ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಆಗುಂಬೆ ಪೊಲೀಸ್ ಠಾಣೆಯ ಎಎಸ್ಐ ಅತೀಕ್ ಉರ್ ರೆಹಮಾನ್ ರವರಿಗೆ ರಾಷ್ಟ್ರಪತಿ ಪದಕ ಘೋಷಣೆ ಮಾಡಲಾಗಿದೆ.
ಅತೀಕ್ ಉರ್ ರೆಹಮಾನ್ ರವರು ಜಿಲ್ಲೆಯ ಬೆರಳಚ್ಚು ವಿಭಾಗದಲ್ಲಿ ಕಾರ್ಯ ನಿರ್ವಹಿಸಿದ್ದರು. ಇವರು ಅತ್ತ್ಯುತ್ತಮ ಬೆರಳಚ್ಚು ತಜ್ಞರಾಗಿದ್ದಾರೆ.
ಇವರು ಇತ್ತಿಚೇಗೆ ಎಎಸ್ಐ ಆಗಿ ಬಡ್ತಿ ಪಡೆದು ಆಗುಂಬೆ ಪೊಲೀಸ್ ಠಾಣೆಗೆ ವರ್ಗವಾಗಿದ್ದರು. ಅತೀಕ್ ರವರಿಗೆ ರಾಷ್ಟ್ರಪತಿ ಪದಕ ಘೋಷಣೆಯಾಗಿರುವುದಕ್ಕೆ ಜಿಲ್ಲಾ ಪೊಲೀಸ್ ಇಲಾಖೆ ಸಂತಸ ವ್ಯಕ್ತಪಡಿಸಿದೆ.