ETV Bharat / state

ಜಾತಿಯ ವಿಷಬೀಜ ಕಿತ್ತೊಗೆಯುವ ಸಮಯ ಬಂದಿದೆ : ಕೆ ಎಸ್ ಈಶ್ವರಪ್ಪ - ಸಂಸದ ಬಿ ವೈ ರಾಘವೇಂದ್ರ

ಶಿವಮೊಗ್ಗದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಜಯಂತ್ಯುತ್ಸವ- ಭಾರತ ವಿಶ್ವಗುರು ಆಗುವತ್ತ ದಿಟ್ಟಹೆಜ್ಜೆ-ರಾಜ್ಯ ಸರ್ಕಾರ ಹಿಂದುಳಿದವರ ಅಭಿವೃದ್ಧಿಗೆ ಬದ್ಧ ಎಂದ ಈಶ್ವರಪ್ಪ

nijasharana Ambigara Choudayya Jayanti celebrate
ಶಿವಮೊಗ್ಗದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಜಯಂತ್ಯುತ್ಸವ
author img

By

Published : Jan 21, 2023, 8:16 PM IST

ಶಿವಮೊಗ್ಗದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಜಯಂತ್ಯುತ್ಸವ

ಶಿವಮೊಗ್ಗ: ಜಾತಿಯ ವಿಷ ಬೀಜ ಬಿತ್ತುವವರನ್ನು ಕಿತ್ತೊಗೆಯುವ ಸಮಯ ಬಂದಿದ್ದು, ನಾವೆಲ್ಲ ಒಂದೇ ಎನ್ನುವ ಮಹಾಪುರಷರ ಮಾರ್ಗದರ್ಶನದಲ್ಲಿ ನಡೆಯಬೇಕಿದೆ ಎಂದು ಶಾಸಕರಾದ ಕೆ.ಎಸ್.ಈಶ್ವರಪ್ಪ ಸಲಹೆ ನೀಡಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದ ಅಂಕು ಡೊಂಕು ತಿದ್ದಿದ್ದ ಚೌಡಯ್ಯ: ನಿಜಶರಣ ಅಂಬಿಗರ ಚೌಡಯ್ಯ ಈ ನಾಡು ಕಂಡ ಅಪರೂಪದ ಮಹಾನ್ ಪುರುಷ. ನಮ್ಮಲ್ಲಿ ಹಿರಿಮೆ ಇರಬೇಕು, ಕೀಳರಿಮೆ ಅಲ್ಲ ಎಂದು ತೋರಿದವರು. ಅನುಭವ ಮಂಟಪದಲ್ಲಿ ಯಾವುದೇ ಮುಲಾಜಿಲ್ಲದೇ ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ನಿಜವಾದ ಧ್ವನಿಯಾಗಿದ್ದ ಅವರನ್ನು ಬಸವಣ್ಣನವರು ನಿಜಶರಣ ಎಂದು ಕರೆದಿದ್ದರು. ಹಿಂದೆ ಭಾರತ ವಿಶ್ವಗುರು ಆಗಿತ್ತು. ನಡುವಿನಲ್ಲಿ ಬಡ ರಾಷ್ಟ್ರವಾಗಿತ್ತು, ಇದೀಗ ಮತ್ತೆ ಇಂಥ ಮಹಾನ್ ಪುರುಷರ ಪರಿಶ್ರಮದಿಂದಾಗಿ ವಿಶ್ವಗುರುವಾಗುವ ನಿಟ್ಟಿನಲ್ಲಿ ಮುನ್ನಡೆಯುತ್ತಿದೆ. ರಾಷ್ಟ್ರ ಸಬಲವಾಗುತ್ತಿದೆ. ರಾಜ್ಯ ಸರ್ಕಾರ ಹಿಂದುಳಿದವರ ಅಭಿವೃದ್ಧಿಗೆ ಬದ್ಧವಾಗಿದ್ದು, ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದರು.

ಶಿವಮೊಗ್ಗದಲ್ಲಿ ಸಮಾಜದ ಏಳ್ಗೆಗಾಗಿ ದುಡಿದ ಗೌರವಾನ್ವಿತ ವ್ಯಕ್ತಿತ್ವದ ಗಾಂಧಿ ಬಸಪ್ಪನವರ ಹೆಸರನ್ನು ಸರ್ಕಲ್ ಮತ್ತು ರಸ್ತೆಗೆ ಇಡಲು ಸರ್ಕಾರ ನಿರ್ಧರಿಸಿದ್ದು, ಫೆ.08 ರಂದು ಮುಖ್ಯಮಂತ್ರಿಗಳು ನಾಮಕರಣ ಮಾಡಲಿದ್ದಾರೆ ಎಂದು ಇದೇ ವೇಳೆ ತಿಳಿಸಿದರು.

