ETV Bharat / state

ಸಿಎಂ ತವರು ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಸಾಮಾನ್ಯ ಹೆರಿಗೆಗೆ ಒತ್ತು - ಶಿವಮೊಗ್ಗ ಸಾಮಾನ್ಯ ಹೆರಿಗೆ ನ್ಯೂಸ್

ಶಿವಮೊಗ್ಗ ಜಿಲ್ಲೆಯ ಖಾಸಗಿ ಆಸ್ಪತ್ರೆಗಳಿಗೆ ಹೋಲಿಕೆ ಮಾಡಿದ್ರೆ, ಸರ್ಕಾರಿ ಆಸ್ಪತ್ರೆಯಲ್ಲೇ ನಾರ್ಮಲ್‌ ಡೆಲಿವರಿ ಹೆಚ್ಚಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಬಡವರು, ಮಧ್ಯಮ ವರ್ಗದವರೇ ಹೆಚ್ಚು‌ ಚಿಕಿತ್ಸೆಗೆ ಆಗಮಿಸುತ್ತಾರೆ. ಇಲ್ಲಿ ವೈದ್ಯರು ಹೆಚ್ಚಾಗಿ ಸಹಜ ಹೆರಿಗೆಗೆ ಒತ್ತು ನೀಡುತ್ತಾರೆ. ಅದೇ ಖಾಸಗಿ ಆಸ್ಪತ್ರೆಗೆ ಹೋದ್ರೆ ಅಲ್ಲಿ ಸಿಸೇರಿಯನ್ ‌ಡೆಲಿವರಿಗೆ ಆದ್ಯತೆ ನೀಡಲಾಗುತ್ತದೆ ಎಂಬ ಮಾತುಗಳು ಕೇಳಿಬಂದಿವೆ.‌

normal delivery's  is more than caesarian at shimogga
ಸಿಎಂ ತವರು ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಸಾಮಾನ್ಯ ಹೆರಿಗೆಗೆ ಒತ್ತು
author img

By

Published : Mar 3, 2021, 6:48 PM IST

ಶಿವಮೊಗ್ಗ: ತಾಯ್ತನ ಒಂದು ಅದ್ಭುತ ಅನುಭವ. ವೈದ್ಯಕೀಯ ಕ್ಷೇತ್ರದಲ್ಲಿ ನಡೆಯುತ್ತಿರುವ ಆವಿಷ್ಕಾರಗಳಿಂದ ಇಂದು ಸಿ-ಸೆಕ್ಷನ್​​ ಪ್ರಸವ ಪ್ರಕ್ರಿಯೆಗೆ ಜನರು ಮೊರೆ ಹೋಗುತ್ತಿದ್ದಾರೆ. ಸಾಮಾನ್ಯ ಹೆರಿಗೆಗೆ ಅವಕಾಶಗಳಿದ್ದರೂ ಕೂಡ ಅನೇಕ ಕಡೆಗಳಲ್ಲಿ ಸಿಸೇರಿಯನ್​ ಪ್ರಸವಕ್ಕೆ ಆದ್ಯತೆ ಕೊಡುತ್ತಿದ್ದಾರೆ. ಹೆಚ್ಚು ಹಣ ಗಳಿಸಬೇಕೆಂದು ಕೆಲ ವೈದ್ಯರು ಸಿಸೇರಿಯನ್ ಹೆರಿಗೆ ಮಾಡಿಸುತ್ತಾರೆಂದು ಹಲವರು ಆರೋಪಿಸಿದ್ರೆ, ನೋವು ತಾಳಲಾರದೆ ಗರ್ಭಿಣಿಯರೇ ಸಿಸೇರಿಯನ್ ಮೊರೆ ಹೋಗುತ್ತಾರೆಂಬುದು ಹಲವರ ವಾದ. ಸಿಎಂ ತವರು ಜಿಲ್ಲೆಯಲ್ಲಿ ಪರಿಸ್ಥಿತಿ ಹೇಗಿದೆ ಎಂಬುದನ್ನು ನೋಡುವುದಾದರೆ...

