ETV Bharat / state

ಅಗ್ಗದ ದರಕ್ಕೆ ಜಲ ವಿದ್ಯುತ್​ ಉತ್ಪಾದನೆ : ಆರ್. ವೆಂಕಟೇಶ್ ಪ್ರಸಾದ್ - The Superintendent of Power Transmission Engineer R. Venkatesh Prasad

ವಿದ್ಯುತ್ ಉಪ ಕೇಂದ್ರಗಳು ನಿರ್ಬಂಧಿತ ಪ್ರದೇಶವಾಗಿದ್ದು, ಸಾರ್ವಜನಿಕರಿಗೆ ಪ್ರವೇಶವಿಲ್ಲದ ಕಾರಣ ಬೆಂಕಿ ಅವಘಡಗಳು ನಡೆಯುವುದಿಲ್ಲ ಎಂದು ವಿದ್ಯುತ್ ಪ್ರಸರಣದ ಸೂಪರಿಂಟೆಂಡೆಂಟ್ ಇಂಜಿನಿಯರ್ ಆರ್. ವೆಂಕಟೇಶ್ ಪ್ರಸಾದ್ ತಿಳಿಸಿದ್ದಾರೆ.

r-venkatesh-prasad-talk-about-hydroelectricity-plan
ಜಲ ವಿದ್ಯುತ್​ ಉತ್ಪಾದನೆ
author img

By

Published : Sep 28, 2020, 8:45 PM IST

ಶಿವಮೊಗ್ಗ: ಜಿಲ್ಲೆಯಲ್ಲಿ ಕಡಿಮೆ ಖರ್ಚಿನ ಜಲ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಈ ವಿದ್ಯುತ್ ಅ​ನ್ನು ದೇಶಾದ್ಯಂತ ಕಳುಹಿಸಲಾಗುತ್ತದೆ. ಅಲ್ಲದೇ, ಮನೆ ಮನೆಗೆ 11 ಕಿ. ವ್ಯಾಟ್​ ಕರೆಂಟ್​ ಅನ್ನು ವಿದ್ಯುತ್ ಉಪಕೇಂದ್ರಗಳ ಮೂಲಕ ಕಳುಹಿಸಲಾಗುತ್ತದೆ ಎಂದು ವಿದ್ಯುತ್ ಪ್ರಸರಣದ ಸೂಪರಿಂಟೆಂಡೆಂಟ್ ಇಂಜಿನಿಯರ್ ಆರ್. ವೆಂಕಟೇಶ್ ಪ್ರಸಾದ್ ತಿಳಿಸಿದ್ದಾರೆ.

ಆರ್. ವೆಂಕಟೇಶ್ ಪ್ರಸಾದ್, ಸೂಪರಿಂಟೆಂಡೆಂಟ್​ ಇಂಜಿನಿಯರ್​​

ಶಿವಮೊಗ್ಗ ಜಿಲ್ಲೆಯಲ್ಲಿರುವ ವಿದ್ಯುತ್ ಕೇಂದ್ರಗಳ ವಿವರ:

400 ಕಿ.ವ್ಯಾಟ್-​ ಉಪಕೇಂದ್ರ-01.

220 ಕಿ.ವ್ಯಾಟ್- ಉಪಕೇಂದ್ರ-02.

110 ಕಿ.ವ್ಯಾಟ್- ಉಪಕೇಂದ್ರ-27.

66 ಕಿ.ವ್ಯಾಟ್- ಉಪಕೇಂದ್ರ-05 ಒಟ್ಟು 35 ವಿದ್ಯುತ್ ಉಪಕೇಂದ್ರಗಳಿವೆ.

