ETV Bharat / state

ಮಕ್ಕಳ ಅಶ್ಲೀಲ ವಿಡಿಯೋ ಅಪ್ಲೋಡ್ ಮಾಡಿದ್ರೆ ಶಿಕ್ಷೆ ಗ್ಯಾರಂಟಿ, ಎಚ್ಚರ!

ಮಕ್ಕಳ ಅಶ್ಲೀಲ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತಿದ್ದ ಯುವಕನಿಗೆ ಕಲಂ 12 ಪೊಕ್ಸೊ ಮತ್ತು 354(A) IPC ಅಡಿ ಎರಡು ವರ್ಷ ಕಠಿಣ ಕಾರಗೃಹ ಶಿಕ್ಷೆ ಹಾಗೂ 1 ಲಕ್ಷ ರೂ ದಂಡ ವಿಧಿಸಿ ಶಿವಮೊಗ್ಗ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯ ಆದೇಶ‌ ನೀಡಿದೆ.

Upload child porn videos on social networking site
ಮಕ್ಕಳ ಅಶ್ಲೀಲ ವಿಡಿಯೋ ಅಪ್ಲೋಡ್ ಮಾಡಿದ್ರೆ ಶಿಕ್ಷೆ ಗ್ಯಾರಂಟಿ: ಎಚ್ಚರ
author img

By

Published : Apr 22, 2022, 10:59 PM IST

ಶಿವಮೊಗ್ಗ: ಮಕ್ಕಳ ಅಶ್ಲೀಲ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತಿದ್ದ ಯುವಕನಿಗೆ 2 ವರ್ಷ ಕಠಿಣ ಶಿಕ್ಷೆ ಹಾಗೂ 1 ಲಕ್ಷ ರೂ ದಂಡ ವಿಧಿಸಿ ಶಿವಮೊಗ್ಗ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯ ಎಫ್.ಟಿ.ಎಸ್.ಸಿ-1 ಆದೇಶ‌ ನೀಡಿದೆ.

2020 ರ ಮೇ 6 ರಂದು ಸಿಐಡಿ ಪೊಲೀಸರು ಒಂದು ಪ್ರಕರಣ ದಾಖಲಿಸಿರುತ್ತಾರೆ. ಶಿವಮೊಗ್ಗದ ದುಮ್ಮಳ್ಳಿಯ ನಿವಾಸಿ ರಘು(25) ಎಂಬುವವರು ಮಕ್ಕಳ ಅಶ್ಲೀಲ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತಿದ್ದರು.

ತನಿಖಾಧಿಕಾರಿಯಾದ ಸಿಇಎನ್ ಪೊಲೀಸ್ ಠಾಣೆಯ ಪಿಐ ಗುರುರಾಜ್​ ತನಿಖೆ ನಡೆಸಿ ಕಲಂ 12 ಪೊಕ್ಸೊ ಮತ್ತು 354(A) IPC ದೂರು ದಾಖಲಿಸಿದ್ದರು. 24-05-2020 ರಂದು ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದಾರೆ. ಮಾನ್ಯ ನ್ಯಾಯಾಧೀಶರಾದ ದಯಾನಂದ ವಿ.ಹೆಚ್.ರವರು ಇಂದು ರಘುವಿಗೆ ಎರಡು ವರ್ಷ ಕಠಿಣ ಕಾರಗೃಹ ಶಿಕ್ಷೆ ಹಾಗೂ 1 ಲಕ್ಷ ರೂ ದಂಡ ವಿಧಿಸಿದ್ದಾರೆ. ದಂಡವನ್ನು ಕಟ್ಟಲು ವಿಫಲನಾದರೆ, 6 ತಿಂಗಳು ಕಾಲ ಸಾದಾ ಕಾರಗೃಹವನ್ನು ವಿಧಿಸಿದ್ದಾರೆ.

ಇದನ್ನೂ ಓದಿ: ವಾಸೀಂ ಪಠಾಣ್‌ ಪರ ವಕಾಲತ್ತು ವಹಿಸದೇ ಇರುವುದು ಸ್ವಾಗತಾರ್ಹ: ಹಿರಿಯ ವಕೀಲ ಅಣ್ವೇಕರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.