ಶಿವಮೊಗ್ಗ: ನಟ ಪುನೀತ್ ರಾಜ್‌ಕುಮಾರ್ ಅವರು ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರಕ್ಕೆ ಆಗಮಿಸಿದ್ದು, ಆನೆಗಳ ಕುರಿತ ಸಾಕ್ಷ್ಯಚಿತ್ರ ಚಿತ್ರೀಕರಣದಲ್ಲಿ ಪಾಲ್ಗೊಂಡರು.
ಇದಕ್ಕಾಗಿ ಪುನೀತ್ ಮಧ್ಯಾಹ್ನ ಸಕ್ರೆಬೈಲಿಗೆ ಆಗಮಿಸಿದರು. ಆನೆಬಿಡಾರದೊಳಗೆ ಆನೆಗಳನ್ನು ಪಳಗಿಸುವ ಕ್ರಾಲ್ ಬಳಿ ಶೂಟಿಂಗ್ ನಡೆಯುತ್ತಿದೆ. ಆನೆಗಳಾದ ಕುಂತಿ ಹಾಗೂ ಮರಿಯಾನೆ ಧನಸ್‌ನನ್ನು ಶೂಟಿಂಗ್‌ಗೆ ಬಳಸಿಕೊಳ್ಳಲಾಗುತ್ತಿದೆ.
ಆನೆಗಳ ಕುರಿತ ವಿಶೇಷ ಸಾಕ್ಷ್ಯಚಿತ್ರಕ್ಕೆ ಪುನೀತ್ ವಿಶೇಷ ಅತಿಥಿಯಾಗಿ ಆಗಮಿಸಿದ್ದಾರೆ ಎಂಬ ಮಾಹಿತಿ ಇದೆ. ಪರಿಸರ ಸಂರಕ್ಷಣೆ ಹಾಗೂ ಸ್ವಚ್ಚತೆಯ ಕುರಿತ ಸಾಕ್ಷ್ಯಚಿತ್ರಕ್ಕೆ ರಾಜ್ಯ ಸರ್ಕಾರ ವಿಶೇಷ ಅನುಮತಿ ನೀಡಿದೆ.
ದೂರದಿಂದಲೇ ಪೋಸ್ ಕೊಟ್ಟ ಅಪ್ಪು:
ಸಕ್ರೆಬೈಲಿಗೆ ತಮ್ಮ ನೆಚ್ಚಿನ ನಟ ಬಂದಿದ್ದಾರೆ ಎಂದು ತಿಳಿದ ಅಭಿಮಾನಿಗಳು ಶೂಟಿಂಗ್ ಜಾಗದಲ್ಲಿ ಜಮಾವಣೆಗೊಂಡಿದ್ದರು. ಶೂಟಿಂಗ್ ಬಳಿಕ ಅಭಿಮಾನಿಗಳ ಬಳಿ ಬಂದ ನಟ, ಕೋವಿಡ್ ಕಾರಣ ದೂರದಲ್ಲೇ ನಿಂತು ಫೋಟೋಗೆ ಪೋಸ್ ಕೊಟ್ಟರು.
ಇದನ್ನೂ ಓದಿ: Habitual offenders ಅಂದರೆ ಏನು?- ಡಿಸಿಪಿ ಮುಖ ನೋಡಿದ ಇನ್ಸ್ಪೆಕ್ಟರ್ಗೆ ಸಿದ್ದರಾಮಯ್ಯ ತರಾಟೆ