ETV Bharat / state

ಪಿಯು ಬೋರ್ಡ್ ಎಡವಟ್ಟು: ಹೈಕೋರ್ಟ್ ಮೆಟ್ಟಿಲೇರಿ 100ಕ್ಕೆ 100 ಅಂಕ ಪಡೆದ ವಿದ್ಯಾರ್ಥಿನಿ - ಹೈಕೋರ್ಟ್ ಮೊರೆ ಹೋದ ವಿದ್ಯಾರ್ಥಿನಿ

ಪಿಯು ಬೋರ್ಡ್ ಎಡವಟ್ಟಿನಿಂದ ಕಡಿಮೆ ಅಂಕ ಪಡೆದಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಹೈಕೋರ್ಟ್​ ಮೆಟ್ಟಿಲೇರಿ ನ್ಯಾಯ ಪಡೆದಿದ್ದಾಳೆ. ರಿಟ್ ಅರ್ಜಿಯನ್ನು ಪರಿಗಣಿಸಿದ ಕೋರ್ಟ್ ಪೂರ್ಣ ಪರಿಶೀಲನೆಯ ನಂತರ ಎರಡು ವಾರದೊಳಗೆ ಸರಿಪಡಿಸುವಂತೆ ಆದೇಶ ನೀಡಿದೆ.

pu-student-gets-full-marks-in-high-court
ಪಿಯು ಬೋರ್ಡ್ ಎಡವಟ್ಟು
author img

By

Published : Jan 26, 2021, 2:38 AM IST

ಶಿವಮೊಗ್ಗ: ಪಿಯು ಬೋರ್ಡ್ ಎಡವಟ್ಟಿನಿಂದ ಕಡಿಮೆ ಅಂಕ ಪಡೆದಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಹೈಕೋರ್ಟ್​ ಮೆಟ್ಟಿಲೇರಿ 100ಕ್ಕೆ 100 ಅಂಕ ಪಡೆಯುವಲ್ಲಿ ಯಶಸ್ವಿಯಾಗಿದ್ದಾಳೆ.

ಹೊಸನಗರದ ಸರ್ಕಾರಿ ಜ್ಯೂನಿಯರ್ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಧಾರಣಿ ಹೈಕೋರ್ಟ್ ಮೊರೆ ಹೋಗಿ ನ್ಯಾಯ ಪಡೆದ ವಿದ್ಯಾರ್ಥಿನಿ. ಧಾರಣಿ ಕಳೆದ ಮಾರ್ಚ್​​ನಲ್ಲಿ ನಡೆದ ಪಿಯು ಲೆಕ್ಕಶಾಸ್ತ್ರ ಪರೀಕ್ಷೆಯಲ್ಲಿ 99 ಅಂಕ ಪಡೆದಿದ್ದಳು. ತನಗೆ 100ಕ್ಕೆ 100 ಅಂಕ ಬರಬೇಕೆಂದು ಹಣ ಕಟ್ಟಿ ಉತ್ತರ ಪತ್ರಿಕೆಯನ್ನು ತರಿಸಿ ನೋಡಿದಾಗ ಹೆಚ್ಚುವರಿ ಪ್ರಶ್ನೆಗಳಿಗೆ ಉತ್ತರ ಬರೆದಲ್ಲಿ ಹೆಚ್ಚು ಅಂಕ ಬಂದ ಉತ್ತರವನ್ನು‌ ಪರಿಗಣಿಸಬೇಕೆಂಬ ನಿಯಮಕ್ಕೆ ಬದಲಾಗಿ‌ ಕಡಿಮೆ ಅಂಕವನ್ನು ಪರಿಗಣಿಸಿದ ಪರಿಣಾಮ ನೂರರ ಬದಲು‌ 99 ಅಂಕ ಬಂದಿತ್ತು. ಇದನ್ನು ಸರಿಪಡಿಸುವಂತೆ ಕಾಲೇಜಿನ ಮೂಲಕವೇ ಪಿಯು ಬೋರ್ಡ್​​ಗೆ ಮನವಿ ಮಾಡಲಾಗಿತ್ತು.

ಆದರೆ ಎರಡನೇ ಬಾರಿ ಮರುಮೌಲ್ಯಮಾಪನಕ್ಕೆ ಹಾಕಿದಾಗ 88 ಅಂಕ ಬಂದಿತ್ತು. ನಂತರ ಒಂದು ಉತ್ತರವನ್ನೆ ಪರಿಗಣಿಸದ ಕಾರಣ ಮತ್ತೆ ಪಿಯು ಬೋರ್ಡ್​ಗೆ ಮನವಿ ಮಾಡಲಾಗಿತ್ತು. ಆಗಲೂ 88 ಅಂಕವೇ ಬಂದಿತು. ಮತ್ತೆ ಮರುಮೌಲ್ಯಮಾಪನಕ್ಕೆ ಮನವಿ ಮಾಡಿದಾಗ ಎರಡನೇ ಬಾರಿ ಮೂವರು ತಜ್ಞರು‌ ಸೇರಿ ಮಾಡಿದ ಮೌಲ್ಯಮಾಪನವನ್ನು ಬದಲಾಯಿಸಲು ಆಗಲ್ಲ ಎಂಬ ಉತ್ತರ ಪಿಯು ಬೋರ್ಡ್ ಕಡೆಯಿಂದ ಬಂದಿತ್ತು.