ಭಾರತದಲ್ಲಿ ಈ ಹಿಂದೆ ಹೆಚ್ಚಾಗಿ ಸಾಂಪ್ರದಾಯಿಕ, ಸಾಮಾನ್ಯ ಹೆರಿಗೆಯನ್ನೇ ನಡೆಸಲಾಗುತ್ತಿತ್ತು. ಆದರೆ ಆರೋಗ್ಯ ಕ್ಷೇತ್ರದಲ್ಲಿ ಆಗಿರುವ ಬೆಳವಣಿಗೆಯಿಂದ ಸದ್ಯ ಸಿಸೇರಿಯನ್​ಗೆ ಪ್ರಾಮುಖ್ಯತೆ ಕೊಡಲಾಗುತ್ತಿದೆ. ಸಿಸೇರಿಯನ್ ಹೆರಿಗೆಯಿಂದ ಯಾವುದೇ ತೊಂದರೆಯಾಗುವುದಿಲ್ಲ ಎನ್ನುವ ನಂಬಿಕೆ ಜೊತೆಗೆ ನೋವು ತಾಳಲಾರದ ಮನಸ್ಥಿತಿ ಕೂಡ ಇದೆ. ಹೀಗೆ ಒಂದಿಷ್ಟು ಅಂಶಗಳು ಸಿಸೇರಿಯನ್ ಹೆರಿಗೆಗೆ ಪುಷ್ಠಿ ನೀಡುತ್ತಿವೆ.

ಆದ್ರೆ ಸಿಎಂ ತವರು ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರ ಸಾಮಾನ್ಯ ಹೆರಿಗೆಗಳೇ ಹೆಚ್ಚಾಗಿ ಆಗುತ್ತಿದೆ. ಶಿವಮೊಗ್ಗ ಜಿಲ್ಲೆಯ ಖಾಸಗಿ ಆಸ್ಪತ್ರೆಗಳಿಗೆ ಹೋಲಿಕೆ ಮಾಡಿದ್ರೆ, ಸರ್ಕಾರಿ ಆಸ್ಪತ್ರೆಯಲ್ಲೇ ನಾರ್ಮಲ್‌ ಡೆಲಿವರಿ ನಡೆಯುತ್ತಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಬಡವರು, ಮಧ್ಯಮ ವರ್ಗದವರೇ ಹೆಚ್ಚಾಗಿ‌ ಚಿಕಿತ್ಸೆಗೆ ಆಗಮಿಸುತ್ತಾರೆ. ಇಲ್ಲಿ ವೈದ್ಯರು ಹೆಚ್ಚಾಗಿ ಸಹಜ ಹೆರಿಗೆಗೆ ಒಲವು ತೋರಿಸುತ್ತಾರೆ. ಅದೇ ಖಾಸಗಿ ಆಸ್ಪತ್ರೆಗೆ ಹೋದ್ರೆ ಅಲ್ಲಿ ಸಿಸೇರಿಯನ್ ‌ಡೆಲಿವರಿಗೆ ಹೆಚ್ಚು ಆದ್ಯತೆ ನೀಡಲಾಗುತ್ತದೆ ಎಂಬ ಮಾತುಗಳು ಕೇಳಿಬಂದಿದೆ.‌

ಇದನ್ನೂ ಓದಿ: ಆಶಾದಾಯಕ: ರಾಜ್ಯದಲ್ಲಿ ಸಿಸೇರಿಯನ್​ಗಿಂತ​ ಸಾಮಾನ್ಯ ಹೆರಿಗೆ ಪ್ರಮಾಣವೇ ಹೆಚ್ಚು!

ಕಳೆದ ಒಂದು ವರ್ಷದಲ್ಲಾದ ಹೆರಿಗೆ ವಿವರ:

ಒಟ್ಟು ಹೆರಿಗೆ - 19,602

ಸರ್ಕಾರಿ ಆಸ್ಪತ್ರೆ: 8,295 ಸಾಮಾನ್ಯ ಹೆರಿಗೆ ಮತ್ತು 6,088 ಸಿಸೇರಿಯನ್ ಹೆರಿಗೆ - ಒಟ್ಟು 14,383 ಹೆರಿಗೆಗಳು ವರದಿ.

ಖಾಸಗಿ ಆಸ್ಪತ್ರೆ: 2,327 ಸಾಮಾನ್ಯ ಹೆರಿಗೆ ಮತ್ತು 2.892 ಸಿಸೇರಿಯನ್ ಹೆರಿಗೆ‌- ಒಟ್ಟು 5,219 ಹೆರಿಗೆಗಳು ವರದಿ ಆಗಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.