ವಿದ್ಯುತ್ ಅವಘಡ ತಡೆಗೆ ಹೇಗಿದೆ ಕ್ರಮ?: ಅವಘಡ ತಡೆ ಕ್ರಮಗಳ ಬಗ್ಗೆ ಮಾತನಾಡಿದ ಆರ್. ವೆಂಕಟೇಶ್ ಪ್ರಸಾದ್, ಈ ಎಲ್ಲ ವಿದ್ಯುತ್ ಉಪಕೇಂದ್ರಗಳನ್ನು ರಚನೆ ಮಾಡುವಾಗಲೇ ಅಲ್ಲಿನ ಮಣ್ಣಿನ ಮೇಲೆ ವಿದ್ಯುತ್ ನಿರೋಧಕ ಅಂಶವನ್ನು ಸೇರಿಸಿ ಉಪಕೇಂದ್ರ ಮಾಡಲಾಗುತ್ತದೆ. ಕೆಪಿಟಿಎಲ್ ನಲ್ಲಿ ಆರ್​ಎನ್​ಡಿ ಎಂಬ ಪ್ರತ್ಯೇಕ ವಿಭಾಗವಿದ್ದು, ಅವರು ವಿದ್ಯುತ್ ಉಪಕೇಂದ್ರ ಸ್ಥಾಪನೆಗೆಗೂ ಮೊದಲು ಸ್ಥಳದಲ್ಲಿ ಮಣ್ಣಿನ ಪರೀಕ್ಷೆ ನಡೆಸುತ್ತಾರೆ. ನಂತರ ಮಣ್ಣಿನ ಗುಣಮಟ್ಟದ ಮೇಲೆ ‌ಉಪಕೇಂದ್ರ ರಚನೆ ಮಾಡಲಾಗುತ್ತದೆ. ‌ಉಪಕೇಂದ್ರ ರಚನೆ ಮಾಡುವ ಮೊದಲೇ ವಿದ್ಯುತ್ ನಿರೋಧಕ ಚಾಪೆಗಳನ್ನು ಭೂಮಿಯಲ್ಲಿ ಅಳವಡಿಸಲಾಗುತ್ತದೆ. ‌ಹಾಗೂ ಉಪಕೇಂದ್ರವನ್ನು‌ ಕಮಿಷನ್ ಮಾಡಲಾಗುತ್ತದೆ. ಪ್ರತಿ ವಿದ್ಯುತ್ ಉಪ ಕೇಂದ್ರದಲ್ಲಿ ಕಂಟ್ರೋಲ್ ಪ್ಯಾನಲ್ ರಚನೆ ಮಾಡಲಾಗಿರುತ್ತದೆ. ಉಪಕೇಂದ್ರಕ್ಕೆ ಬರುವ ವಿದ್ಯುತ್ ತಂತಿಯಲ್ಲಿ ಅಡಚಣೆಯಾದರೆ ಅದು ಸ್ವಯಂ ಚಾಲಿತವಾಗಿ ಸೆನ್ಸರ್ ಆಗಲಿದ್ದು ವಿದ್ಯುತ್ ಅಪಘಾತವಾಗುವುದನ್ನು ತಡೆಯುತ್ತದೆ ಎಂದರು.

