ಶಿವಮೊಗ್ಗ: ಜಿಲ್ಲೆಯಲ್ಲಿಂದು ಮತ್ತೊಂದು ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 107ಕ್ಕೆ ಏರಿಕೆಯಾಗಿದೆ.
P-8063 42 ವರ್ಷದ ವ್ಯಕ್ತಿಯಲ್ಲಿ ವಿಪರೀತ ಶೀತ, ಜ್ವರ ಹಾಗೂ ಕೆಮ್ಮ ಕಂಡುಬಂದ ಹಿನ್ನಲೆ, ಅವರನ್ನು ಜಿಲ್ಲೆಯ ಕೋವಿಡ್ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಂದು ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ವ್ಯಕ್ತಿ ಹೊಸನಗರ ತಾಲೂಕಿನವರಾಗಿದ್ದು, ಮಹಾರಾಷ್ಟ್ರದಿಂದ ವಾಪಸ್ ಆಗಿದ್ದಾರೆ ಎನ್ನಲಾಗಿದೆ.
ಇಂದಿನ ಪ್ರಕರಣವೂ ಸೇರಿ ಜಿಲ್ಲೆಯಲ್ಲಿ 107 ಸೋಂಕು ಪ್ರಕರಣ ದಾಖಲಾಗಿವೆ. ಈವರೆಗೆ 68 ಜನ ಬಿಡುಗಡೆಯಾಗಿದ್ದು, ಉಳಿದವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.