲು ಗಂಟೆ ಮಾತ್ರ ಇರಲಿದ್ದು, ಅಷ್ಟರ ಒಳಗಾಗಿ ಕಾಡುಕೋಣವನ್ನು ಮೇಲಕ್ಕೆ ಎತ್ತಬೇಕು ಎಂದಾಗ ಅಗ್ನಿ ಶಾಮಕದಳದವರು ತ್ವರಿತವಾದ ಕಾರ್ಯಾಚರಣೆ ನಡೆಸಿ ಸುಮಾರು 40 ನಿಮಿಷಗಳಲ್ಲಿ ಕೆಲಸ ಪೂರ್ಣಗೊಳಿಸಿದರು. ಕಾಡೆಮ್ಮೆ ಮೇಲಕ್ಕೆ ತಂದು ಹಗ್ಗ, ಬೆಲ್ಟ್ ತೆಗೆಯುವಷ್ಟರಲ್ಲಿ ಅದಕ್ಕೆ ಪ್ರಜ್ಞೆ ಬಂದಿದ್ದು, ಅರೆ ಪ್ರಜ್ಞೆಯಲ್ಲೇ‌ ಕಾಡಿನತ್ತ ಓಡಿ ಹೋಯಿತು.

ಈ ಕುರಿತು ಪ್ರತಿಕ್ರಿಯೆ ನೀಡಿದ ಪರಿಸರವಾದಿ ಅಖಿಲೇಶ್ ಚಿಪ್ಲಿ, "ಸಮಯಕ್ಕೆ ಸರಿಯಾಗಿ ಅರಣ್ಯ ಇಲಾಖೆ, ಅಗ್ನಿಶಾಮಕ ದಳದವರು ಕಾರ್ಯಾಚರಣೆ ನಡೆಸಿದರು. ವಿಷಯ ತಿಳಿಸಿದ ತಕ್ಷಣ ನಾನು ಸಾಗರದ ಲಿಂಗದಹಳ್ಳಿ‌ ಚಿಪ್ಲಿಗೆ ಹೋದಾಗ ಬಾವಿಯ ಬಳಿ‌ ಜನಸಾಗರವೇ ಸೇರಿತ್ತು. ನಂತರ‌ ಕಾಡುಕೋಣದ ತೂಕವನ್ನು‌ ನೋಡಿ ಅದರ ದೇಹ ಗಾತ್ರಕ್ಕೆ ತಕ್ಕಂತೆ ಡಾ.ಮುರುಳಿ ಅರವಳಿಕೆ ನೀಡಿದರು. ನಮ್ಮ ಕಾರ್ಯಾಚರಣೆ ಯಶಸ್ವಿಗೆ ಎಲ್ಲರೂ‌ ಸಹಕಾರ‌ ನೀಡಿದ‌ ಪರಿಣಾಮ ಕಾಡೆಮ್ಮೆ ಸುರಕ್ಷಿತವಾಗಿ‌ ಅರಣ್ಯ ಸೇರಿತು" ಎಂದರು.

''ನಮ್ಮ ಇಲಾಖೆಯ ಮೇಲಾಧಿಕಾರಿಗಳು ವಿಷಯ ತಿಳಿಸಿದ ತಕ್ಷಣ ನಾನು ಸಾಗರದ ಲಿಂಗದಹಳ್ಳಿ‌ ಚಿಪ್ಲಿಗೆ ಹೋದಾಗ ಬಾವಿಯ ಬಳಿ‌ ಜನಸಾಗರವೇ ಸೇರಿತ್ತು. ನಂತರ‌ ಕಾಡುಕೋಣದ ತೂಕವನ್ನು‌ ನೋಡಿ ಅದರ ದೇಹ ಗಾತ್ರಕ್ಕೆ ತಕ್ಕಂತೆ ಅರವಳಿಕೆ ನೀಡಲಾಯಿತು. ನಮ್ಮ‌ ಕಾರ್ಯಾಚರಣೆಯ ಯಶಸ್ಸಿಗೆ ಎಲ್ಲರೂ ಸಹಕಾರ‌ ನೀಡಿದ‌ ಪರಿಣಾಮ ಕಾಡುಕೋಣ ಸುರಕ್ಷಿತವಾಗಿ‌ ಮೇಲಕ್ಕೆ ಬಂದು ಕಾಡು ಸೇರಿದೆ'' ಎಂದು ಡಾ.ಮುರಳಿ ಹೇಳಿದರು.

ಬಳಿಕ ಈಟಿವಿ ಭಾರತದೊಂದಿಗೆ ದೂರವಾಣಿ ಕರೆಯಲ್ಲಿ ಮಾತನಾಡಿದ ಸಾಗರದ ಅಗ್ನಿಶಾಮಕ ದಳದ ಅಧಿಕಾರಿ ನಂದ ಕುಮಾರ್, "ಕಾಡುಕೋಣ ಸುರಕ್ಷಿತವಾಗಿ‌‌‌ ಮೇಲಕ್ಕೆ ಬರಲು ಅಗ್ನಿಶಾಮಕ ದಳದವರ ಕಾರ್ಯ‌ ನಿಜಕ್ಕೂ ಶ್ಲಾಘನೀಯ. ಕಾಡೆಮ್ಮೆಯನ್ನು ಮೇಲಕ್ಕೆ ಎತ್ತಲು ನಮ್ಮ ಮೇಲಧಿಕಾರಿಗಳು ತುಂಬ ಸಹಕಾರ ನೀಡಿದರು" ಎಂದರು.

ಇದನ್ನೂ ಓದಿ :ಒಂದೆಡೆ ಆನೆ... ಮತ್ತೊಂದೆಡೆ ಕಾಡುಕೋಣಗಳ ಹಾವಳಿ.. ಕಾಫಿ ನಾಡಲ್ಲಿ ಆತಂಕವೋ ಆತಂಕ

Last Updated : Aug 10, 2023, 10:08 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.