ಶಿವಮೊಗ್ಗ: ಸಂಗೀತ ಪರಂಪರೆಯ ಮನೆತನದಿಂದ ಬಂದ ಸುಬ್ಬಣ್ಣ ಸುಗಮ ಸಂಗೀತ ಹಾಗೂ ಚಲನಚಿತ್ರ ಹಿನ್ನೆಲೆ ಗಾಯಕರಾಗಿ ತಮ್ಮದೇ ವಿಶಿಷ್ಟ ರೀತಿಯ ಛಾಪು ಮೂಡಿಸಿದ್ದರು. ಇವರ ನಿಜವಾದ ಹೆಸರು ಜಿ.ಸುಬ್ರಹ್ಮಣ್ಯಂ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಗರ ಗ್ರಾಮದಲ್ಲಿ 1938ರಲ್ಲಿ ಇವರು ಜನಿಸಿದ್ದರು.
ಸುಬ್ಬಣ್ಣ ಮತ್ತು ಎಸ್ ಪಿ ಬಾಲಸುಬ್ರಮಣ್ಯಂ ಒಂದೇ ಕಾಲಘಟ್ಟದವರು. ಎಸ್ ಪಿ ಬಾಲಸುಬ್ರಮಣ್ಯಂ ಅವರು ಇವರನ್ನು ಒಂದಿನ ಶಿವಮೊಗ್ಗ ಸುಬ್ಬಣ್ಣ ಎಂದು ಕರೆದರಂತೆ. ಅಂದಿನಿಂದ ಜಿ.ಸುಬ್ರಹ್ಮಣ್ಯಂ ಶಿವಮೊಗ್ಗ ಸುಬ್ಬಣ್ಣರಾದರು. ಕಾನೂನುಬದ್ಧವಾಗಿಯೂ ಸಹ ಅವರು ಶಿವಮೊಗ್ಗ ಸುಬ್ಬಣ್ಣರೆಂದೇ ಹೆಸರು ಬದಲಾಯಿಸಿಕೊಂಡರು.
ರಾಷ್ಟ್ರಪ್ರಶಸ್ತಿ ಪಡೆದ ರಾಜ್ಯದ ಮೊದಲ ಗಾಯಕ: ಶಿವಮೊಗ್ಗ ಸುಬ್ಬಣ್ಣನವರು ಕಾಡು ಕುದುರೆ ಓಡಿ ಬಂದಿತ್ತಾ ಎಂಬ ಗಾಯನಕ್ಕೆ ರಾಷ್ಟ್ರ ಪ್ರಶಸ್ತಿಯನ್ನು ಪ್ರಥಮವಾಗಿ ಪಡೆದುಕೊಂಡವರು. ನಂತರ ಹಲವು ಸಿನಿಮಾಗಳು ಸೇರಿದಂತೆ ಭಾವಗೀತೆ, ಭಕ್ತಿಗೀತೆಗಳನ್ನು ಹಾಡಿ ಕೋಟ್ಯಂತರ ಜನರ ಮನ ಗೆದ್ದಿದ್ದಾರೆ.
ಇದನ್ನೂ ಓದಿ: ಕಾಡು ಕುದುರೆ ಓಡಿ ಬಂದಿತ್ತಾ ಖ್ಯಾತಿಯ ಗಾಯಕ ಶಿವಮೊಗ್ಗ ಸುಬ್ಬಣ್ಣ ನಿಧನ: ಕಂಬನಿ ಮಿಡಿದ ಗಣ್ಯರು