ETV Bharat / state

ಶಿವಮೊಗ್ಗದಿಂದ ವಿವಿಧೆಡೆ ವಿಮಾನ ಸಂಚಾರ ಆರಂಭಕ್ಕೆ ಕೇಂದ್ರ ಸಚಿವರಿಗೆ ಸಂಸದರ ಮನವಿ - ಸಂಸದ ಬಿವೈ ರಾಘವೇಂದ್ರ ಕೇಂದ್ರ ನಾಗರಿಕ ವಿಮಾನಯಾನ ಖಾತೆ ಸಚಿವ ಜ್ಯೋತಿರಾಧಿತ್ಯ ಸಿಂಧ್ಯಾ ಭೇಟಿ

ಶಿವಮೊಗ್ಗ ವಿಮಾನ ನಿಲ್ದಾಣದ ವಿಚಾರ ಕುರಿತಂತೆ ಸಂಸದ ಬಿ.ವೈ. ರಾಘವೇಂದ್ರ, ಕೇಂದ್ರ ನಾಗರಿಕ ವಿಮಾನಯಾನ ಸಿಂಧ್ಯಾ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.

mp-by-raghavendra-meets-union-civil-aviation-minister-jyotiraditya-scindia
ಶಿವಮೊಗ್ಗದಿಂದ ವಿವಿಧೆಡೆ ವಿಮಾನ ಸಂಚಾರ ಆರಂಭಕ್ಕೆ ಕೇಂದ್ರ ಸಚಿವರಿಗೆ ಸಂಸದರ ಮನವಿ
author img

By

Published : Feb 11, 2022, 9:23 PM IST

ಶಿವಮೊಗ್ಗ: ಶೀಘ್ರದಲ್ಲಿ ಆರಂಭಗೊಳ್ಳಲಿರುವ ಸೋಗಾನೆ ವಿಮಾನ ನಿಲ್ದಾಣ ಲೋಕಾರ್ಪಣೆಗೊಳಿಸುವ ಮುನ್ನ ಶಿವಮೊಗ್ಗದಿಂದ ದೇಶದ ವಿವಿಧ ಸ್ಥಳಗಳಿಗೆ ವಿಮಾನ ಸಂಚಾರಕ್ಕೆ ಅನುಕೂಲವಾಗುವಂತೆ ಕೂಡಲೇ ಟೆಂಡರ್ ಪ್ರಕ್ರಿಯೆ ಆರಂಭಗೊಳಿಸುವಂತೆ ಸಂಸದ ಬಿ.ವೈ.ರಾಘವೇಂದ್ರ ಅವರು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾಧಿತ್ಯ ಸಿಂಧ್ಯಾ ಅವರಿಗೆ ಮನವಿ ಮಾಡಿದ್ದಾರೆ.

ನವದೆಹಲಿಯಲ್ಲಿ ಸಿಂಧ್ಯಾ ಅವರನ್ನು ಭೇಟಿ ಮಾಡಿ ಸಂಸದರು ಮನವಿ ಸಲ್ಲಿಸಿದ್ದಾರೆ. ಶಿವಮೊಗ್ಗ ವಿಮಾನ ನಿಲ್ದಾಣವು ಸದ್ಯದಲ್ಲೇ ಲೋಕಾರ್ಪಣೆಗೊಳ್ಳಲಿದೆ. ಇದು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಕ ರಾಜ್ಯದ ಎರಡನೇ ಅತಿ ಉದ್ದವಿರುವ ರನ್‍ವೇ ಹೊಂದಿದೆ. ಶಿವಮೊಗ್ಗ ಜಿಲ್ಲೆಯು ಕರ್ನಾಟಕದ ಮಧ್ಯ ಭಾಗದಲ್ಲಿರುವುದರಿಂದ ಮಲ್ಟಿ ಡಿಸಿಪ್ಲಿನರಿ ಟೀಂ (Multi Disciplinary Team) ಕಳುಹಿಸಿ ಕೊಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಎಲೆಕ್ಟ್ರಿಕಲ್​ ಇಕ್ವಿಪ್​ಮೆಂಟ್​ ಫಂಡಿಂಗ್​ (Electrical Equipment Funding) ಮತ್ತು RCS UDAN-4.2 ಯೋಜನೆ ಅಡಿ ಶಿವಮೊಗ್ಗ ಜಿಲ್ಲೆ ಹಾಗೂ ನೆರೆಯ ಜಿಲ್ಲೆಗಳ ಜನರಿಗೆ ದೇಶದ ಮಹಾನಗರಗಳಿಗೆ ಸಂಚರಿಸಲು ಅನುಕೂಲತೆ ಒದಗಿಸಬೇಕು. ವ್ಯಾಪಾರ ಹಾಗೂ ಪ್ರವಾಸೋದ್ಯಮದ ಉತ್ತೇಜನಕ್ಕೆ ಶಿವಮೊಗ್ಗದಿಂದ ದೇಶದ 11 ಪ್ರಮುಖ ನಗರಗಳ ವಿಮಾನ ನಿಲ್ದಾಣಗಳಿಗೆ ಜೋಡಣೆ ಮಾಡುವ ಮುಂಬಯಿ - ಶಿವಮೊಗ್ಗ - ಮುಂಬಯಿ, ಮುಂಬಯಿ - ಶಿವಮೊಗ್ಗ - ಮಂಗಳೂರು, ಮುಂಬಯಿ - ಶಿವಮೊಗ್ಗ - ಚೆನ್ನೈ, ಮುಂಬಯಿ - ಶಿವಮೊಗ್ಗ- ತಿರುಪತಿ, ಶಿವಮೊಗ್ಗ - ಕಲಬುರಗಿ - ಹೈದ್ರಾಬಾದ್, ಶಿವಮೊಗ್ಗ - ಕಲಬುರಗಿ - ದೆಹಲಿ, ಬೆಂಗಳೂರು - ಶಿವಮೊಗ್ಗ- ಬೆಳಗಾವಿ, ಬೆಂಗಳೂರು - ಶಿವಮೊಗ್ಗ - ದೆಹಲಿ ಮತ್ತು ಬೆಂಗಳೂರು - ಶಿವಮೊಗ್ಗ - ಗೋವಾ ಹಾಗೂ ಹೈದರಾಬಾದ್ - ಶಿವಮೊಗ್ಗ - ಕೊಚಿನ್ ಮಾರ್ಗಗಳ ವಿಮಾನ ಸಂಚಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಬಿ.ವೈ. ರಾಘವೇಂದ್ರ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಬೆಳಗಾವಿ: ಇಬ್ಬರು ಮಕ್ಕಳೊಂದಿಗೆ ಕೆರೆಗೆ ಹಾರಿ ಮಹಿಳೆ ಆತ್ಮಹತ್ಯೆ.. ಕಾರಣ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.