ಇತ್ತೀಚಿಗೆ ತಾಂತ್ರಿಕತೆ ಹೆಚ್ಚಾಗಿದ್ದು, 20 ಕಿ. ವ್ಯಾಟ್​ ಮೇಲ್ಪಟ್ಟ ಸಂಗ್ರಹ ಕೇಂದ್ರಗಳಲ್ಲಿ ಸಿಟಿಆರ್ ಪೆಟ್ಟಿಗೆ ಅಳವಡಿಸಿ ಅದರಲ್ಲಿ ನೈಟ್ರೋಜನ್ ಅಳವಡಿಸಲಾಗಿರುತ್ತದೆ. ಇದರಲ್ಲಿ ಗ್ಯಾಸ್ ಉತ್ಪತ್ತಿಯಾದರೆ ಸೆನ್ಸಾರ್ ನಿಂದ ಸೆನ್ಸ್ ಆಗಿ ನೈಟ್ರೋಜನ್ ಗ್ಯಾಸ್ ಸ್ವಯಂಚಾಲಿತವಾಗಿ ಆಯಿಲ್ ಪ್ರೋಸೆಸಿಂಗ್ ಕಡೆ ಹರಿದು ಹೋಗುತ್ತದೆ. ನೈಟ್ರೋಜನ್ ಗ್ಯಾಸ್ ಟ್ರಾನ್ಸ್​ಫಾರ್ಮರ್​ ಒಳಗೆ ಹೋಗಿ ವಿದ್ಯುತ್ ನಿರೋಧಕದಂತೆ ಕೆಲಸ ಮಾಡಿ ವಿದ್ಯುತ್ ಹರಿಯದಂತೆ ಮಾಡುತ್ತದೆ. ಇದರಿಂದ ಬೆಂಕಿ ಅವಘಡ ಸಂಭವಿಸುವುದಿಲ್ಲ ಎಂದು ವಿವರಿಸಿದರು.

ವಿದ್ಯುತ್ ಉಪ ಕೇಂದ್ರದಲ್ಲಿ ಬೆಂಕಿ ನಂದಿಸಲು, ನೀರು, ಮರಳು ಬಕೆಟ್ ಗಳನ್ನು ಹಾಗೂ ಸಿಒ2 ಬಾಕ್ಸ್ ಗಳನ್ನು ಹೀಗೆ ಬೆಂಕಿ ನಂದಿಸುವ ಸಾಧನಗಳನ್ನು ಅಳವಡಿಸಲಾಗಿರುತ್ತದೆ. ಪೊಮ್ ರೀತಿಯ ಬೆಂಕಿ ನಂದಿಸುವ ಸಾಧನಗಳು ಪ್ರತಿ ಎರಡು ವರ್ಷಕ್ಕೊಮ್ಮೆ ಬದಲಾವಣೆ ಮಾಡಬೇಕಾಗಿರುವುದರಿಂದ ಪ್ರತಿ ಎರಡು ವರ್ಷಕ್ಕೊಮ್ಮೆ ವಿದ್ಯುತ್ ಉಪಕೇಂದ್ರದ ಸಿಬ್ಬಂದಿಗಳಿಗೆ ಬೆಂಕಿ ನಂದಿಸುವ ಅಣಕ ಪ್ರದರ್ಶನದ ಮೂಲಕ ಅರಿವು ಮೂಡಿಸಲಾಗುತ್ತದೆ ಮತ್ತು ತರಬೇತಿ ನೀಡಲಾಗುತ್ತದೆ ಎಂದರು.

ಅಲ್ಲದೇ ವಿದ್ಯುತ್ ಉಪ ಕೇಂದ್ರಗಳು ನಿರ್ಬಂಧಿತ ಪ್ರದೇಶವಾಗಿದ್ದು, ಸಾರ್ವಜನಿಕರಿಗೆ ಪ್ರವೇಶವಿಲ್ಲದ ಕಾರಣ ಬೆಂಕಿ ಅವಘಡಗಳು ನಡೆಯುವುದಿಲ್ಲ. ಶಿವಮೊಗ್ಗದ ಇತಿಹಾಸದಲ್ಲೇ ಯಾವುದೇ ವಿದ್ಯುತ್ ಉಪಕೇಂದ್ರಗಳು ಬೆಂಕಿಯ ಅವಘಡಕ್ಕೆ ಒಳಗಾಗಿಲ್ಲ. ಅಲ್ಲದೇ ಈಗ ತಾಂತ್ರಿಕತೆ ಸಾಕಷ್ಟು ಮುಂದುವರೆದಿರುವುದರಿಂದ ಎಲ್ಲವನ್ನ ಆಟೋಮ್ಯಾಟಿಕ್ ಆಗಿ ನಿಯಂತ್ರಣ ಮಾಡುತ್ತೇವೆ ಎಂದು ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.