ಶಿವಮೊಗ್ಗ: ಶಾಸಕ ರೇಣುಕಾಚಾರ್ಯನ ಸಹೋದರನ ಮಗನ ಸಾವು ಸಹಜ ಸಾವೋ, ಅಸಹಜ ಸಾವೋ ಎಂದು ಸಮಗ್ರ ತನಿಖೆ ಮೂಲಕ ತಿಳಿದು ಬರಬೇಕು ಎಂದು ಶಾಸಕ ಈಶ್ವರಪ್ಪ ಹೇಳಿದರು.
ಶಿವಮೊಗ್ಗ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ಚಂದ್ರಶೇಖರ್ ಸಾವು ಬಹಳ ನೋವುಂಟು ಮಾಡಿದೆ. ಕಾರಿನ ಹಿಂದಿನ ಭಾಗದಲ್ಲಿ ಶವ ಸಿಕ್ಕಿರುವುದು ತೀವ್ರ ಅನುಮಾನಕ್ಕೆ ಎಡೆ ಮಾಡಕೊಟ್ಟಿದೆ, ಚಂದ್ರಶೇಖರ್ ಸಾವಿನ ಬಗ್ಗೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ರಾಜ್ಯ ಸರ್ಕಾರ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವ ಭರವಸೆ ನೀಡಿದೆ. ಈ ಬಗ್ಗೆ ಸಮಗ್ರ ತನಿಖೆ ಆಗಬೇಕು. ತಾಲೂಕಿನಾದ್ಯಂತ ಸಾಕಷ್ಟು ಜನಪ್ರಿಯತೆ ಹೊಂದಿದ್ದ ಕಾರ್ಯಕರ್ತ, ಸಹೋದರನನ್ನು ಕಳೆದುಕೊಂಡ ನೋವಿದೆ ಎಂದು ಚಂದ್ರು ಸಾವಿಗೆ ಸಂತಾಪ ಸೂಚಿಸಿದರು.
ಕೆಲವರ ಮೇಲೆ ತನಿಖೆ ನಡೆಯುತ್ತಿದೆ. ದೇವರು ಆ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ನೀಡಲಿ. ತಾಲೂಕಿನ ಜನರ ಸಂಕಟದಲ್ಲಿ ನಾವು ಪಾಲುದಾರರಾಗಿದ್ದೇವೆ ಎಂದರು.
ಇದನ್ನೂ ಓದಿ: ಸಹಜ ಸಾವಲ್ಲ, ಅಪಘಾತವೂ ಅಲ್ಲ; ಇದು ಕಾಣದ ಕೈಗಳ ಕೆಲಸ: ಎಂ ಪಿ ರೇಣುಕಾಚಾರ್ಯ