ಸಂಸದ ಬಿ ವೈ ರಾಘವೇಂದ್ರ ಮಾತನಾಡಿ, 12 ನೇ ಶತಮಾನದ ಬಸವಣ್ಣನವರ ಸಾಮಾಜಿಕ ಕ್ರಾಂತಿಗೆ ಬೆನ್ನೆಲುಬಾಗಿ ನಿಂತವರಲ್ಲಿ ಅಂಬಿಗರ ಚೌಡಯ್ಯ ಸಹ ಅಗ್ರಗಣ್ಯರು. ಲೋಕ ಕಲ್ಯಾಣಕ್ಕಾಗಿ ಸ್ವಂತ ಒಡೆತನದ ಭೂಮಿಯನ್ನು ದಾನ ಮಾಡಿದ ಮಹಾನ್ ಶರಣರು ಇವರಾಗಿದ್ದರು. ಸಾಮಾಜಿಕವಾದ ಅನೇಕ ವಿರೋಧಗಳ ನಡುವೆಯೂ ವಚನ ಸಾಹಿತ್ಯದ ಮೂಲಕ ಸುಧಾರಣೆ ತಂದವರು. ದೋಣಿಗೆ ಹುಟ್ಟು ಹಾಕುವ ಮೂಲಕ ನಂಬಿದವರಿಗೆ ದಡ ಸೇರಿಸುವ ಮಹಾನ್ ಕಾಯಕಯೋಗಿ ಎಂದು ಬಣ್ಣಿಸಿದರು.

ಅಕ್ಕಮಹಾದೇವಿ 75 ಅಡಿಗಿಂತ ಎತ್ತರದ ಪುತ್ಥಳಿ ನಿರ್ಮಾಣ : ಅಕ್ಕಮಹಾದೇವಿ ಜನ್ಮಸ್ಥಳವಾದ ಶಿಕಾರಿಪುರದಲ್ಲಿ ಅಕ್ಷರಧಾಮದ ರೀತಿಯಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ. ನಾಡಿನ 30 ಶರಣರ ಪುತ್ಥಳಿಗಳನ್ನು ಅನಾವರಣ ಮಾಡಲಾಗುತ್ತಿದೆ. ಅದರಲ್ಲಿ ಅಂಬಿಗರ ಚೌಡಯ್ಯನವರ ಪುತ್ಥಳಿ ಸಹ ಇದ್ದು 12 ನೇ ಶತಮಾನದ ಮಹಿಳಾ ಧ್ವನಿಯಾದ ಅಕ್ಕಮಹಾದೇವಿಯವರ ಸುಮಾರು 75 ಅಡಿಗಿಂತ ಎತ್ತರದ ಪುತ್ಥಳಿಯನ್ನು ಅನಾವರಣ ಮಾಡಲಾಗುತ್ತಿದೆ ಎಂದರು.

ಕುವೆಂಪು ವಿಶ್ವವಿದ್ಯಾಲಯದ ಸಸ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರು ಹಾಗೂ ಉಪ ಕುಲಸಚಿವ ಡಾ. ಶ್ರೀಶೈಲ ಸಿ ಹರಕಂಚಿ ಅವರು ಅಂಬಿಗರ ಚೌಡಯ್ಯ ಕುರಿತು ವಿಶೇಷ ಉಪನ್ಯಾಸ ನೀಡಿದರು. ಜಿಲ್ಲಾ ಗಂಗಾಮತಸ್ಥ ಸಮಾಜದ ಅಧ್ಯಕ್ಷ ಡಿ.ಬಿ.ಕೆಂಚಪ್ಪ, ಜಿಲ್ಲಾ ಮೊಗವೀರರ ಸಂಘದ ಅಧ್ಯಕ್ಷ ಅಣ್ಣಪ್ಪ, ತಾಲ್ಲೂಕು ಗಂಗಾಮತಸ್ಥ ಸಮಾಜದ ಅಧ್ಯಕ್ಷ ಸತೀಶ್ ಗಾಂಧಿ ಬಸಪ್ಪ, ಅಪರ ಜಿಲ್ಲಾಧಿಕರಿ ಡಾ.ನಾಗೇಂದ್ರ ಎಫ್.ಹೊನ್ನಳ್ಳಿ, ಜಿ.ಪಂ ಯೋಜನಾ ನಿರ್ದೇಶಕಿ ನಂದಿನಿ, ಆಹಾರ ಇಲಾಖೆ ಜಂಟಿ ನಿರ್ದೇಶಕ ಅವಿನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಹೆಚ್ ಇತರರು ಹಾಜರಿದ್ದರು.

ಇದನ್ನೂಓದಿ:ಅಡಿಕೆ ಕ್ಯಾನ್ಸರ್​ಕಾರಕ ಅಲ್ಲ, ಸಂಶೋಧನಾ ವರದಿ ಸಕಾಲದಲ್ಲಿ ನ್ಯಾಯಾಲಯಕ್ಕೆ ಸಲ್ಲಿಕೆ: ಕ್ಯಾಂಪ್ಕೋ ಅಧ್ಯಕ್ಷ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.