ಈ ಸುದ್ದಿಯನ್ನೂ ಓದಿ: ನೇತಾಜಿ ಭಾವಚಿತ್ರ ಕುರಿತ ಆರೋಪಗಳಿಗೆ ರಾಷ್ಟ್ರಪತಿ ಭವನದಿಂದ ಸ್ಪಷ್ಟನೆ

ಬಳಿಕ ಧಾರಿಣಿಯ ತಂದೆ ಹೈಕೋರ್ಟ್​ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ರಿಟ್ ಅರ್ಜಿಯನ್ನು ಪರಿಗಣಿಸಿದ ಕೋರ್ಟ್ ಪೂರ್ಣ ಪರಿಶೀಲನೆಯ ನಂತರ ಎರಡು ವಾರದೊಳಗೆ ಸರಿಪಡಿಸುವಂತೆ ಆದೇಶ ನೀಡಿದೆ. ಇದನ್ನು ತಪ್ಪಿದಲ್ಲಿ ನಿಗದಿತ ದಿನದ ನಂತರ ವಾರಕ್ಕೆ ಎರಡು ತಲಾ ಎರಡು ಸಾವಿರ ರೂ.ನಂತೆ ಅರ್ಜಿದಾರರಿಗೆ ದಂಡ ನೀಡಬೇಕೆಂದು ಆದೇಶಿಸಿತ್ತು. ಇದರಿಂದ ಪಿಯು ಬೋರ್ಡ್ ತಪ್ಪನ್ನು ಸರಿಪಡಿಸಿ, ಧಾರಿಣಿಗೆ ಲೆಕ್ಕಶಾಸ್ತ್ರದಲ್ಲಿ 100ಕ್ಕೆ‌ 100 ಅಂಕ‌ ನೀಡಿ, ಹೊಸ ಅಂಕಪಟ್ಟಿ ನೀಡಿದೆ. ಅರ್ಜಿದಾರರ ಪರವಾಗಿ ಬಿ.ಎಸ್. ಪ್ರಸಾದ್ ಹನಿಯ ಅವರು ವಾದ ಮಂಡಿಸಿದ್ದರು.

ಶಿಕ್ಷಣ ಸಚಿವರಿಂದ ಪತ್ರ:

ಪಿಯು ಬೋರ್ಡ್ ಮಾಡಿದ ಎಡವಟ್ಟಿನಿಂದ ಆದ ಅನ್ಯಾಯದ ಬಗ್ಗೆ ಶಿಕ್ಷಣ ಸಚಿವ ಸುರೇಶ್​ಕುಮಾರ್​ ವಿಷಾದ ವ್ಯಕ್ತಪಡಿಸಿದ್ದಾರೆ. ‌ಇಲಾಖೆಯು ಕರ್ತವ್ಯಚ್ಯುತಿಯ ಕಾರಣದಿಂದ ತಲೆತಗ್ಗಿಸುವಂತಾಗಿದೆ. ಮರು ಎಣಿಕೆಯಲ್ಲಿ‌ ಏಕೆ ಕಡಿಮೆ ಅಂಕ ನೀಡಲಾಯಿತು? ಈ ವ್ಯವಸ್ಥೆಯಲ್ಲಿ ಈ ರೀತಿ ಲೋಪಗಳಾಗಲು ಇರಬಹುದಾದ ಕಾರಣಗಳೇನು? ಕೂಡಲೇ ಈ ಕುರಿತು ತನಿಖೆ ನಡೆಸಿ, ತಪ್ಪಿತಸ್ಥರ ಬಗ್ಗೆ ಕ್ರಮ ತೆಗೆದುಕೊಳ್ಳಬೇಕಾದ ಅವಶ್ಯಕತೆ ಇದೆ.‌ ಈ ಪ್ರಕರಣದಲ್ಲಿ ಜವಾಬ್ದಾರಿ ನಿರ್ವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿಯ ವಿವರದೊಂದಿಗೆ ಎರಡು ದಿನಗಳಲ್ಲಿ ಸಂಪೂರ್ಣ ವರದಿ ನೀಡಬೇಕೆಂದು ಸಚಿವರು ಪಿಯು ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.