ETV Bharat / state

ನಿರಂತರ ಬೆಳಗದ ಜ್ಯೋತಿ: ಮೆಸ್ಕಾಂನಿಂದ ವಿದ್ಯುತ್​ ಕಣ್ಣಾಮುಚ್ಚಾಲೆ ಆಟ

ನಿರಂತರ ಜ್ಯೋತಿ ವೈಫಲ್ಯ ಮತ್ತು ರೈತರಿಗೆ ಸರಿಯಾಗಿ ವಿದ್ಯುತ್ ನೀಡದಿರುವುದನ್ನು ಖಂಡಿಸಿ ರೈತರು ಹಲವು ಪ್ರತಿಭಟನೆ ನಡೆಸಿದ್ದಾರೆ. ಆದರೆ ಅಧಿಕಾರಿಗಳು ನೀಡಿದ್ದ ಭರವಸೆಯ ಮಾತುಗಳು ಕಾರ್ಯರೂಪಕ್ಕೆ ಬರುತ್ತಿಲ್ಲ.

power supply
ಮೆಸ್ಕಾಂನಿಂದ ವಿದ್ಯುತ್​ ಕಣ್ಣಾಮುಚ್ಚಾಲೆ ಆಟ
author img

By

Published : Dec 28, 2020, 9:26 PM IST

ಶಿವಮೊಗ್ಗ: ಜಿಲ್ಲೆಯಲ್ಲಿ 'ನಿರಂತರ ಜ್ಯೋತಿ' ಯೋಜನೆಯಡಿ ವಿದ್ಯುತ್ ನಿರಂತರ ಬೆಳಗುತ್ತಿಲ್ಲ. ಯೋಜನೆಯಡಿ ವಾರದ 24 ಗಂಟೆಯೂ ವಿದ್ಯುತ್ ಪೂರೈಸಬೇಕಿದೆ. ಆದರೆ ಹಗಲಲ್ಲಿ 4 ಗಂಟೆ ಮಾತ್ರ ವಿದ್ಯುತ್ ನೀಡಲಾಗುತ್ತಿದೆ. ರೈತರಿಗೆ ಇದು ದೊಡ್ಡತಲೆನೋವಾಗಿ ಪರಿಣಮಿಸಿದೆ.

ಪ್ರತಿದಿನ ಮಧ್ಯಾಹ್ನ 2 ಗಂಟೆಗೆ ವಿದ್ಯುತ್ ಬಂದರೆ, ಮತ್ತೆ ಸಂಜೆ 6 ಗಂಟೆಗೆ ಬಂದ್ ಆಗುತ್ತದೆ. ಬೆಳಗಿನ ಜಾವ ಒಂದೆರಡು ಗಂಟೆ ನೀಡಲಾಗುತ್ತದೆ. ಈ ಸಮಯದಲ್ಲಿ ರೈತ ಜಮೀನಿಗೆ ಬೆಳೆಗಳಿಗೆ ನೀರು ಹರಿಸುವ ಪರಿಸ್ಥಿತಿ ಇದೆ. ಹೀಗಾಗಿ ಬೆಳಗ್ಗೆ 10ರಿಂದ ಸಂಜೆ 4ಗಂಟೆ ತನಕ ವಿದ್ಯುತ್ ನೀಡಬೇಕು ಎಂಬುದು ರೈತರ ಬೇಡಿಕೆಯಾಗಿದೆ.

ಇದನ್ನೂ ಓದಿ...ಶಿವಮೊಗ್ಗ: ವಿದ್ಯುತ್ ತಂತಿ ತಗುಲಿ ಹುಲ್ಲು ತುಂಬಿದ್ದ ಲಾರಿಗೆ ಬೆಂಕಿ

ಸರ್ಕಾರ ಉಚಿತ ವಿದ್ಯುತ್ ನೀಡುವುದಾಗಿ ಹೇಳುತ್ತದೆ. ಆದರೆ ವಿದ್ಯುತ್ ಸರಿಯಾಗಿ ನೀಡದೆ ಸರ್ಕಾರ ಚೆಲ್ಲಾಟವಾಡುತ್ತಿದೆ. ತೋಟ ಹಾಗೂ ಗದ್ದೆಗಳಲ್ಲಿ ವಿಷ ಜಂತುಗಳ ಕಾಟ ಹೆಚ್ಚಿದೆ. ರಾತ್ರಿ ವೇಳೆ ವಿದ್ಯುತ್ ನೀಡಿದರೆ ರೈತರಿಗೆ ತುಂಬಾ ತೊಂದರೆಯಾಗಲಿದೆ. ಇತ್ತ ವಿದ್ಯುತ್​ ಏರುಪೇರಿನಿಂದ ಪಂಪ್​ಸೆಟ್​​ಗಳು ಸುಟ್ಟು ಹೋಗುತ್ತಿವೆ. ಹೀಗಾಗಿ ಸರಿಯಾದ ಪ್ರಮಾಣದಲ್ಲಿ ವಿದ್ಯುತ್​ ನೀಡಬೇಕಿದೆ.

ಮೆಸ್ಕಾಂನಿಂದ ವಿದ್ಯುತ್​ ಕಣ್ಣಾಮುಚ್ಚಾಲೆ ಆಟ

ವಿದ್ಯುತ್​ ಪೂರೈಕೆ ವೈಫಲ್ಯದಿಂದ ಬೆಳೆಗಳಿಗೆ ಸರಿಯಾಗಿ ನೀರುಣಿಸಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಕೈಗೆ ಬಂದ ಬೆಳೆಗಳನ್ನು ಕಳೆದುಕೊಳ್ಳುವ ಪರಿಸ್ಥಿತಿ ಇದೆ. ಹೆಸರಿಗೇನೋ ನಿರಂತರ ವಿದ್ಯುತ್ ಪೂರೈಕೆ ಎಂದಿದೆ. ಆದರೆ, ಅದು ಕೇವಲ ಹೆಸರಿಗಷ್ಟೇ. ಯೋಜನೆ ಸಮರ್ಪಕವಾಗಿ ಜಾರಿಗೊಂಡಿದ್ದರೆ ರೈತರಿಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ರೈತ ಪ್ರಸನ್ನ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.